»   » ಸ್ಯಾಂಡಲ್ ವುಡ್ ಅನ್ ಲಕ್ಕಿ ಹುಡ್ಗಿ ಯಾರು ಗೊತ್ತಾ?

ಸ್ಯಾಂಡಲ್ ವುಡ್ ಅನ್ ಲಕ್ಕಿ ಹುಡ್ಗಿ ಯಾರು ಗೊತ್ತಾ?

Posted By:
Subscribe to Filmibeat Kannada

ಈ ಪ್ರಶ್ನೆಗೆ ಉತ್ತರ ಹೇಳುವುದಕ್ಕೂ ಮುನ್ನ ಒಂದೆರಡು ಮಾತು. ಕೆಲವು ತಾರೆಗಳು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿರುತ್ತವೆ. ಇನ್ನೂ ಕೆಲವು ತಾರೆಗಳ ಪಾಲಿಗೆ ಚಿನ್ನ ಮುಟ್ಟಿದರೂ ಮಣ್ಣಾಗುವ ಪರಿಸ್ಥಿತಿ. ಇದನ್ನೇ ಅಲ್ಲವೆ ಹಣೆಬರಹ ಅನ್ನುವುದು. ಇರಲಿ ಬಿಡಿ ಈಗ ಸ್ಯಾಂಡಲ್ ವುಡ್ ನ ಅನ್ ಲಕ್ಕಿ ಹುಡ್ಗಿ ಯಾರು?

ಅನುಮಾನವೇ ಬೇಡ ಅದು ಪೂಜಾಗಾಂಧಿ. ಪಾಪ ಪೂಜಾ ಏನೇ ಮಾಡಿದ್ರೂ ಉಲ್ಟಾ ಹೊಡೀತಿದೆ. ಪೂಜಾ ಗಾಂಧಿ ಅನ್ನೋ ಹುಡುಗಿ ಸ್ಯಾಂಡಲ್ ವುಡ್ ನಲ್ಲಿ ಎಬ್ಬಿಸಿದ ಯಶಸ್ಸಿನ ಫೈಲಿನ್ ಚಂಡಮಾರುತಕ್ಕೆ ಸುರಿದ ಮುಂಗಾರುಮಳೆ ನೋಡಿದ ಸ್ಯಾಂಡಲ್ ವುಡ್ ರಮ್ಯಾಳ ಲಕ್ಕಿ ಸ್ಟಾರ್ ಪಟ್ಟ ಕಿತ್ತುಕೊಂಡು ಪೂಜಾಗೆ ಕೊಟ್ಟಿತ್ತು.

ಆದ್ರೆ ಪೂಜಾ ಈಗ ಬ್ಯಾಡ್ ಲಕ್ ಕ್ವೀನ್ ಆಗ್ತಿದ್ದಾರೆ ಪೂಜಾಗಾಂಧಿ. ಏನೇ ಆಗ್ಲಿ ಬ್ಯಾಡ್ ಲಕ್ ಈ ಪರಿ ಕಾಡಬಾರದು. ಯಾಕಂದ್ರೆ ಪೂಜಾಗಾಂಧಿ ಟ್ಯಾಲೆಂಟೆಡ್ ನಟಿ. ಯಾಕೆ ಅನ್ನೋ ಡೀಟೈಲ್ಸ್ ಸ್ಲೈಡ್ ನಲ್ಲಿದೆ ನೋಡ್ತಾ ಹೋಗಿ.

ಪೂಜಾಗೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾಗಳು

2006 ಮುಂಗಾರುಮಳೆ,2007ರ ತಾಜ್ ಮಹಲ್ ಮಾತ್ರ ಪೂಜಾಗೆ ಬಿಗ್ ಬ್ರೇಕ್ ಕೊಟ್ಟ ಸಿನಿಮಾಗಳು.

ಫ್ಲಾಪ್ ಹೀರೋಯಿನ್ ಅನ್ನಿಸಿಕೊಂಡ ಪೂಜಾ

2007ರಿಂದ 2011ರವರೆಗೆ ಪೂಜಾಳ ಅಷ್ಟೂ ಸಿನಿಮಾಗಳು ಫ್ಲಾಪ್

ದಂಡುಪಾಳ್ಯ ಮಾತ್ರ ಒಂದಷ್ಟು ರಿಲೀಫ್ ಕೊಡ್ತು

5 ವರ್ಷದಿಂದೀಚೆಗೆ 2012ರಲ್ಲಿ ಬಂದ ದಂಡುಪಾಳ್ಯ ಮಾತ್ರ ಯಶಸ್ಸು ಕಂಡ ಸಿನಿಮಾ

ಕಾಡಿದ ಬೆನ್ನಿನ ವಿವಾದ

ದಂಡುಪಾಳ್ಯದಲ್ಲೂ ಬೆನ್ನು ತೋರಿಸಿ ವಿವಾದ ಮಾಡಿಕೊಂಡರು.

ಮದುವೆ ವಿಚಾರದಲ್ಲೂ ಪೂಜಾ ಅನ್ ಲಕ್ಕಿ

ಮದುವೆ ವಿಷಯದಲ್ಲೂ ಪೂಜಾ ಅನ್ ಲಕ್ಕಿ ಫೆಲೋ. ಆನಂದ್ ಗೌಡ ಜೊತೆ ಪೂಜಾ ಮಾಡಿಕೊಂಡ ನಿಶ್ಚಿತಾರ್ಥ ಮುರಿದುಬಿತ್ತು.

ರಾಜಕೀಯವೂ ಪೂಜಾ ಪಾಲಿಗೆ ಆಗಿಬರಲಿಲ್ಲ

ರಾಜಕೀಯಕ್ಕಿಳಿದು ಮತ್ತೆ ಮತ್ತೆ ಪಕ್ಷ ಬದಲಿಸಿದ ಪೂಜಾ ಗಾಂಧಿಗೆ ಯಾವ ಪಕ್ಷವೂ ಸರಿಯಾಗಲಿಲ್ಲ.

ಠೇವಣಿ ಕಳೆದುಕೊಂಡ ತಾರೆ

ಕೊನೆಗೆ ಬಿಎಸ್ಆರ್ ಕಾಂಗ್ರೆಸ್ ನಿಂದ ರಾಯಚೂರಲ್ಲಿ ನಿಂತ್ರೆ ಠೇವಣಿ ಕಳ್ಕೊಂಡು ಸೋಲಬೇಕಾಯ್ತು.

ಅಭಿನೇತ್ರಿ ಚಿತ್ರಕ್ಕೂ ಹಿನ್ನೆಡೆ

'ಅಭಿನೇತ್ರಿ' ಅನ್ನೋ ಸಿನಿಮಾ ಮಾಡೋಕೆ ಹೊರಟ ಪೂಜಾ ಭರ್ಜರಿ ಮುಹೂರ್ತ ಮಾಡಿದ್ರೂ ಈಗ ಆ ಸಿನಿಮಾ ಕೂಡ ನಿಂತುಹೋದ ಸುದ್ದಿ ಬಂದಿದೆ.

ಹಂತಕಿ ಸಿನಿಮಾ ಕೂಡ ಶೂಟಿಂಗ್ ಇಲ್ಲ

ಅಭಿನೇತ್ರಿಗೂ ಮೊದಲು ಪೂಜಾ ನಟಿಸಬೇಕಿದ್ದ ಹಂತಕಿ ಸಿನಿಮಾ ಕೂಡ ಹಲವು ಕಾರಣಗಳಿಂದ ಶೂಟಿಂಗ್ ಶುರು ಮಾಡದೇ ಉಳಿದುಹೋಗಿದೆ.

ತಿಪ್ಪಜ್ಜಿ ಸರ್ಕಲ್ ಚಿತ್ರಕ್ಕೂ ತಡೆ

ಇನ್ನು ಈಗ ತಿಪ್ಪಜ್ಜಿ ಸರ್ಕಲ್ ಅನ್ನೋ ನೈಜಘಟನೆಯಾಧಾರಿತ ಸಿನಿಮಾದಲ್ಲಿ ಅಭಿನಯಿಸ್ತಾ ಇರೋ ಪೂಜಾಗೆ ಮತ್ತೊಂದು ಶಾಕ್. ಈ ಚಿತ್ರದ ಶೂಟಿಂಗ್ ಮಾಡದಂತೆ ತಡೆಬಂದಿದೆ. ಕೋರ್ಟ್ ಈ ವಿವಾದಾತ್ಮಕ ಚಿತ್ರಕ್ಕೆ ತಡೆ ನೀಡಿದೆ.

English summary
Who is the most unlucky girl in the Sandalwood film industry? No dought about it, the most unlucky star is Pooja Gandhi. What really happend to the talented actress?
Please Wait while comments are loading...