»   » ಮಾಗಡಿ ರೋಡ್ನಲ್ಲಿರುವ 'ದಿ ಸಿನಿಮಾ' ಇವತ್ತಿಂದ ಪ್ರಾರಂಭ: ಟಿಕೆಟ್ ಬೆಲೆಯೆಷ್ಟು.?

ಮಾಗಡಿ ರೋಡ್ನಲ್ಲಿರುವ 'ದಿ ಸಿನಿಮಾ' ಇವತ್ತಿಂದ ಪ್ರಾರಂಭ: ಟಿಕೆಟ್ ಬೆಲೆಯೆಷ್ಟು.?

Posted By:
Subscribe to Filmibeat Kannada

ಬೆಂಗಳೂರಿನ ಮಾಗಡಿ ರೋಡ್ ನಲ್ಲಿರುವ ಪ್ರತಿಷ್ಟಿತ ಚಿತ್ರಮಂದಿರಗಳ ಪೈಕಿ ಪ್ರಸನ್ನ ಹಾಗೂ ಪ್ರಮೋದ್ ಪ್ರಮುಖವಾದವು. ಪ್ರಮೋದ್ ಥಿಯೇಟರ್ ನೆಲಸಮವಾದ ಬಳಿಕ ಅದೇ ಜಾಗದಲ್ಲಿ ಸದ್ಯ 'ಜಿ.ಟಿ.ವರ್ಲ್ಡ್ ಮಾಲ್' (ಗಂಗಮ್ಮ ತಿಮ್ಮಯ್ಯ ವರ್ಲ್ಡ್ ಮಾಲ್) ತಲೆ ಎತ್ತಿ ನಿಂತಿದೆ.

ಇದೀಗ ಜಿ.ಟಿ.ವರ್ಲ್ಡ್ ಮಾಲ್ ನಲ್ಲಿಯೇ 'ದಿ ಸಿನಿಮಾ' ಎಂಬ ಐದು ಸ್ಕ್ರೀನ್ ಗಳಿರುವ ಮಲ್ಟಿಪ್ಲೆಕ್ಸ್ ಇಂದಿನಿಂದ ಕಾರ್ಯ ಆರಂಭಿಸಲಿದೆ. 'ದಿ ಸಿನಿಮಾ'ದಲ್ಲಿ ಇವತ್ತಿನಿಂದ ನೀವು ಪಾಪ್ ಕಾರ್ನ್ ಸವಿಯುತ್ತಾ ಚಿತ್ರವನ್ನ ವೀಕ್ಷಿಸಬಹುದು.

ಪೇಪರ್ ಮೇಲಿನ 'ಸಿಂಹ'ವಾಯಿತೇ 200.ರೂಗೆ ಸಿನಿಮಾ ಟಿಕೆಟ್ ಆದೇಶ.!?

ಚೆನ್ನೈನಲ್ಲಿ 'ಸತ್ಯಂ ಸಿನಿಮಾಸ್' ಎಂದೇ ಖ್ಯಾತಿ

ಚೆನ್ನೈನಲ್ಲಿ 'ಸತ್ಯಂ ಸಿನಿಮಾಸ್' ಎಂದೇ ಖ್ಯಾತಿ ಪಡೆದಿರುವ ಎಸ್.ಪಿ.ಐ ಸಿನಿಮಾಸ್ ಕರ್ನಾಟಕದಲ್ಲಿ ತೆರೆದಿರುವ ಮೊಟ್ಟ ಮೊದಲ ಖಾತೆ 'ದಿ ಸಿನಿಮಾ'. ಐದು ಸ್ಕ್ರೀನ್ ಗಳು ಇರುವ 'ದಿ ಸಿನಿಮಾ' ಮಲ್ಟಿಪ್ಲೆಕ್ಸ್ ನಲ್ಲಿ ಒಟ್ಟು 1155 ಸೀಟಿಂಗ್ ವ್ಯವಸ್ಥೆ ಇದೆ. ಪ್ರತಿ ಸ್ಕ್ರೀನ್ ನಲ್ಲಿಯೂ ಗೋಲ್ಡ್ ಕ್ಲಾಸ್ ಹಾಗೂ ಎಕ್ಸಿಕ್ಯೂಟಿವ್ ಗೋಲ್ಡ್ ಕ್ಲಾಸ್ ಎಂಬ ಎರಡು ವಿಭಾಗಗಳಿವೆ.

ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಘೋರ ಅವಮಾನ: ಇಂಥ ಮಾಲ್ ಗಳು ಬೇಕಾ.?

ಅತ್ಯುತ್ತಮ ತಂತ್ರಜ್ಞಾನ

''ದಿ ಸಿನಿಮಾ'ದಲ್ಲಿ ಅತ್ಯುತ್ತಮ ಸೌಂಡ್ ಹಾಗೂ ಪ್ರೊಜೆಕ್ಷನ್ ತಂತ್ರಜ್ಞಾನ ಇದೆ. ಎಲ್ಲ ಸ್ಕ್ರೀನ್ ಗಳಲ್ಲೂ 4K ಪ್ರೊಜೆಕ್ಷನ್, 3D ತಂತ್ರಜ್ಞಾನ ಹಾಗೂ ಡಾಲ್ಬಿ ಅಟ್ಮೋಸ್ ಇದೆ'' ಎಂದು ಎಸ್.ಪಿ.ಐ ಸಿನಿಮಾಸ್ ನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಕೊನೆಗೂ ಕನ್ನಡ ಸಿನಿಪ್ರಿಯರ ಬೇಡಿಕೆ ಈಡೇರುತ್ತಾ.?

ಚೆನ್ನೈನ 'ಎಸ್ಕೇಪ್' ಶೈಲಿಯಲ್ಲಿ...

ಚೆನ್ನೈನಲ್ಲಿ ಇರುವ 'ಎಸ್.ಪಿ.ಐ ಎಸ್ಕೇಪ್' ಮಲ್ಟಿಪ್ಲೆಕ್ಸ್ ಶೈಲಿಯಲ್ಲಿಯೇ ಬೆಂಗಳೂರಿನ 'ದಿ ಸಿನಿಮಾ' ಒಳಾಂಗಣ ವಿನ್ಯಾಸ ಮಾಡಲಾಗಿದೆ. ಕುರುಕು ತಿಂಡಿ, ತಂಪು ಪಾನೀಯ, ಪಾಪ್ ಕಾರ್ನ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದೆ.

ಟಿಕೆಟ್ ಬೆಲೆ ಎಷ್ಟು.?

'ದಿ ಸಿನಿಮಾ'ದಲ್ಲಿ ಗೋಲ್ಡ್ ಕ್ಲಾಸ್ ಟಿಕೆಟ್ ಗಳ ಬೆಲೆ 170 ರೂಪಾಯಿಯಿಂದ 290 ರವರೆಗೂ ಇರಲಿದೆ. ಇನ್ನೂ ಎಲೈಟ್ ಕ್ಲಾಸ್ ಬೆಲೆ 100 ರೂಪಾಯಿಯಿಂದ ಶುರು ಆಗಲಿದೆ. (ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್)

English summary
Five Screen Multiplex, 'The Cinema' at GT World Mall in Magadi Road, Bengaluru opens today (Friday June 9th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada