twitter
    For Quick Alerts
    ALLOW NOTIFICATIONS  
    For Daily Alerts

    Exclusive : ಸುದೀಪ್, ರಕ್ಷಿತ್ ವಿವಾದದ ಬಗ್ಗೆ ಕ್ಲಾರಿಟಿ ನೀಡಿದ ತರುಣ್

    |

    Recommended Video

    Avane Srimannarayana Movie: ಆ ಒಂದು ಟ್ವೀಟ್ ಸಿಕ್ಕಾಪಟ್ಟೆ ವಿವಾದ ಮಾಡಿತ್ತು..

    ತರುಣ್ ಸುಧೀರ್ ತಾನಾಯ್ತು.. ತನ್ನ ಸಿನಿಮಾಗಳ ಕೆಲಸಗಳಾಯ್ತು.. ಅಂತ ಇರುವ ನಿರ್ದೇಶಕ. ಇದುವರೆಗೆ ತರುಣ್ ಸುಧೀರ್ ಬಗ್ಗೆ ಯಾವುದೇ ವಿವಾದ ಆಗಿಲ್ಲ. ಗೂಗಲ್ ಮಾಡಿ ನೋಡಿದರೂ ಅವರ ಬಗ್ಗೆ ಒಂದೇ ಒಂದು ಕಾಂಟ್ರವರ್ಸಿ ಕೂಡ ಸಿಗುವುದಿಲ್ಲ.

    ಆದರೆ, ಇಷ್ಟೊಂದು ಸೈಲೆಂಟ್ ಆಗಿರುವ ನಿರ್ದೇಶಕನ ಮೇಲೆಯೂ ಕೆಲ ದಿನಗಳ ಹಿಂದೆ ಒಂದು ವಿವಾದ ಶುರು ಆಗಿತ್ತು. ಎರಡು ಸಿಂಪಲ್ ವಿಷಯಗಳು ದೊಡ್ಡ ಸುದ್ದಿಯಾಗಲು ಪ್ರಾರಂಭವಾಗಿತ್ತು.

    ಸುದೀಪ್ ಜೊತೆಗೆ ಒಳ್ಳೆಯ ಒಡನಾಟ ಹೊಂದಿದ್ದ ತರುಣ್ ಸುಧೀರ್ 'ಪೈಲ್ವಾನ್' ಸಿನಿಮಾದ ಎರಡನೇ ಟೀಸರ್ ಬಂದಾಗ ಟ್ವೀಟ್ ಮಾಡಿಲ್ಲ ಎಂದು ಕೆಲ ಸುದೀಪ್ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದರು.

    ಮತ್ತೊಂದು ಕಡೆ, ರಕ್ಷಿತ್ ಶೆಟ್ಟಿ ನಟನೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪೋಸ್ಟರ್ ನಕಲಿ ಎನ್ನುವ ರೀತಿಯಲ್ಲಿ ತರುಣ್ ಟ್ವೀಟ್ ಮಾಡಿದ್ದಾರೆ ಎನ್ನುವುದು ವಿವಾದ ಆಗಿತ್ತು.

    'ರಾಬರ್ಟ್' ನಿರ್ದೇಶಕ ತರುಣ್ ಸುಧೀರ್ ವಿರುದ್ಧ ಸುದೀಪ್ ಫ್ಯಾನ್ಸ್ ಬೇಸರ 'ರಾಬರ್ಟ್' ನಿರ್ದೇಶಕ ತರುಣ್ ಸುಧೀರ್ ವಿರುದ್ಧ ಸುದೀಪ್ ಫ್ಯಾನ್ಸ್ ಬೇಸರ

    ಹೀಗಿರುವಾಗ, ತಮ್ಮ ಬಗ್ಗೆ ಬಂದ ಈ ಎರಡು ವಿವಾದಗಳ ಕುರಿತು ನಿರ್ದೇಶಕ ತರುಣ್ ಸುಧೀರ್ 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಎಕ್ಸ್​ಕ್ಲೂಸಿವ್​ ಆಗಿ ಮಾತನಾಡಿದ್ದಾರೆ. ಯಾವುದೇ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಸಂಪೂರ್ಣ ಮಾತುಗಳು ಮುಂದಿವೆ ಓದಿ...

    ನಾನು ಬರೆದಿದ್ದು ರಕ್ಷಿತ್ ಹೇಳಿದ್ದ ಡೈಲಾಗ್

    ನಾನು ಬರೆದಿದ್ದು ರಕ್ಷಿತ್ ಹೇಳಿದ್ದ ಡೈಲಾಗ್

    ''ಪಟಾ ಪೋಸ್ಟರ್ ನಿಕ್ಲಾ ಹೀರೊ' ಎನ್ನುವ ಡೈಲಾಗ್ ರಕ್ಷಿತ್ ಅವರ 'ಉಳಿದವರು ಕಂಡತೆ' ಸಿನಿಮಾದಲ್ಲಿ ಇದೆ. ಅವರ ಎಂಟ್ರಿಯೇ ಆ ಡೈಲಾಗ್ ಮೂಲಕ ಆಗುತ್ತದೆ. ಅದು ಹಿಂದಿಯಲ್ಲಿ ತುಂಬ ದೊಡ್ಡ ಮಾಸ್ ಡೈಲಾಗ್. 'ಪೋಸ್ಟರ್ ನಿಂದ ರಿಯಲ್ ಹೀರೋ ಆಚೆ ಬಂದ' ಎನ್ನುವುದು ಅದರ ಅರ್ಥ. 'ಅವನೇ ಶ್ರೀಮನ್ನಾರಾಯಣ' ಪೋಸ್ಟರ್ ನಲ್ಲಿ ಹೀರೋ ಅದರಿಂದ ಹೊರ ಬರುವ ರೀತಿಯೇ ಇದೆ. ಆ ಉದ್ದೇಶದಿಂದ ಆ ಸಾಲನ್ನು ನಾನು ಬಳಸಿದೆ.'' - ತರುಣ್ ಸುಧೀರ್, ನಿರ್ದೇಶಕ

    'ರಾಬರ್ಟ್'ಗೆ ಅರ್ಜುನ್ ಜನ್ಯ ಫಿಕ್ಸ್ : ದರ್ಶನ್ ಜೊತೆ ಹ್ಯಾಟ್ರಿಕ್ ಸಿನಿಮಾ 'ರಾಬರ್ಟ್'ಗೆ ಅರ್ಜುನ್ ಜನ್ಯ ಫಿಕ್ಸ್ : ದರ್ಶನ್ ಜೊತೆ ಹ್ಯಾಟ್ರಿಕ್ ಸಿನಿಮಾ

    ರಕ್ಷಿತ್ ಜೊತೆ ಕೂಡ ಮಾತನಾಡಿದೆ

    ರಕ್ಷಿತ್ ಜೊತೆ ಕೂಡ ಮಾತನಾಡಿದೆ

    ''ಅವನೇ ಶ್ರೀಮನ್ನಾರಾಯಣ' ರೀತಿಯ ಇನ್ನೊಂದು ಪೋಸ್ಟರ್ ಇದೆ ಎನ್ನುವುದು ಸುದ್ದಿಯಾಗುತ್ತಿದೆ ಎನ್ನುವುದು ನನಗೆ ತಿಳಿದಿರಲಿಲ್ಲ. ಆ ಸುದ್ದಿ ಬರುವಾಗಲೇ ನಾನು ಟ್ವೀಟ್ ಮಾಡಿದ್ದರಿಂದ ಹೀಗೆ ಆಗಿರಬಹುದು. ಆದರೆ ಇದು ಕಾಕತಾಳಿಯ ಅಷ್ಟೇ. ಈ ಬಗ್ಗೆ ರಕ್ಷಿತ್ ಜೊತೆ ಕೂಡ ಮಾತನಾಡಿದೆ. ಅವನಿಗೆ ಯಾವುದೇ ತೊಂದರೆ ಇಲ್ಲ... ನನಗೂ ಇಲ್ಲ. ಹೀಗಿದ್ದರೂ ಈ ರೀತಿಯ ಸುದ್ದಿ ಮಾತ್ರ ಬಂದಿದೆ.'' - ತರುಣ್ ಸುಧೀರ್, ನಿರ್ದೇಶಕ

    'ಪೈಲ್ವಾನ್' ಮೊದಲ ಟೀಸರ್ ಬಿಟ್ಟಾಗ ಟ್ವೀಟ್ ಮಾಡಿದ್ದೆ

    'ಪೈಲ್ವಾನ್' ಮೊದಲ ಟೀಸರ್ ಬಿಟ್ಟಾಗ ಟ್ವೀಟ್ ಮಾಡಿದ್ದೆ

    ''ಪೈಲ್ವಾನ್' ಸಿನಿಮಾದ ಮೊದಲ ಟೀಸರ್ ಬಿಟ್ಟಾಗ ಅದರ ಬಗ್ಗೆ ನಾನು ಟ್ವೀಟ್ ಮಾಡಿದ್ದೇನೆ. ಸುದೀಪ್ ಸರ್ ಇಂಡಸ್ಟ್ರಿಗೆ ಬಂದು 23 ವರ್ಷ ಆಗಿದಾಗಲೂ ಟ್ವೀಟ್ ಮಾಡಿದ್ದೀನಿ. ನಾನು ಅವರ ಜೊತೆಗೆ ಎಂದಿಗೂ ಇದ್ದೇನೆ. ನನ್ನ ಮತ್ತು ಅವರ ಬಾಂದವ್ಯ ಏನು ಎನ್ನುವುದು ನಮ್ಮಿಬ್ಬರಿಗೆ ಗೊತ್ತು.'' - ತರುಣ್ ಸುಧೀರ್, ನಿರ್ದೇಶಕ

    ನನ್ನ ಮತ್ತು ಅವರ ಬಾಂದವ್ಯ ನಮ್ಮಿಬ್ಬರಿಗೆ ಗೊತ್ತು

    ನನ್ನ ಮತ್ತು ಅವರ ಬಾಂದವ್ಯ ನಮ್ಮಿಬ್ಬರಿಗೆ ಗೊತ್ತು

    ''ಪ್ರತಿ ಸಲ ಎಲ್ಲ ಪೋಸ್ಟ್ ಗಳಿಗೂ ಟ್ವೀಟ್ ಮಾಡುತ್ತಲೇ ಇರಬೇಕು ಅಂತಲ್ಲ. ಒಂದು ಟ್ವೀಟ್ ಮೂಲಕವೇ ನಾವು ಅವರಿಗೆ ವಿಶ್ ಮಾಡಬೇಕು ಎಂದೇನೂ ಇಲ್ಲ. ಕಿಟ್ಟಪ್ಪ (ನಿರ್ದೇಶಕ ಕೃಷ್ಣ) ಜೊತೆಗೆ 'ಗಜಕೇಸರಿ' ಹಾಗೂ 'ಹೆಬ್ಬುಲಿ ಸಿನಿಮಾದಲ್ಲಿ ಜೊತೆಗೆ ಕೆಲಸ ಮಾಡಿದ್ದೇನೆ. ನಮ್ಮೆಲ್ಲರ ನಡುವೆ ಎಷ್ಟೊಂದು ಒಳ್ಳೆಯ ಒಡನಾಟ ಇದೆ.'' - ತರುಣ್ ಸುಧೀರ್, ನಿರ್ದೇಶಕ

    'ರಾಬರ್ಟ್' ಕೆಲಸಗಳ ನಡುವೆ ಟ್ವೀಟ್ ಮಾಡಲು ಆಗಲಿಲ್ಲ

    'ರಾಬರ್ಟ್' ಕೆಲಸಗಳ ನಡುವೆ ಟ್ವೀಟ್ ಮಾಡಲು ಆಗಲಿಲ್ಲ

    ''ಟ್ವೀಟ್ ಮಾಡಿಲ್ಲ ಎಂದ ಮಾತ್ರಕ್ಕೆ ನಾನು ಅವರಿಗೆ ಗೌರವ ನೀಡಿಲ್ಲ ಅಂತ ಅಲ್ಲ. 'ಪೈಲ್ವಾನ್' ಪೋಸ್ಟರ್ ಬರುವ ಸಮಯದಲ್ಲಿಯೇ ನಮ್ಮ 'ರಾಬರ್ಟ್' ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆ ಮಾಡಬೇಕಿತ್ತು. ಆ ಕೆಲಸದಲ್ಲಿ ಟ್ವೀಟ್ ಮಾಡಲು ಆಗಿರಲಿಲ್ಲ. ಆಮೇಲೆ ಟ್ವೀಟ್ ಮಾಡಿದರೆ, ಇಷ್ಟು ಲೇಟ್ ಆಗಿ ಮಾಡಿದ್ದಾರೆ ಎನ್ನುವ ಹಾಗೆ ಆಗುತ್ತದೆ. ಹಾಗಾಗಿ ನಾನು ಸುಮ್ಮನಿದೆ.'' - ತರುಣ್ ಸುಧೀರ್, ನಿರ್ದೇಶಕ

    English summary
    Kannada director Tharun Sudhir give clarification about his recent controversy. The director get in to controversy about 'Pailwan' and 'Avane Srimannarayana' movie.
    Saturday, June 8, 2019, 18:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X