twitter
    For Quick Alerts
    ALLOW NOTIFICATIONS  
    For Daily Alerts

    ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಸಂಭ್ರಮ: ಕುತೂಹಲ ಮೂಡಿಸಿದ ಜೂ.ಚಿರು ಹೆಸರು

    |

    ಮೇಘನಾ ರಾಜ್ ಮತ್ತು ಸರ್ಜಾ ಕುಟುಂಬದಲ್ಲಿ ಅನೇಕ ತಿಂಗಳ ಬಳಿಕ ಸಂಭ್ರಮ ಮನೆ ಮಾಡಿದೆ. ಮೇಘನಾ ರಾಜ್ ಮುದ್ದಾದ ಮಗು ಈ ಎರಡು ಕುಟುಂಬಕ್ಕೆ ಸಂತೋಷವನ್ನು ಹೊತ್ತು ಬಂದಿದ್ದಾನೆ. ಚಿರಂಜೀವಿ ಸರ್ಜಾನನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಚಿರಂಜೀವಿ ಮಗ ಬೆಳಗಾಗಿ ಬಂದಿದ್ದಾನೆ.

    ಮೇಘನಾ ರಾಜ್ ಕಳೆದ ತಿಂಗಳು ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ 20 ದಿನಗಳ ಬಳಿಕ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಹೌದು, ನಾಳೆ ನವೆಂಬರ್ 12ರಂದು ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮೇಘನಾ ರಾಜ್ ಮುದ್ದಾದ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನಡೆಯಲಿದೆ.

    ಮೊಮ್ಮಗನಿಗೆ ಮುದ್ದಾದ ಹೆಸರಿಟ್ಟ ಸುಂದರ್ ರಾಜ್; ಪ್ರೀತಿಯಿಂದ ಏನಂತ ಕರೆಯುತ್ತಾರೆ ನೋಡಿಮೊಮ್ಮಗನಿಗೆ ಮುದ್ದಾದ ಹೆಸರಿಟ್ಟ ಸುಂದರ್ ರಾಜ್; ಪ್ರೀತಿಯಿಂದ ಏನಂತ ಕರೆಯುತ್ತಾರೆ ನೋಡಿ

    ಈ ಬಗ್ಗೆ ಮೇಘನಾ ತಂದೆ ಸುಂದರ್ ರಾಜ್ ಮಾಹಿತಿ ನೀಡಿದ್ದಾರೆ.

    'ನಮ್ಮ ಪುಟ್ಟ ಸಂಸಾರಕ್ಕೆ ಮಗನಂತೆ ಬಂದ ಅಳಿಯ ಚಿರಂಜೀವಿ ಸರ್ಜಾ. ಚಿರು ಮರಣದ ನಂತರ ಸದಾ ದುಃಖದಲಿದ್ದ ನಮ್ಮ ಕುಟುಂಬಕ್ಕೆ ಸಂತಸ ನೀಡಲು ಚಿರು ಮತ್ತೆ ನಮ್ಮ ಮೊಮ್ಮಗನ ರೂಪದಲ್ಲಿ ಬಂದು ಸಂತಸ ತಂದಿದ್ದಾನೆ. ಇದೇ ನವೆಂಬರ್ 12 ರ ಗುರುವಾರ ಮಧ್ಯಾಹ್ನ 12ಕ್ಕೆ ನಮ್ಮ ಮನೆಯಲ್ಲಿ ನಮ್ಮ ಮೊಮ್ಮಗನಿಗೆ ತೊಟ್ಟಿಲಿಗೆ ಹಾಕುವ ಶಾಸ್ತ್ರ ನಡೆಸಲಿದ್ದೇವೆ' ಎಂದು ಹೇಳಿದ್ದಾರೆ.

    The Cradle Ceremony Of Meghana Rajs Son Will Be Held On November 12th

    ತೀರ ಖಾಸಗಿಯಾಗಿ ನಡೆಯುವ ತೊಟ್ಟಿಲ ಶಾಸ್ತ್ರದ ಸಂಭ್ರಮದಲ್ಲಿ ಮೇಘನಾ ರಾಜ್ ಕುಟುಂಬ ಮತ್ತು ಸರ್ಜಾ ಕುಟುಂಬದವರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಇದೇ ಸಮಯದಲ್ಲಿ ಮೇಘನಾ ಮಾಧ್ಯಮದರ ಜೊತೆ ಮಾತನಾಡುವ ಸಾಧ್ಯತೆ ಇದೆ.

    Recommended Video

    ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರದ ಬಗ್ಗೆ ಮಾತನಾಡಿದ ಕೈಮರ ಚಿತ್ರತಂಡ | Filmibeat Kannada

    ವಿಶೇಷ ಎಂದರೆ ಮೇಘನಾ ಮಗನಿಗೆ ಏನೆಂದು ಹೆಸರಿಡಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈಗಾಗಲೇ ಅನೇಕರು ಹಲವು ಹೆಸರುಗಳಿಂದ ಕರೆಯುತ್ತಿದ್ದಾರೆ. ಈಗಾಗಲೇ ಈ ಮುದ್ದಾದ ಮಗು ಜೂ.ಚಿರು ಎಂದೇ ಖ್ಯಾತಿಗಳಿಸಿದೆ. ಇನ್ನೂ ತಾತ ಸುಂದರ್ ರಾಜ್ ಮೊಮ್ಮಗನಿಗೆ ಚಿಂಟು ಎಂದು ಕರೆಯುತ್ತಾರೆ. ಆದರೆ ಅಧಿಕೃತವಾಗಿ ಮಗನಿಗೆ ಏನೆಂದು ಹೆಸರಿಡಲಿದ್ದಾರೆ ಎನ್ನುವುದು ನಾಳೆ ಬಹಿರಂಗವಾಗಲಿದೆ.

    English summary
    The Cradle ceremony of Meghana Raj and Chiranjeevi Sarja son will be held on November 12th.
    Wednesday, November 11, 2020, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X