For Quick Alerts
  ALLOW NOTIFICATIONS  
  For Daily Alerts

  ಬಾಕ್ಸ್ ಕ್ರಿಕೆಟ್ ಲೀಗ್​ ಮೂಲಕ ಮೈದಾನಕ್ಕಿಳಿಯಲಿದ್ದಾರೆ ಸ್ಟಾರ್ ಗಳು

  By Pavithra
  |

  ಕಮರ್​ ಫಿಲ್ಮ್​ ಫ್ಯಾಕ್ಟರಿ ವತಿಯಿಂದ ಆಯೋಜಿಸಲಾಗುವ ಬಹು ನಿರೀಕ್ಷಿತ 'ಬಾಕ್ಸ್ ಕ್ರಿಕೆಟ್ ಲೀಗ್​ -2 'ಗೆ ದಿನಗಣನೆ ಆರಂಭವಾಗಿದೆ. ಇತ್ತೀಚಿಗಷ್ಟೆ ಬೆಂಗಳೂರಿನ ಕೋರಮಂಗಲದಲ್ಲಿ ಬಿಸಿಎಲ್​ 2ಗಾಗಿಯೇ ಹೊಸ ಲೋಗೋ ಲಾಂಚ್ ಮಾಡಲಾಯಿತು. ಕಳೆದ ಬಾರಿ 'ಬಾಕ್ಸ್ ಕ್ರಿಕೆಟ್ ಲೀಗ್'​ ನಲ್ಲಿ ಆರು ತಂಡಗಳು ಕಣಕ್ಕಿಳಿದಿದ್ದವು.

  ಕಳೆದ ಬಾರಿ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಈ ಬಾರಿ ಇನ್ನೂ ಎರಡು ಟೀಂಗಳನ್ನು ಹೆಚ್ಚಿಸಲಾಗಿದೆ.ಈ ಭಾರಿ ಒಟ್ಟು ಎಂಟು ತಂಡಗಳು ಮೈದಾನದಲ್ಲಿ ಸೆಣೆಸಲಿವೆ. ಬಿಸಿಎಲ್​ -1ರಲ್ಲಿ ಆಡಿದ ಅನೇಕ ಸೆಲೆಬ್ರಿಟಿಗಳ ಜೊತೆ ಈ ಬಾರಿ ಮತ್ತಷ್ಟು ಹೊಸ ಸೆಲೆಬ್ರೆಟಿಗಳು ಕಣಕ್ಕಿಳಿಯಲಿದ್ದು, ಬಿಸಿಎಲ್​ನ ರಂಗು ಮತ್ತಷ್ಟು ಹೆಚ್ಚಲಿದೆ.

  ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್ಸುದೀಪ್ ಜೊತೆ ಕ್ರಿಕೆಟ್ ಅಭ್ಯಾಸ ಮಾಡಿದ ಸ್ಯಾಂಡಲ್ ವುಡ್ ಸ್ಟಾರ್

  ಕಳೆದ ಬಾರಿ ಧನಂಜಯ, ಪ್ರಿಯಾಂಕ ಉಪೇಂದ್ರ, ರಘು ಮುಖರ್ಜಿ ಇನ್ನು ಅನೇಕರು ಬಾಕ್ಸ್ ಕ್ರಿಕೆಟ್ ಲೀಗ್ ನಲ್ಲಿ ಭಾಗಿ ಆಗಿದ್ದರು. ಈ ಸಲ ಯಾರೆಲ್ಲಾ ಸ್ಟಾರ್ ಗಳು ಮೈದಾನಕ್ಕಿಳಿದು ಆಟ ಆಡಲಿದ್ದಾರೆ. ಸ್ಟಾರ್ ಗಳು ಬಾಕ್ಸ್ ಕ್ರಿಕೆಟ್ ಲೀಗ್​ -2 ಬಗ್ಗೆ ಹೇಳಿದ್ದೇನು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  ಕ್ರಿಕೆಟ್​ಗಿಂತ ಜಾಸ್ತಿ ಮೋಜು ಮಸ್ತಿ

  ಕ್ರಿಕೆಟ್​ಗಿಂತ ಜಾಸ್ತಿ ಮೋಜು ಮಸ್ತಿ

  ಕಮರ್​ ಫಿಲಂ ಫ್ಯಾಕ್ಟರಿ ಆಯೋಜಿಸುತ್ತಿರುವ ಬಿಸಿಎಲ್​​​​ ಕ್ರಿಕೆಟ್​ ಲೀಗ್​ ಮೊದಲ ಸೀಸನ್​ ಬಹಳ ಅಧ್ಭುತವಾಗಿ ಮೂಡಿ ಬಂದಿತ್ತು. ಕ್ರಿಕೆಟ್​ಗಿಂತ ಹೆಚ್ಚಾಗಿ ಫನ್​ ಇತ್ತು, ಎಲ್ಲಕ್ಕಿಂತ ಹೆಚ್ಚಾಗಿ ಸೆಲೆಬ್ರಿಟಿಗಳು, ಟೆಕ್ನೀಷಿಯನ್ಸ್​, ಎಲ್ಲರೂ ಸೇರಿ ಕ್ರಿಕೆಟ್​ ಆಡಿದ್ವಿ. ಈ ವರ್ಷ 2ನೇ ಆವೃತ್ತಿ ಶುರುವಾಗ್ತಾ ಇದೆ ಕಳೆದ ವರ್ಷದಂತೆ ಈ ವರ್ಷವೂ ಎಲ್ಲಾ ವಿಭಾಗದ ನಟರು, ತಂತ್ರಜ್ಞರು ಭಾಗವಹಿಸ್ತಾ ಇದ್ದಾರೆ. ಕ್ರಿಕೆಟ್​ಗಿಂತ ಜಾಸ್ತಿ ಮೋಜು ಮಸ್ತಿ ಇರುತ್ತೆ.
  ಕವಿರಾಜ್​​, ನಿರ್ದೇಶಕ-ಗೀತ ಸಾಹಿತಿ

  ಒಂದೊಂದು ಜಿಲ್ಲೆಗೆ ಒಬ್ಬ ಸ್ಟಾರ್

  ಒಂದೊಂದು ಜಿಲ್ಲೆಗೆ ಒಬ್ಬ ಸ್ಟಾರ್

  ಇದರ ಕಾನ್ಸೆಪ್ಟೇ ಬೇರೆ ಥರಾ ಅಂದ್ರೆ ಕ್ರಿಕೆಟ್​ ಅಂದ ತಕ್ಷಣ ಎಲ್ಲರೂ ದೊಡ್ಡ ಗ್ರೌಂಡ್​ ಯೋಚ್ನೆ ಮಾಡ್ತಾರೆ, ಇದು ಬಾಕ್ಸ್​ ಒಳಗೆ ಆಡೋ ಕ್ರಿಕೆಟ್​. ಇಲ್ಲಿ ಸಾಫ್ಟಿ ಬಾಲ್​ ಬಳಸ್ತೀವಿ. ಕಲಾವಿದರಿಗೆ ಏಟಾಗಬಾರದು ಅಂತ ಈ ಬಾಲ್​ ಬಳಸಲಾಗುತ್ತೆ. ಇದ್ರಲ್ಲಿ ಒಂದೊಂದು ಜಿಲ್ಲೆಯನ್ನ ಒಬ್ಬೊಬ್ಬ ಸೆಲೆಬ್ರಟಿಗಳು ಪ್ರತಿನಿಧಿಸ್ತಾರೆ. ಲೂಸ್​ ಮಾದ ಯೋಗಿ, ಆದಿ ಲೋಕೇಶ್​, ಧನಂಜಯ್​​, ದಿನಕರ್​ ತೂಗುದೀಪ, ಸೇರಿದಂತೆ ಒಬ್ಬೊಬ್ಬರು ಒಂದೊಂದು ಟೀಮ್​​​ ಪ್ರತಿನಿಧಿಸ್ತೀವಿ,

  ದಿನಕರ್​ ತೂಗುದೀಪ, ನಿರ್ದೇಶಕ

  ಬ್ಯಾಟ್ ಹಿಡಿಯಲಿದ್ದಾರೆ ಲೂಸ್ ಮಾದ ಯೋಗಿ

  ಬ್ಯಾಟ್ ಹಿಡಿಯಲಿದ್ದಾರೆ ಲೂಸ್ ಮಾದ ಯೋಗಿ

  ಎಲ್ಲರೂ ಒಂದು ಕಡೆ ಸೇರಿದ್ರೆ ತುಂಬಾ ಮಜಾ ಇರುತ್ತೆ, ಕಳೆದ ವರ್ಷ ಮಿಸ್​ ಮಾಡಿಕೊಂಡಿದ್ದೆ, ಈ ವರ್ಷ 2ನೇ ಸೀಸನ್​ನಲ್ಲಿ ಆಡ್ತಾ ಇದ್ದೀನಿ. ಹೋದ ಸೀಸನ್​ ನೋಡಿದ್ದೆ, ದಿನಕರ್​ ಅಣ್ಣ, ಕವಿರಾಜ್​ ಸರ್​ ಎಲ್ಲಾ ಬೇಜಾನ್ ಗಲಾಟೆ ಮಾಡಿದ್ರು. ಈ ವರ್ಷನೂ ಗಲಾಟೆ ಇರುತ್ತೆ, ಅದಕ್ಕಿಂತ ಹೆಚ್ಚು ಫನ್​ ಇರುತ್ತೆ. ಇದ್ರಲ್ಲಿ ಹುಡುಗರು, ಹುಡುಗಿಯರು ಎಲ್ಲರೂ ಆಡಬಹುದು. ಲೂಸ್​ ಮಾದ ಯೋಗಿ, ನಟ

  ಸ್ಟುಡಿಯೋದಲ್ಲೇ ಕ್ರಿಕೆಟ್ ಸೆಟ್

  ಸ್ಟುಡಿಯೋದಲ್ಲೇ ಕ್ರಿಕೆಟ್ ಸೆಟ್

  ಈಗ ಸೆಪ್ಟೆಂಬರ್​ ನಲ್ಲಿ ಬಿಸಿಎಲ್​ ಸೀಸನ್​-2 ಮ್ಯಾಚ್​ಗಳು ನಡೆಯಲಿವೆ. ಈ ಬಾರಿ ಇನ್ನಷ್ಟು ಸ್ಟಾರ್​ಗಳು ಸೇರ್ಪಡೆಯಾಗಲಿದ್ದಾರೆ. ಈ ಮ್ಯಾಚ್​​ಗಳಲ್ಲಿ ಹೀರೋಯಿನ್​ಗಳು ಸೆಂಟರ್​ ಆಫ್​ ಅಟ್ರಾಕ್ಷನ್. ಜೀ ಕನ್ನಡ ಇದನ್ನ ಪ್ರಸಾರ ಮಾಡಲಿದೆ. ಸ್ಟುಡಿಯೋದಲ್ಲೇ ಸೆಟ್​ ನಿರ್ಮಿಸಿ ಮ್ಯಾಚ್​ ಆಡಲಾಗುತ್ತೆ. ಈ ಬಾರಿ ಕಾನ್ಸೆಪ್ಟ್​ ಅದೇ ಇರುತ್ತೆ. ಸ್ಟಾರ್​ಗಳನ್ನೂ ಬದಲಾಯಿಸ್ತಾ ಇದ್ದಿವಿ, ಈ ಬಾರಿ ಬಾಕ್ಸ್​ ದೊಡ್ಡದ್ದಾಗಿ ಇರುತ್ತೆ.

  ಕಮರ್​, ನಿರ್ಮಾಪಕ, ಬಿಸಿಎಲ್​ ಆಯೋಜಕ

  English summary
  The Box Cricket League will be held in September last week. The Box Cricket League is organized by the Kamar Film Factory.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X