ಇನ್ನೂ ಆ ಹುಡುಗಿಯ ನಿರೀಕ್ಷೆಯಲ್ಲಿ ರಜನಿಕಾಂತ್!
"ಆ ಹುಡುಗಿ ಎಂದೋ ಒಂದು ದಿನ ತನ್ನ ಕಣ್ಣಿಗೆ ಬಿದ್ದೇ ಬೀಳುತ್ತಾಳೆ. ಕಳೆದ ಮೂವತ್ತು ವರ್ಷಗಳಿಂದ ಆಕೆಗಾಗಿ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ. ಇಷ್ಟಕ್ಕೂ ರಜನಿಕಾಂತ್ ನಿರೀಕ್ಷಿಸುತ್ತಿರುವ ಆ ಹುಡುಗಿ ಯಾರೆಂದರೆ...ಅವರ ಮೊಟ್ಟ ಮೊದಲ ಅಭಿಮಾನಿ.
ಸರಿಸುಮಾರು ಮೂವತ್ತು ವರ್ಷಗಳ ಹಿಂದೆ ರಜನಿ ಚೊಚ್ಚಲ ಚಿತ್ರ 'ಅಪೂರ್ವ ರಾಗಂಗಲ್' ಬಿಡುಗಡೆ ಆದಾಗ ಆಕೆ ಮೊದಲ ಬಾರಿ ತಮ್ಮ ಆಟೋಗ್ರಾಫ್ ತೆಗೆದುಕೊಂಡ ಘಟನೆಯನ್ನು ರಜನಿ ಈಗಲೂ ಮೆಲುಕು ಹಾಕುತ್ತಲೇ ಇದ್ದಾರೆ.
ಈ ಬಗ್ಗೆ ಅವರು ಮಾತನಾಡುತ್ತಾ...ತಾನು ಚೆನ್ನೈನಲ್ಲಿನ ಕೃಷ್ಣವೇಣಿ ಚಿತ್ರಮಂದಿರಗಲ್ಲಿ 'ಅಪೂರ್ವ ರಾಗಂಗಳ್' ಚಿತ್ರ ಬಿಡುಗಡೆಯಾದಾಗ ನೋಡಲು, ಪ್ರೇಕ್ಷಕರ ಪ್ರತಿಕ್ರಿಯೆ ತಿಳಿದುಕೊಳ್ಳುವ ಸಲುವಾಗಿ ಹೋಗಿದ್ದೆ. ಆಗ ಪುಟ್ಟ ಹುಡುಗಿಯೊಬ್ಬಳು ನನ್ನ ಅಭಿಮಾನಿ ಎಂದು ಹೇಳಿ ಆಟೋಗ್ರಾಫ್ ತೆಗೆದುಕೊಂಡಳು.
ಆಗ ಆಟೋಗ್ರಾಫ್ ಪುಸ್ತಕ ಇರಲಿಲ್ಲ. ಕೇವಲ ಆಕೆಯ ಬಳಿ ಇದ್ದ ಸಿನಿಮಾ ಟಿಕೆಟ್ ಹಿಂದೆ ತಾನು ಹಸ್ತಾಕ್ಷರ ಗೀಚಿ ಕೊಟ್ಟಿದ್ದೆ. ಈ ಘಟನೆ ನನ್ನ ಜೀವನಪೂರ್ತಿ ಮರೆಯಲಾಗದ ಘಟನೆಯಾಗಿ ಉಳಿದುಹೋಯಿತು. ಏಕೆಂದರೆ ತಾನು ಕೊಟ್ಟ ಮೊಟ್ಟ ಮೊದಲ ಆಟೋಗ್ರಾಫ್ ಅದಾಗಿತ್ತು.
ತನ್ನ ಮೊದಲ ಆಟೋಗ್ರಾಫ್ ಪಡೆದ ಆಕೆಯನ್ನು ಮತ್ತೆ ನೋಡಬೇಕೆಂದು ಮೂವತ್ತು ವರ್ಷಗಳಿಂದ ತವಕಿಸುತ್ತಲೇ ಇದ್ದೇನೆ. ಆದರೂ ಆಕೆ ಎಲ್ಲೂ ಕಣ್ಣಿಗೆ ಬೀಳಲಿಲ್ಲ ಎಂದಿದ್ದಾರೆ ರಜನಿ. ಈ ಘಟನೆಯನ್ನು ರಜನಿಕಾಂತ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳ ಜೊತೆ ಹಂಚಿಕೊಂಡರು. ಮುಂದಾದರೂ ಆಕೆ ರಜನಿ ಕಣ್ಣಿಗೆ ಬೀಳುತ್ತಾರಾ? (ಒನ್ಇಂಡಿಯಾ ಕನ್ನಡ)


Click it and Unblock the Notifications












