For Quick Alerts
  ALLOW NOTIFICATIONS  
  For Daily Alerts

  ಲಸಿಕೆ ಪಡೆಯುವುದಕ್ಕೂ ಮುಂಚೆ ರಕ್ತದಾನ ಮಾಡಿದ ತರುಣ್ ಸುಧೀರ್

  |

  ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಈಗಾಗಲೇ ಹಲವರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. ಇದೀಗ, ಖ್ಯಾತ ನಿರ್ದೇಶಕ ತರುಣ್ ಸುಧೀರ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಅದಕ್ಕು ಮುಂಚೆ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

  ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಿರ್ದೇಶಕ ''ರಕ್ತದಾನ ಬೇರೆಯವರ ಜೀವ ಉಳಿಸುವುದು, ಲಸಿಕೆ ನಮ್ಮ ಜೀವ ಉಳಿಸುತ್ತದೆ'' ಎಂದು ಹೇಳಿದ್ದಾರೆ.

  ಕೊರೊನಾ ವಿರುದ್ಧ ಹೋರಾಟಕ್ಕೆ ನಟ ಚಿಯಾನ್ ವಿಕ್ರಮ್ ನೆರವುಕೊರೊನಾ ವಿರುದ್ಧ ಹೋರಾಟಕ್ಕೆ ನಟ ಚಿಯಾನ್ ವಿಕ್ರಮ್ ನೆರವು

  ಜೊತೆಗೆ 'ರಕ್ತದಾನ ಮಹಾದಾನ' ವಿನಂತಿ ಮಾಡುವ ಮೂಲಕ ತರುಣ್ ಸುಧೀರ್ ಇತರರಿಗೆ ಮಾದರಿಯಾಗಿದ್ದಾರೆ. ಈ ಮುಂಚೆ ನಟ ವಸಿಷ್ಠ ಸಿಂಹ ಅವರು ಸಹ ಕೋವಿಡ್ ಲಸಿಕೆ ಪಡೆಯುವುದಕ್ಕೂ ಮೊದಲು ರಕ್ತದಾನ ಮಾಡಿ ಜಾಗೃತಿ ಮೂಡಿಸಿದ್ದರು.

  ಕೋವಿಡ್ ವ್ಯಾಕ್ಸಿನ್ ಪಡೆದ ಆರು ತಿಂಗಳವರೆಗೂ ರಕ್ತದಾನ ಮಾಡುವಂತಿಲ್ಲ. ಹಾಗಾಗಿ, ಲಸಿಕೆ ಪಡೆಯುವುದಕ್ಕೂ ಮೊದಲೇ ರಕ್ತದಾನ ಮಾಡಿ ಕೊರೊನಾ ಪರಿಸ್ಥಿತಿಯಲ್ಲಿ ಎದುರಾಗಬಹುದಾದ ರಕ್ತದ ಅಭಾವ ನೀಗಿಸಲು ಇದು ಸಹಕಾರಿಯಾಗಲಿದೆ.

  ದ್ವಿಪಾತ್ರದಲ್ಲಿ ಪ್ರಭಾಸ್, ಸಲಾರ್ ಉಗ್ರಂ ರಿಮೇಕ್ ಅಲ್ವಾ..? | Filmibeat Kannada

  'ಮದಗಜ' ಚಿತ್ರದ ನಾಯಕ ಶ್ರೀಮುರಳಿ, ನಟಿ ಆಶಿಕಾ ರಂಗನಾಥ್, ನಿರ್ದೇಶಕ ಮಹೇಶ್ ಕುಮಾರ್ ಕೋವಿಡ್ ಲಸಿಕೆ ಪಡೆದಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ನಟಿ ರಮ್ಯಾಕೃಷ್ಣ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಹಲವು ಸಿನಿಮಾ ಕಲಾವಿದರು ಲಸಿಕೆ ಹಾಕಿಸಿಕೊಂಡಿದ್ದಾರೆ.

  English summary
  Director Tharun Sudhir donates blood before taking Covid-19 vaccine; shares photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X