»   » 'ಥಟ್ ಅಂತ ಹೇಳುವ' ಸೋಮೇಶ್ವರ್ ಅವರಿಗೆ ಬರ್ತ್ ಡೇ ವಿಶ್ ಮಾಡಿ

'ಥಟ್ ಅಂತ ಹೇಳುವ' ಸೋಮೇಶ್ವರ್ ಅವರಿಗೆ ಬರ್ತ್ ಡೇ ವಿಶ್ ಮಾಡಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Filmibeat Kannada

ಚಾನಲ್ ಗಳನ್ನು ಸರ್ಚ್ ಮಾಡುತ್ತಾ ಮುಂದಕ್ಕೆ ಸಾಗುತ್ತಿರುವವರನ್ನು ಥಟ್ ಅಂತ ತಡೆದು ನಿಲ್ಲಿಸುವ ಕಾರ್ಯಕ್ರಮ ಎಂದರೆ ಚಂದನ ವಾಹಿನಿಯ 'ಥಟ್ ಅಂತ ಹೇಳಿ'. ಈ ಕ್ವಿಜ್ ಕಾರ್ಯಕ್ರಮ ಕಾಣಿಸಿಕೊಂಡರೆ ಸಾಕು ಜಪ್ಪಯ್ಯ ಅಂದ್ರು ವೀಕ್ಷಕರು ಆಚೆ ಈಚೆ ಕದಲಾಡಿದರೆ ಕೇಳಿ!

ಈ ಕಾರ್ಯಕ್ರಮದ ರೂವಾರಿ ಡಾ.ನಾ. ಸೋಮೇಶ್ವರ ಅವರು ಅಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸತತ 15 ವರ್ಷಗಳಿಂದ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು ತನ್ನ ಜನಪ್ರಿಯತೆಯನ್ನು ಕಾಯ್ದಿಸಿಕೊಂಡು ಬಂದಿರುವುದು ವಿಶೇಷ. ಯಾವುದೇ ಸ್ಪಾನ್ಸರ್ ಶಿಪ್ ಇಲ್ಲದಂತೆ ಮುನ್ನುಗ್ಗುತ್ತಿರುವುದು ಈ ಶೋ ಸ್ಪೆಷಾಲಿಟಿ.

Thatt antha heli Fame Naa Someswara's Birthday

ಜನವರಿ 4ರ 2002ರಂದು ಆರಂಭವಾದ ಈ ಕಾರ್ಯಕ್ರಮ ಕೋಟ್ಯಾಂತರ ಕನ್ನಡಿಗರನ್ನು ರಂಜಿಸುವುದರ ಜೊತೆಗೆ ಅವರ ಜ್ಞಾನದಾಹವನ್ನೂ ಇಂಗಿಸುತ್ತಿದೆ. ಈ ಕಾರ್ಯಕ್ರಮದ ನಿರೂಪಕರಾದ ಸೋಮೇಶ್ವರ ನಾರಪ್ಪ ಅವರಿಗೆ ಇಂದು (ಮೇ.14) ಜನುಮದಿನ.

ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ರಿಂದ 10 ಗಂಟೆಯವರೆಗೆ ಪ್ರಸಾರವಾಗುವ ಥಟ್ ಅಂತ ಹೇಳಿ ಕಾರ್ಯಕ್ರಮ ಈಗಾಗಲೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ಕನ್ನಡ ನಾಡು, ನುಡಿಯ ಬಗ್ಗೆ ಜ್ಞಾನದಾಹ ಹೆಚ್ಚಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕನ್ನಡ ಪುಸ್ತಕ ಓದುವ ಅಭಿರುಚಿ ಇದ್ದರೆ ಈ ರಸಪ್ರಶ್ನೆಯಲ್ಲಿ ಭಾಗವಹಿಸಿ ಮತ್ತು ನಾನಾ ಲೇಖಕರು ಬರೆದಿರುವ ನಾನಾ ಬಗೆಯ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ಗೆಲ್ಲಿರಿ.

English summary
Chandana TV game show 'That Antha Heli' host Dr. Naa Someswara, popularly known as Naa Someswara celebrating 62th birthday on 14th May. Wish him a very happy birthday
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada