'ರಾಬರ್ಟ್'ಗೆ ಪ್ರಣಿತಾ ಹೀರೋಯಿನ್? : ನಾಯಕಿ ಬಗ್ಗೆ ತರುಣ್ ಕ್ಲಾರಿಟಿ

Recommended Video

Robert Kannada Movie: ದರ್ಶನ್ ಜೊತೆಗೆ ಮತ್ತೆ ಕಾಣಿಸಿಕೊಳ್ಳಲಿದ್ದಾರಾ ಪ್ರಣೀತಾ?

'ರಾಬರ್ಟ್' ಸಿನಿಮಾದ ಚಿತ್ರೀಕರಣ ಇನ್ನೇನು ಶುರು ಆಗಬೇಕಿದೆ. ಆದರೆ, ಇದೀಗ ಸಿನಿಮಾದ ಕಲಾವಿದರ ಬಗ್ಗೆ ಸಾಕಷ್ಟು ಚರ್ಚೆಗಳು ಶುರು ಆಗುತ್ತಿದೆ. ಚಿತ್ರದ ನಾಯಕಿಯ ಬಗ್ಗೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬುತ್ತಿದೆ.

'ರಾಬರ್ಟ್' ಸಿನಿಮಾದ ನಾಯಕಿ ಬಗ್ಗೆ ಕೆಲವು ನಟಿಯರ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ನಟಿ ಪ್ರಣಿತಾ ಸುಭಾಷ್ ಹೆಸರು ಕೂಡ ಒಂದಾಗಿದೆ. 'ಪೋರ್ಕಿ' ಸಿನಿಮಾದಲ್ಲಿ ದರ್ಶನ್ ಜೊತೆಗೆ ಕಾಣಿಸಿಕೊಂಡಿದ್ದ ಪ್ರಣಿತಾ ಮತ್ತೆ ಡಿ ಬಾಸ್ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ರೂಮರ್ಸ್ ಹರಿದಾಡುತ್ತಿದೆ.

ಚಿತ್ರದ ಬಗ್ಗೆ ಬರುತ್ತಿರುವ ಈ ಎಲ್ಲ ಸುದ್ದಿಗಳಿಗೆ ನಿರ್ದೇಶಕ ತರುಣ್ ಸುಧೀರ್ ಪೂರ್ಣ ವಿರಾಮ ಇಟ್ಟಿದ್ದಾರೆ. ಚಿತ್ರದ ಬಗ್ಗೆಯ ಸುದ್ದಿಗಳಿಗೆ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ನಾಯಕಿ ಬಗ್ಗೆ ಅಭಿಮಾನಿಯೊಬ್ಬರ ಪ್ರಶ್ನೆ

''ರಾಬರ್ಟ್' ಸಿನಿಮಾದಲ್ಲಿ ಹೀರೋಯಿನ್ ಪ್ರಣೀತಾ ಅಂತೆ ನಿಜನಾ ಸರ್..?'' ಎಂದು ಅಭಿಮಾನಿಯೊಬ್ಬರು ನಿರ್ದೇಶಕ ತರುಣ್ ಸುಧೀರ್ ಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ತರುಣ್ ''ರಾಬರ್ಟ್' ಸಿನಿಮಾದ ಬಗ್ಗೆ ಸಾಕಷ್ಟು ರೂಮರ್ಸ್ ಬರುತ್ತಿದೆ. ಆದರೆ, ಚಿತ್ರತಂಡ ದಿಂದ ಅಧಿಕೃತವಾಗಿ ಘೋಷಣೆ ಮಾಡುವವರೆಗೆ ಅದನ್ನು ನಂಬಬೇಡಿ'' ಎಂದಿದ್ದಾರೆ.

ಅಂತಿಮ ಹಂತದ ತಯಾರಿ ನಡೆಯುತ್ತದೆ

ಅಂತಿಮ ಹಂತದ ತಯಾರಿ ನಡೆಯುತ್ತದೆ

'ರಾಬರ್ಟ್' ಸಿನಿಮಾದ ಅಂತಿಮ ಹಂತದ ತಯಾರಿ ನಡೆಯುತ್ತದೆಯಂತೆ. ಈ ಕಾರಣ ಸಿನಿಮಾದ ಕಲಾವಿದರ ಬಗ್ಗೆ ಯಾವುದೇ ರೀತಿ ಸುದ್ದಿ ಬಂದರು ನಮ್ಮ ತಂಡದಿಂದ ತಿಳಿಸುತ್ತೇವೆ ಎಂದಿದ್ದಾರೆ ತರುಣ್. ಕಲಾವಿದರ ಬಗ್ಗೆ ಹಾಗೂ ತಂತ್ರಜ್ಞರ ವಿವರವನ್ನು ಸದ್ಯದಲ್ಲಿಯೇ ಅನೌನ್ಸ್ ಮಾಡಲಿದ್ದಾರಂತೆ.

ಸೋಮವಾರ ದಿಂದ ಚಿತ್ರೀಕರಣ

ಸೋಮವಾರ ದಿಂದ ಚಿತ್ರೀಕರಣ

ಇದೇ ಸೋಮವಾರದಿಂದ 'ರಾಬರ್ಟ್' ಚಿತ್ರದ ಚಿತ್ರೀಕರಣ ಶುರು ಆಗಲಿದೆ. ಈ ಹಿಂದೆಯೇ ಸಿನಿಮಾದ ಶೂಟಿಂಗ್ ಪ್ರಾರಂಭ ಆಗಬೇಕಿತ್ತು. ಆದರೆ, ದರ್ಶನ್ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕಾರಣ ಶೂಟಿಂಗ್ ಈ ಸೋಮವಾರದಿಂದ ಶುರು ಆಗುತ್ತಿದೆ.

ಇಬ್ಬರು ಸಂಭಾಷೆಗಾರರು

ಇಬ್ಬರು ಸಂಭಾಷೆಗಾರರು

'ರಾಬರ್ಟ್' ಸಿನಿಮಾವನ್ನು ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನ, ದರ್ಶನ್ ನಟನೆ ಸಿನಿಮಾದಲ್ಲಿ ಇರಲಿದೆ. ರಾಜಶೇಖರ್ ಹಾಗೂ ಚಂದ್ರಮೌಳಿ ಚಿತ್ರದ ಸಂಭಾಷಣೆಯನ್ನು ಬರೆಯುತ್ತಿದ್ದಾರೆ. ಇದು ಬಿಟ್ಟರೆ ಸದ್ಯಕ್ಕೆ ಈ ಚಿತ್ರದ ಹೆಚ್ಚು ವಿವರಗಳನ್ನು ಚಿತ್ರತಂಡ ಹಂಚಿಕೊಂಡಿಲ್ಲ.

More from Filmibeat

English summary
Director Tharun Sudhir tweets 'Robert' kannada movie rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X