twitter
    For Quick Alerts
    ALLOW NOTIFICATIONS  
    For Daily Alerts

    'ಆ' ಒಂದು ಘಟನೆ ಆಗದಿದ್ದರೆ ಹುಚ್ಚ ವೆಂಕಟ್ ಈ ಸ್ಥಿತಿಗೆ ಬರುತ್ತಿರಲಿಲ್ಲ!

    |

    ನಾಲ್ಕು ವರ್ಷದ ಹಿಂದೆ ಹುಚ್ಚ ವೆಂಕಟ್ ಅಂದ್ರೆ ಯಾರಿಗೂ ಗೊತ್ತಿರಲಿಲ್ಲ. ಸಾಮಾನ್ಯ ಜನರಿಗೆ ಮಾತ್ರವಲ್ಲ, ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವರಿಗೆ ಬಿಟ್ಟರೇ ಬೇರೆ ಯಾರಿಗೂ ಪರಿಚಯವಿರಲಿಲ್ಲ. ಆದರೆ ನಾಲ್ಕು ವರ್ಷದ ಹಿಂದೆ ನಡೆದ ಆ ಒಂದು ಘಟನೆ ವೆಂಕಟ್ ಅವರ ಈ ಸ್ಥಿತಿಗೆ ಬುನಾದಿ ಆಯ್ತು ಅಂದ್ರೆ ತಪ್ಪಾಗಲ್ಲ.

    2005ರಲ್ಲಿ ಬಿಡುಗಡೆಯಾಗಿದ್ದ 'ಮೆಂಟಲ್ ಮಂಜ' ಚಿತ್ರದಲ್ಲಿ ಪೋಷಕ ನಟನಾಗಿ ವೆಂಕಟ್ ಮೊದಲ ಬಾರಿಗೆ ನಟಿಸಿದ್ದರು. 2009ರಲ್ಲಿ 'ಸ್ವತಂತ್ರ ಪಾಳ್ಯ' ಎಂಬ ಚಿತ್ರವನ್ನ ನಿರ್ದೇಶಿಸಿ, ನಟಿಸಿದ್ದ ವೆಂಕಟ್ ಆಗಲೂ ಖ್ಯಾತಿ ಪಡೆದುಕೊಂಡಿಲ್ಲ. ಈ ಸಿನಿಮಾ ಬಂದಿದ್ದು ಗೊತ್ತಾಗಿಲ್ಲ, ಥಿಯೇಟರ್ ನಿಂದ ಹೋಗಿದ್ದು ಗೊತ್ತಾಗಿಲ್ಲ.

    'ಹುಚ್ಚ' ವೆಂಕಟ್: ಕರುಣೆ ತೋರಿಸಬೇಕಿಲ್ಲ, ಮಾಧ್ಯಮದವರನ್ನು ದೂರಬೇಕಿಲ್ಲ!'ಹುಚ್ಚ' ವೆಂಕಟ್: ಕರುಣೆ ತೋರಿಸಬೇಕಿಲ್ಲ, ಮಾಧ್ಯಮದವರನ್ನು ದೂರಬೇಕಿಲ್ಲ!

    2014ರಲ್ಲಿ 'ಹುಚ್ಚ ವೆಂಕಟ್' ಸಿನಿಮಾದ ಮೂಲಕ ವೆಂಕಟ್ ಮತ್ತೆ ಬಂದರು. ಆಗಲೂ ಜನರು 'ಹುಚ್ಚ ವೆಂಕಟ್' ಚಿತ್ರವನ್ನ ನೋಡಿಲ್ಲ. ಇಲ್ಲಿಂದ ಆರಂಭವಾಗಿದ್ದ ವೆಂಕಟ್ ಪರ್ವ. ಆಮೇಲೆ ಏನಾಯ್ತು? ಆ ಘಟನೆ ಯಾವುದು? ಮುಂದೆ ಓದಿ....

    ಪ್ರೇಕ್ಷಕರನ್ನ ನಿಂದಿಸಿದ ನಿರ್ದೇಶಕ

    ಪ್ರೇಕ್ಷಕರನ್ನ ನಿಂದಿಸಿದ ನಿರ್ದೇಶಕ

    ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವೊಬ್ಬ ನಿರ್ದೇಶಕನೂ ತನ್ನ ಸಿನಿಮಾ ಸೋತಾಗ ಜನರನ್ನ ಬೈದಿಲ್ಲ, ನಿಂದಿಸಿಲ್ಲ. ಮೊದಲ ಸಲ ಹುಚ್ಚ ವೆಂಕಟ್ ಜನರನ್ನ ಬಹಿರಂಗವಾಗಿ ಬೈದರು. ಹುಚ್ಚ ವೆಂಕಟ್ ಚಿತ್ರಕ್ಕೆ ಪ್ರೇಕ್ಷಕರು ಯಾರೂ ಬಂದಿಲ್ಲ. 'ನನ್ನ ಸಿನಿಮಾ ನೋಡಲು ನಿಮಗೆ ಯೋಗ್ಯತೆ ಇಲ್ಲ. ನೀವು ಪ್ರೇಕ್ಷಕರಾ..ಥೂ...''ಎಂದೆಲ್ಲಾ ನಿಂದಿಸಿದ್ದರು.

    ವೈರಲ್ ಆಯ್ತು ವೆಂಕಟ್ ಮಾತು

    ವೈರಲ್ ಆಯ್ತು ವೆಂಕಟ್ ಮಾತು

    ಟಿವಿ ಮಾಧ್ಯಮವೊಂದಕ್ಕೆ ಬೈಟ್ ನೀಡಿದ್ದ ಹುಚ್ಚ ವೆಂಕಟ್ ಪ್ರೇಕ್ಷಕರನ್ನ ತರಾಟೆಗೆ ತೆಗೆದುಕೊಂಡಿದ್ದರು. 'ಕನ್ನಡಿಗರು ನನ್ನನ್ನು ತುಳಿದಿದ್ದಾರೆ, ನನ್ ಎಕ್ಕಡ ಕೂಡ ಕನ್ನಡ ಸಿನಿಮಾ ಮಾಡಲ್ಲ, ನನ್ ಮಗಂದ್, ನಮ್ಮ ಅಪ್ಪ ಕೋಟಿಧ್ಯಿಪತಿ' ಎಂದೆಲ್ಲ ಆಕ್ರೋಶ ಹೊರಹಾಕಿದರು. ಈ ವಿಡಿಯೋ ನೋಡಿದ ಜನರು, 'ಯಾರೂ ಗುರು ಇದು' ಎಂದು ವೈರಲ್ ಮಾಡಿದರು. ಹುಚ್ಚ ವೆಂಕಟ್ ಅವರ ಮಾತುಗಳನ್ನ ಗಂಭೀರವಾಗಿ ತೆಗೆದುಕೊಳ್ಳದ ಜನರು ಮನರಂಜನೆಯಾಗಿ ಸ್ವೀಕರಿಸಿದರು.

    ಮಡಿಕೇರಿ ಬೀದಿಯಲ್ಲಿ ಕಾರಿನ ಗ್ಲಾಸ್ ಒಡೆದು 'ಹುಚ್ಚಾಟ' ಮಾಡಿದ ವೆಂಕಟ್ಮಡಿಕೇರಿ ಬೀದಿಯಲ್ಲಿ ಕಾರಿನ ಗ್ಲಾಸ್ ಒಡೆದು 'ಹುಚ್ಚಾಟ' ಮಾಡಿದ ವೆಂಕಟ್

    ಬೆನ್ನುಬಿದ್ದ ಮಾಧ್ಯಮಗಳು

    ಬೆನ್ನುಬಿದ್ದ ಮಾಧ್ಯಮಗಳು

    ಅದ್ಯಾವಾಗ ಹುಚ್ಚ ವೆಂಕಟ್ ಜನರನ್ನ ನಿಂದಿಸಿದರೋ, ಆ ವಿಡಿಯೋ ವೈರಲ್ ಆಗಲು ಶುರುವಾಯ್ತು. ಇದನ್ನ ಗಮನಿಸಿದ ವಾಹಿನಿಗಳು ಹುಚ್ಚ ವೆಂಕಟ್ ಹಿಂದೆ ಬಿದ್ದವು. ತಮ್ಮ ವಾಹಿನಿಗೆ ಬನ್ನಿ, ತಮ್ಮ ವಾಹಿನಿಗೆ ಬನ್ನಿ ಎಂದು ಆಹ್ವಾನಿಸಿದವು. ಅದನ್ನೆ ಪ್ರಚಾರವನ್ನಾಗಿ ಬಳಸಿಕೊಂಡು ವೆಂಕಟ್ ಕೂಡ ಸ್ಟಾರ್ ಆಗಿ ಮೆರೆದರು.

    ಬಿಗ್ ಬಾಸ್ ಬಾಗಿಲು ತಟ್ಟಿದ ವೆಂಕಟ್

    ಬಿಗ್ ಬಾಸ್ ಬಾಗಿಲು ತಟ್ಟಿದ ವೆಂಕಟ್

    ಅಷ್ಟೊತ್ತಿಗಾಗಲೇ ಕನ್ನಡದಲ್ಲಿ ಬಿಗ್ ಬಾಸ್ ಆರಂಭವಾಗಿತ್ತು. ಜನರನ್ನ ನಿಂದಿಸಿ ಇಷ್ಟೆಲ್ಲಾ ಹವಾ ಮಾಡಿದ ವೆಂಕಟ್ ಅವರನ್ನ, ಬಿಗ್ ಬಾಸ್ ಮನೆಗೆ ಕಳುಹಿಸಿದ್ರೆ ಹೇಗಿರುತ್ತೆ ಎಂಬ ಮಾತು ಬಂತು. ಕೊನೆಗೂ ಬಿಗ್ ಬಾಸ್ ಆಯೋಜಕರು ಬಿಗ್ ಬಾಸ್ ಗೆ ಅವಕಾಶ ಕೊಟ್ಟೆ ಬಿಟ್ಟರು. ಅಲ್ಲಿಯೂ ವೆಂಕಟ್ ಹವಾ ಸಖತ್ ಜೋರಾಗಿತ್ತು. ರವಿ ಎಂಬ ಸ್ಪರ್ಧಿ ಮೇಲೆ ಹಲ್ಲೆ ಮಾಡಿ ಹೊರಬಂದರು. ಹೊರಬಂದ ಮೇಲೆ ಮತ್ತಷ್ಟು ಪ್ರಚಾರ ಸಿಕ್ತು.

    ಪ್ರೀತಿಯ ಆಟ ಆರಂಭಿಸಿದ ವೆಂಕಟ್

    ಪ್ರೀತಿಯ ಆಟ ಆರಂಭಿಸಿದ ವೆಂಕಟ್

    ಬಿಗ್ ಬಾಸ್ ಮುಗಿದ ಬಳಿಕ 'ಸೂಪರ್ ಜೋಡಿ' ಎಂಬ ಇನ್ನೊಂದು ಶೋಗೆ ವೆಂಕಟ್ ಅವರನ್ನ ಸ್ಪರ್ಧಿಯಾಗಿ ಆಯ್ಕೆ ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ ವೆಂಕಟ್ ಜೊತೆ ರಚನಾ ಎಂಬ ಹುಡುಗಿ ಜೋಡಿಯಾಗಿ ಆಟ ಆಡಿದ್ದರು. ಶೋ ಮುಗಿದ ಮೇಲೆ ರಚನಾ ನನ್ನನ್ನು ಲವ್ ಮಾಡಿ, ಮೊಸ ಮಾಡಿದ್ದಾರೆ ಎಂಬ ಆರೋಪ ಮಾಡಿ ಮತ್ತಷ್ಟು ಸುದ್ದಿಯಾದರು ವೆಂಕಟ್.

    ಪೆನಾಯಿಲ್ ಕುಡಿದ ಫೈರಿಂಗ್ ಸ್ಟಾರ್

    ಪೆನಾಯಿಲ್ ಕುಡಿದ ಫೈರಿಂಗ್ ಸ್ಟಾರ್

    ಅಷ್ಟೊತ್ತಿಗಾಗಲೇ ಹುಚ್ಚ ವೆಂಕಟ್ ಅಪಾರ ಅಭಿಮಾನಿಗಳನ್ನ ಹೊಂದಿದ್ದರು. ಫೈರಿಂಗ್ ಸ್ಟಾರ್, ಯೂಟ್ಯೂಬ್ ಸ್ಟಾರ್ ಎಂದೆಲ್ಲ ಗುರುತಿಸಿಕೊಂಡಿದ್ದರು. ಈ ಮಧ್ಯೆ ಪೆನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕು ಮುಂದಾಗಿದ್ದರು.

    ಬಹುಶಃ ಆ ವಿಡಿಯೋ ಆಗಬಾರದಿತ್ತು

    ಬಹುಶಃ ಆ ವಿಡಿಯೋ ಆಗಬಾರದಿತ್ತು

    ಹೀಗೆ ಹುಚ್ಚ ವೆಂಕಟ್ ಆಟ, ರಂಪಾಟ ಒಂದೆರಡಲ್ಲ. ರಾಜಾಜಿನಗರದಲ್ಲಿ ಒಬ್ಬರ ಮೇಲೆ ಹಲ್ಲೆ ಮಾಡಿದ್ರು, ಪ್ರಥಮ್ ಮೇಲೆ ಹಲ್ಲೆ ಮಾಡಿದ್ರು, ಸಾರ್ವಜನಿಕರಿಂದ ಗೂಸಾ ತಿಂದರು, ಚೆನ್ನೈನಲ್ಲಿ ಹುಚ್ಚನಂತೆ ಅಲೆದಾಡಿದರು. ಮಡಿಕೇರಿಯಲ್ಲಿ ಗಲಾಟೆ ಮಾಡಿದರು. ಇದೆಲ್ಲ ನೋಡಿದಾಗ ಇದೆಲ್ಲ ಬೇಕಿತ್ತಾ, ನಾಲ್ಕು ವರ್ಷದ ಹಿಂದೆ ವೆಂಕಟ್ ಮಾತನಾಡಿದ್ದ ಆ ವಿಡಿಯೋ ಬೈಟ್ ಗೆ ಇಷ್ಟೊಂದು ಪ್ರಾಮುಖ್ಯತೆ ಕೊಡದೇ ಇದಿದ್ದರೇ ಬಹುಶಃ ವೆಂಕಟ್ ಅವತ್ತೆ ಸೈಲೆಂಟ್ ಆಗಿರ್ತಿದ್ದರೋ ಏನೋ.

    English summary
    Huccha Venkat made his acting debut playing a supporting role in the 2005 Kannada film Mental Manja. His next role was as the lead in the 2009 film Swathanthra Palya.
    Sunday, September 1, 2019, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X