»   » 2015-2016 ಸಾಲಿನ ಕನ್ನಡ ಚಿತ್ರಗಳ ಸಹಾಯ ಧನಕ್ಕಾಗಿ ಆಯ್ಕೆ ಸಮಿತಿ ರಚನೆ

2015-2016 ಸಾಲಿನ ಕನ್ನಡ ಚಿತ್ರಗಳ ಸಹಾಯ ಧನಕ್ಕಾಗಿ ಆಯ್ಕೆ ಸಮಿತಿ ರಚನೆ

Posted By:
Subscribe to Filmibeat Kannada

2015 ಮತ್ತು 2016ನೇ ಕ್ಯಾಲೆಂಡರ್ ವರ್ಷದ ಸಹಾಯ ಧನಕ್ಕಾಗಿ ಕನ್ನಡ ಮತ್ತು ಪ್ರಾದೇಶಿಕ ಭಾಷಾ ಗುಣಾತ್ಮಕ ಚಲನಚಿತ್ರಗಳನ್ನು ಆಯ್ಕೆ ಮಾಡಲು ಆಯ್ಕೆ ಸಲಹಾ ಸಮಿತಿಗಳನ್ನು ರಚಿಸಿ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಎರಡು ವರ್ಷಕ್ಕೂ ಪ್ರತ್ಯೇಕ ಆಯ್ಕೆ ಸಲಹಾ ಸಮಿತಿಯನ್ನ ರಚಿಸಿಲಾಗಿದೆ.

2015 ನೇ ಸಾಲಿನ ಆಯ್ಕೆ ಸಲಹಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಪಿ.ಶೇಷಾದ್ರಿ ಅವರು ಆಯ್ಕೆಯಾಗಿದ್ದರೆ, 2016ನೇ ಸಾಲಿನ ಆಯ್ಕೆ ಸಲಹಾ ಸಮಿತಿಯ ಅಧ್ಯಕ್ಷರಾಗಿ ಖ್ಯಾತ ವಿಮರ್ಶಕರು ಹಾಗೂ ಅಂಕರಣಕಾರ ಶ್ರಿ ಚಂದ್ರಶೇಖರ್ ಆಲೂರು ಅವರ ನೇಮಕವಾಗಿದ್ದಾರೆ.

The Selection Committee for the 2015-2016 Kannada film subsidize

2015 ನೇ ಸಾಲಿನ ಶ್ರೀ ಪಿ.ಶೇಷಾದ್ರಿ ಅವರ ಆಯ್ಕೆ ಸಮಿತಿಯಲ್ಲಿ ಗಾಯಕಿ ಶ್ರೀಮತಿ ಲತಾ ಹಂಸಲೇಖ, ಶ್ರೀ ಚಿಂದೋಡಿ ಬಂಗಾರೇಶ್, ಶ್ರೀ ಚಿಂದೋಡಿ ಬಂಗಾರೇಶ್, ಹಿರಿಯ ರಂಗಕರ್ಮಿ ಶ್ರೀ ಜಿ.ಹೆಚ್. ಚಂದ್ರಶೇಖರ್, ನಟಿ ಅಕ್ಷತಾ ಪಾಂಡವಪುರ, ಹಾಗೂ ಪತ್ರಕರ್ತ ಶ್ರೀ ಶಶಿಧರ ಚಿತ್ರದುರ್ಗ, ಅವರುಗಳು ಸದಸ್ಯರಾಗಿದ್ದಾರೆ.

ಇನ್ನು 2016ನೇ ಸಾಲಿನ ಶ್ರಿ ಚಂದ್ರಶೇಖರ್ ಆಲೂರು ಆಯ್ಕೆ ಸಲಹಾ ಸಮಿತಿಯಲ್ಲಿ ನಟ ಶ್ರೀ ಕೃಷ್ಣೇಗೌಡ, ಪತ್ರಕರ್ತ ಶ್ರೀ ದೇವು ಪತ್ತಾರ, ಸಾಹಿತಿ ಶ್ರೀ ರಾಮದೇವ, ನಟಿ ಅಭಿನಯ, ನಟ ಶ್ರೀನಿವಾಸ ಎಸ್. ಗುರ್ಜಾಲ ಅವರು ಸದಸ್ಯರಾಗಿದ್ದಾರೆ.

ಎರಡೂ ವರ್ಷದ ಸಮಿತಿಗಳ ಸದಸ್ಯ ಕಾರ್ಯದರ್ಶಿಯಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರು ಅಥವಾ ಅವರ ಪ್ರತಿನಿಧಿ ಕಾರ್ಯನಿರ್ವಹಿಸಲಿದ್ದಾರೆ.

English summary
The Selection Committee for the 2015-2016 Kannada film subsidize From State Government

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada