»   » ಕಿಚ್ಚ ಸುದೀಪ್ 'ಮಾಣಿಕ್ಯ' ವೆಬ್ ಸೈಟ್ ಲೋಕಾರ್ಪಣೆ

ಕಿಚ್ಚ ಸುದೀಪ್ 'ಮಾಣಿಕ್ಯ' ವೆಬ್ ಸೈಟ್ ಲೋಕಾರ್ಪಣೆ

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಭಾರಿ ಬಜೆಟ್ ಚಿತ್ರ 'ಮಾಣಿಕ್ಯ' ಬಿಡುಗಡೆಗೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ನಲ್ಲ ಸುದೀಪ್ ಹಾಗೂ ಮಲ್ಲ ರವಿಚಂದ್ರನ್ ಇದೇ ಮೊದಲ ಸಲ ಒಟ್ಟಿಗೆ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು ಮೇ.1ರಂದು ಪ್ರೇಕ್ಷಕರ ಮುಂದೆ ಬರುತ್ತಿದೆ.

ಇದೀಗ ಮಾಣಿಕ್ಯ ಚಿತ್ರಕ್ಕೆ ಸಂಬಂಧಿಸಿದ ವೆಬ್ ಸೈಟ್ ಲೋಕಾರ್ಪಣೆಗೊಂಡಿದೆ. ಈ ವೆಬ್ ಸೈಟ್ ನಲ್ಲಿ ಚಿತ್ರಕ್ಕೆ ಸಂಬಂಧಿಸಿದಂತೆ ಮಾಹಿತಿ, ಫೋಟೋಗಳು, ವಿಡಿಯೋಗಳು ಅಡಕವಾಗಿವೆ. ಈ ಚಿತ್ರ ರೀಮೇಕ್ ಆದರೂ ಕನ್ನಡದಲ್ಲಿ ಹೇಗೆ ಮೂಡಿಬಂದಿದೆ ಎಂಬ ಕುತೂಹಲ ಇದ್ದೇ ಇದೆ. [ತಮಿಳಿನಲ್ಲಿ ಸುದೀಪ್ ಗೆ ರು.6 ಕೋಟಿ ಸಂಭಾವನೆ]


ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೆ 'ಮಾಣಿಕ್ಯ' ಚಿತ್ರ ಬಿಡುಗಡೆಯಾಗಬೇಕಿತ್ತು. ಯುಗಾದಿ ಹಬ್ಬಕ್ಕೇ ತೆರೆಗೆ ಬರಬೇಕಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಕಾರಣ ಚಿತ್ರವನ್ನು ತೆರೆಗೆ ತರಲು ಸಾಧ್ಯವಾಗಲಿಲ್ಲ.

ಸ್ವಮೇಕ್ ಚಿತ್ರಕ್ಕಿಂತಲೂ ರೀಮೇಕ್ ಚಿತ್ರವನ್ನು ಮಾಡುವುದೇ ಚಾಲೆಂಜಿಂಗ್ ಕೆಲಸ ಎನ್ನುವ ಸುದೀಪ್, ಮೂಲ ಚಿತ್ರಕ್ಕಿಂತಲೂ ತಮ್ಮ 'ಮಾಣಿಕ್ಯ' ಚಿತ್ರವನ್ನು ಹೆಚ್ಚು ಪವರ್ ಫುಲ್ ಆಗಿ ತೆರೆಗೆ ತರುತ್ತಿದ್ದಾರೆ. ತೆಲುಗಿನ ಯಶಸ್ವಿ ಚಿತ್ರ ಮಿರ್ಚಿ ರಿಮೇಕ್ ಇದಾಗಿದೆ.

ಮೂಲ ಚಿತ್ರದಲ್ಲಿ ಪ್ರಭಾಸ್, ಸತ್ಯರಾಜ್, ಅನುಷ್ಕಾ ಶೆಟ್ಟಿ, ರಿಚಾ ಗಂಗೋಪಾಧ್ಯಾಯ ಮುಂತಾದವರು ಅಭಿನಯಿಸಿದ್ದರು. ತೆಲುಗು ಸ್ಕ್ರಿಪ್ಟ್ ರೈಟರ್ ಕೊರಟಾಲ ಶಿವ ನಿರ್ದೇಶನದ ಚೊಚ್ಚಲ ಚಿತ್ರವಿದು. ಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿದ್ದ 'ಮಿರ್ಚಿ' ಚಿತ್ರ ಬಾಕ್ಸ್ ಆಫೀಸಲ್ಲಿ ರು.103 ಕೋಟಿ ಗಳಿಸಿ ದಾಖಲೆ ನಿರ್ಮಿಸಿತು.

ಮಾಣಿಕ್ಯ ಚಿತ್ರಕ್ಕೆ ಆಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆಯನ್ನೂ ಸುದೀಪ್ ಅವರೇ ಹೆಣೆದಿರುವುದು ವಿಶೇಷ. ಅರ್ಜುನ್ ಜನ್ಯ ಸಂಗೀತವಿರುವ ಚಿತ್ರದ ಪಾತ್ರವರ್ಗದಲ್ಲಿ ರಮ್ಯಕೃಷ್ಣ ಸಹ ಇದ್ದಾರೆ. ಸುದೀಪ್ ಅವರಿಗೆ ತಂದೆಯಾಗಿ ರವಿಚಂದ್ರನ್ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ನಲ್ಲ ಮಲ್ಲರ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ. (ಒನ್ಇಂಡಿಯಾ ಕನ್ನಡ)

English summary
The official website of Maanikya launched, the Kannada movie by Kichcha Sudeep. Maanikya is a visual treat and this website is an attempt to get you all closer to the film. Stay online and get the exclusive updates of movie. 
Please Wait while comments are loading...