For Quick Alerts
ALLOW NOTIFICATIONS  
For Daily Alerts

  2013 ವಿಲನ್ ಗಳು ವಿಜೃಂಭಿಸಿ ಅಬ್ಬರಿಸಿದ ವರ್ಷ

  By ಜೀವನರಸಿಕ
  |

  ಒಂದು ಸಿನಿಮಾ ಅಂದರೆ ಅಲ್ಲಿ ಒಬ್ಬ ಹೀರೋ ನೆನಪಾಗ್ತಾರೆ. ಆಮೇಲೆ ಉಳಿದವರೆಲ್ಲರು. ಹೀರೋನ ನಂತರ ಹೀರೋಯಿನ್. ಈ ಎರಡು ಪಾತ್ರಗಳನ್ನ ಬಿಟ್ರೆ ಉಳಿದ ಪಾತ್ರಗಳು ನಮ್ಮನ್ನ ಸೆಳೀಬೇಕು ಅಂದ್ರೆ ಅಲ್ಲಿ ಅಂತಹ ಅದ್ಭುತ ನಟ ಇರ್ಲೇಬೇಕು. ಇಲ್ಲದಿದ್ರೂ ಸ್ಟಾರ್ ವ್ಯಾಲ್ಯೂ ಇರೋ ನಟರೊಬ್ರು ಅಲ್ಲಿ ನಟಿಸಬೇಕು. ವಿಲನ್ ಗಳು ಅಂದರೆ ಸಿನಿಮಾದಲ್ಲಿ ಚಿತ್ರಪ್ರೇಮಿ ಹೇಟ್ ಮಾಡೋ ಕ್ಯಾರೆಕ್ಟರ್.

  ಹಾಗೇನೇ ಪ್ರತೀವರ್ಷ ಒಬ್ಬರಲ್ಲ ಒಬ್ಬರು ಸ್ಟಾರ್ ಗಳು ಸೃಷ್ಟಿಯಾಗುತ್ತಿರುತ್ತಾರೆ. ಹೀರೋಯಿನ್ ಗಳೂ ನಮ್ಮಲ್ಲೇ ಕಾಣಿಸಿಕೊಳ್ತಾರೆ. ಇಲ್ಲದಿದ್ರೆ ದೂರದ ಬಾಂಬೆ, ಇಲ್ಲದಿದ್ರೆ ಪಕ್ಕದ ತಮಿಳು, ತೆಲುಗು, ಮಲೆಯಾಳಂನಿಂದ ಬರ್ತಾರೆ. ಆದರೆ ಪ್ರತೀ ವರ್ಷ ಹೊಸ ಹೊಸ ವಿಲನ್ ಗಳು ಗುರುತಿಸಿಕೊಳ್ಳೋದು ಕಷ್ಟ ಮತ್ತು ತೀರಾ ಅಪರೂಪ. ಆದರೆ ಈ ವರ್ಷ ಸಾಕಷ್ಟು ಅಭಿನಯ ಪ್ರತಿಭೆಗಳು ಅರಳಿ ನಿಂತಿವೆ.

  ಈ ಗಂಧದ ಗುಡಿಯ ಮಣ್ಣಿನ ಪರಿಮಳ ಕುಡಿದ ಈ ಪ್ರತಿಭೆಗಳಿಗೆ ಒಂದು ಪವರ್ ಫುಲ್ ಪುಷ್ ಸಿಕ್ಕಿದ್ದು ವಿಲನ್ ಆಗಿ ಕಿಚ್ಚ ಸುದೀಪ್ ರಾಜಮೌಳಿಯವರ 'ಈಗ' ಸಿನಿಮಾದಲ್ಲಿ ಮಿಂಚಿದಾಗ. ಒಬ್ಬ ಸ್ಟಾರ್ ನಟ ವಿಲನ್ ಪಾತ್ರಕ್ಕೆ ತನ್ನನ್ನ ಒಗ್ಗಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೀತಾರೇ ಅಂದರೆ... ವಿಲನ್ ಆದರೂ ಮಿಂಚಬಹುದು ಅಂತ ಕಲಾವಿದರು ಖರಾಬ್ ಪಾತ್ರ ಮಾಡೋಕೆ ಸೈ ಅಂದ್ರು.

  ಇಂತಹ ಕಾರಣಗಳಿಗಾಗೀನೇ ಕನ್ನಡಕ್ಕೆ ಈ ವರ್ಷ ಒಂದು ಕಾಲದಲ್ಲಿ ಅಬ್ಬರಿಸ್ತಿದ್ದ ವಜ್ರಮುನಿ, ಸುಧೀರ್, ಸುಂದರಕೃಷ್ಣ ಅರಸ್ ರಂತಹಾ ವಿಲನ್ ಪಾತ್ರಧಾರಿಗಳು ಸಿಕ್ಕಿದ್ದಾರೆ. ಹೀಗೆ ಈ ವರ್ಷ ಕನ್ನಡ ಚಿತ್ರರಂಗಕ್ಕೆ ಭರವಸೆ ಮೂಡಿಸಿರೋ ಖಳನಟರು ಎಂಟ್ರಿಕೊಟ್ಟಿದ್ದಾರೆ.

  ಹೀರೋಗಳು ಎಂಟ್ರಿಯಾಗೋದು ಕಾಮನ್ ಆದರೆ ವಿಲನ್ ಗಳ ಎಂಟ್ರಿಯಿಂದಲೇ ಸಿನಿಮಾಗೆ ನಿಜವಾದ ಖದರ್ ಬರೋದು ಅಲ್ಲವೇ. ಈ ವರ್ಷ ಮಿಂಚಿದ ಖಳನಟರ ಮೇಲೊಂದು ಇಣುಕು ನೋಟ ಸ್ಲೈಡ್ ನಲ್ಲಿ...

  ಅಂದರ್ ಬಾಹರ್ ನಲ್ಲಿ ಮಿಂಚಿದ ಚೆಸ್ವಾ ಶ್ರೀಧರ್

  ಚೆಸ್ವಾ ಶ್ರೀಧರ್- ಈ ವರ್ಷದ ಆರಂಭದಲ್ಲಿ ಬಂದ ಹ್ಯಾಟ್ರಿಕ್ ಹೀರೋ ಶಿವರಾರ್ ಕುಮಾರ್ ಅಭಿನಯದ 'ಅಂದರ್ ಬಾಹರ್' ಸಿನಿಮಾದಲ್ಲಿ ವಿಲನ್ ಆಗಿದ್ದ ಚೆಸ್ವಾ ಶ್ರೀಧರ್ ತಮ್ಮ ಖದರ್ಪುಲ್ ಅಭಿನಯದಿಂದ ನಿರೀಕ್ಷೆ ಮೂಡಿಸಿದ ವಿಲನ್.

  ಜಯಮ್ಮನ ಮಗ ಚಿತ್ರದಲ್ಲಿ ಅಬ್ಬರಿಸಿದ ಉದಯ್

  ಉದಯ್-ಜಯಮ್ಮನ ಮಗ ಸಿನಿಮಾದಲ್ಲಿ ರಕ್ತಾಕ್ಷನಾಗಿ ಅಬ್ಬರಿಸೋ ಉದಯ್ ಅಲ್ಲಿಯವರೆಗೂ ಪೈಟ್ ಆರ್ಟಿಸ್ಟ್ ಆಗಿದ್ದವರು, ವಿಜಿಯ ಮುಂದೆ ಮಾಟ ಮಂತ್ರದ ಕ್ಷುದ್ರಶಕ್ತಿಯನ್ನ ತರೋ ಈ ಉದಯ್ ತಮ್ಮ ಅಬ್ಬರ ಅಭಿನಯ ನೀಡಿದರು.

  ದರ್ಶನ್ ಅಭಿನಯದ ಅಂಬರೀಷ ಚಿತ್ರದಲ್ಲೂ

  ಈಗ ಈ ಉದಯ್ ಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ದರ್ಶನ್ ಅಭಿನಯದ 'ಅಂಬರೀಷ' ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ತಿರೋದ್ರ ಜೊತೆಗೆ ಅದ್ಧೂರಿ ಅರ್ಜುನ್ ನಿರ್ದೇಶನದ 'ರಾಟೆ' ಚಿತ್ರದಲ್ಲಿ ಕೂಡ ಮಿಂಚಲಿದ್ದಾರೆ.

  ರಕ್ತಾಕ್ಷನಾಗಿ ಮಿಂಚಿದ ಸೌರವ ಲೋಕೇಶ್

  ಸೌರವ ಲೋಕೇಶ್-ಇತ್ತೀಚೆಗೆ ತೆರೆಗೆ ಬಂದು ಕೋಟಿಗಳನ್ನ ಬಾಚ್ತಿರೋ ಶಿವಣ್ಣ ಅಭಿನಯದ 'ಭಜರಂಗಿ' ಸಿನಿಮಾದಲ್ಲಿ ವಿಚಿತ್ರ ಅಭಿನಯದಿಂದ ನಿಮ್ಮಲ್ಲಿ ಅಸಹ್ಯ ಹುಟ್ಟಿಸೋ ಈ ನಟ ಕನ್ನಡದ ಭರವಸೆಯ ಖಳನಟ.

  ಭಜರಂಗಿ ಚಿತ್ರದಿಂದ ಹೊರಹೊಮ್ಮಿದ ಮತ್ತೊಬ್ಬ ನಟ

  ಮಧು-ಭಜರಂಗಿ ಚಿತ್ರದಿಂದ್ಲೇ ಮೂಡಿಬರ್ತಿರೋ ಮತ್ತೊಬ್ಬ ನಿರೀಕ್ಷೆಯ ವಿಲನ್ ಪಾತ್ರಧಾರಿ. ಪಾತ್ರಕ್ಕೆ ತಕ್ಕ ಹೈಟು ಪರ್ಸನಾಲಿಟಿ ಮತ್ತು ಮ್ಯಾನರಿಸಂನಲ್ಲಿ ಮಿಂಚೋ ಮಧು ಮಂತ್ರವಾಧಿಯಾಗಿ ಭಜರಂಗಿ ಸಿನಿಮಾದಲ್ಲಿ ಅಬ್ಬರದ ಅಭಿನಯ ನೀಡಿದ್ದಾರೆ.

  ಕಟ್ಟಾಳೆತ್ತರದ ಖಳನಟ ಚೇತನ್ ರಾಜ್

  ಭಜರಂಗಿ ಚಿತ್ರರಂಗದ ಮೂಲಕ ಬೆಳಗಿಗೆ ಬಂದಿರುವ ಮತ್ತೊಬ್ಬ ನಟ ಚೇತನ್ ರಾಜ್. ಇವರು ತಮ್ಮ ದೇಹದಾರ್ಢ್ಯದಿಂದ ಎಲ್ಲರ ಗಮನಸೆಳೆದಿದ್ದಾರೆ. ಕಟ್ಟಾಳೆತ್ತರದ ಈ ನಟ ರಂಗಭೂಮಿ ಹಿನ್ನೆಲೆಯಿಂದ ಬಂದವರು.

  English summary
  The 2013 is the year for Kannada villains. Most of Villains are come to light in this year. Live Chaswa Sridhar from Andar Bahar, Uday from Jayammana Maga, Souvrav Lokesh from movie Bhajaragi are draws attention in Sandalwood.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more