»   » ರಾಮ್‌ಗೋಪಾಲ್ ವರ್ಮಾ ಹೇಳಿದ ವೀರಪ್ಪನ್ ಸಾವಿನ ಕತೆ

ರಾಮ್‌ಗೋಪಾಲ್ ವರ್ಮಾ ಹೇಳಿದ ವೀರಪ್ಪನ್ ಸಾವಿನ ಕತೆ

Subscribe to Filmibeat Kannada

ವೀರಪ್ಪನ್ ಎಂದ ತಕ್ಷಣ ಆತನ ನರಹಂತಕತನ, ಕನ್ನಡದ ವರನಟ ಡಾ. ರಾಜ್ ಕುಮಾರ್ ಅಪಹರಣ, ದಂತಕ್ಕಾಗಿ ಆನೆಗಳ ಜೀವ ಹರಣ, ಅರಣ್ಯ ಅಧಿಕಾರಿಗಳ ಮೇಲಿನ ದೌರ್ಜನ್ಯ, ಶ್ರೀನಿವಾಸ್ ಕೊಲೆ....ಈ ಬಗೆಯ ಕೆಟ್ಟ ವಿಚಾರಗಳೇ ಕಣ್ಣ ಮುಂದೆ ನಿಲ್ಲುತ್ತವೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಹೊಸ ವರ್ಷಕ್ಕೆ ಬಿಡುಗಡೆಯಾಗಿ ಅಬ್ಬರಿಸುತ್ತಿದೆ. ಬಿಡುಗಡೆಗೆ ಉಂಟಾಗಿದ್ದ ಎಲ್ಲ ಅಡೆ ತಡೆಗಳನ್ನು ಮೀರಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ವರ್ಮಾ ಇಲ್ಲಿ ಭಯೋತ್ಪಾದನೆಯನ್ನು, ಆಂತರಿಕ ಸಂಘರ್ಷವನ್ನು, ಇಲಾಖೆಯೊಂದರೆ ಸೂಕ್ಷ್ಮಾತಿಸೂಕ್ಷ್ಮಗಳನ್ನು, ನಿಗೂಢ ಕೊಲೆಗಳನ್ನು, ಎಸ್ ಟಿಎಫ್ ಅಧಿಕಾರಿಗಳ ವಿಚಾರಣೆ ರೀತಿಯನ್ನು ಸಿನಿಮಾದ ಉದ್ದಕ್ಕೂ ಹೇಳಿಕೊಂಡು ಬರುತ್ತಾರೆ.[ಕಿಲ್ಲಿಂಗ್ ವೀರಪ್ಪನ್ ಹೇಗಿದೆ? ವಿಮರ್ಶೆ ಇಲ್ಲಿದೆ]


ವೀರಪ್ಪನ್ ಜತೆಗೇ ಸುತ್ತು ಹೊಡೆಯುವ ಸಿನಿಮಾಕ್ಕೆ ಮೂರು ದೃಷ್ಟಿಕೋನ. ನಾವು ತಿಳಿದುಕೊಂಡ(ಹಿಂದೆ ಮಾಧ್ಯಮಗಳಲ್ಲಿ ವರದಿಯಾದ) ವೀರಪ್ಪನ್, ಮುತ್ತುಲಕ್ಷ್ಮೀ ಕಂಡ ವೀರಪ್ಪನ್ ಅದೆಲ್ಲದಕ್ಕಿಂತ ಮುಖ್ಯವಾಗಿ ರಾಮ್ ಗೋಪಾಲ್ ವರ್ಮಾ ಕಂಡ ವೀರಪ್ಪನ್. ಹಾಗಾದರೆ ವರ್ಮಾ ಕಂಡ ಆಪರೇಶನ್ ಕಕೂನ್ ಕತೆ ಏನು? ಕನ್ನಡದ ವರನಟ ಡಾ. ರಾಜ್ ಅಪಹರಣ ಪ್ರಕರಣದ ಬಗ್ಗೆ ವರ್ಮಾ ದೃಷ್ಟಿಕೋನ ಏನು? ವರ್ಮಾ ಹೇಳುವ ವೀರಪ್ಪನ್ ಸಾವಿನ ಕತೆ ಏನು? ಮುಂದಕ್ಕೆ ಕ್ಲಿಕ್ ಮಾಡಿ.....


ಸೇಡು ತೀರಿಸಹೊರಟ ಅಧಿಕಾರಿ

ಎಸ್ ಟಿಎಫ್ ಅಧಿಕಾರಿ(ಶಿವರಾಜ್ ಕುಮಾರ್) ಗೆ ವೀರಪ್ಪನ್ ಮೇಲೆ ಮೊದಲು ಅಂತಹ ದ್ವೇಷ ಇರಲಿಲ್ಲವಂತೆ. ಯಾವಾಗ ಕನ್ನಡದ ವರನಟನ ಅಪಹರಣ ಮಾಡಿ ಹಣಕ್ಕೆ ಬೇಡಿಕೆಯಿಟ್ಟನೋ ಅದಾದಲೇ ವೀರಪ್ಪನ್ ಗೆ ಅಂತ್ಯ ಹಾಡಲು ದೃಢ ಮನಸ್ಸು ಮಾಡಿದ್ದೆ ಎಂದು ನಾಯಕ ಒಂದೆಡೆ ಹೇಳುತ್ತಾನೆ.


ಸರ್ಕಾರ ಕೊಟ್ಟ ಹಣ ಸಿಗಲಿಲ್ಲ!

ಡಾ. ರಾಜ್ ಅಪಗರಣ ಮಾಡುವ ಐಡಿಯಾ ವೀರಪ್ಪನ್ ಗೆ ಕೊಟ್ಟಿದ್ದು ತಮಿಳು ಉಗ್ರಗಾಮಿ ಗುಂಪು. ಆದರೆ ರಾಜ್ ಬಿಡುಗಡೆಗೆ ಸರ್ಕಾರಗಳು ನೀಡಿದ್ದ ಹಣದಲ್ಲಿ ಉಗ್ರರು(ನಕ್ಸಲೈಟ್ ಅಂತನೂ ಅಂದುಕೊಳ್ಳಬಹುದು) ವೀರಪ್ಪನ್ ಗೆ ಮೋಸ ಮಾಡುತ್ತಾರೆ. ಅಪಹರಣ ಮಾಡಿದರೂ ನನಗೆ ಹಣ ಸಿಗಲಿಲ್ಲ ಎಂದು ವೀರಪ್ಪನ್ ಒಂದೆಡೆ ಡೈಲಾಗ್ ಉದುರಿಸುತ್ತಾನೆ.


ಹಣ ಮಾಡಲು ಒಳ್ಳೆ ಉಪಾಯ

ಆದರೆ ಹಣ ಮಾಡಲು ದೊಡ್ಡವರ ಅಪಹರಣ ಒಳ್ಳೆ ತಂತ್ರ ಎಂದು ವೀರಪ್ಪನ್ ಮನಗಾಣುತ್ತಾನೆ. ಆದರೆ ಕಾಡಿನಲ್ಲಿರುವ ನನಗೆ ಅಥವಾ ನನ್ನ ಗುಂಪಿಗೆ ಅದು ಸಾಧ್ಯವಿಲ್ಲ. ನಗರದಲ್ಲಿ ಪಳಗಿದವರ ತಂಡ ಬೇಕು. ಬೆಂಗಳೂರು, ಚೆನ್ನೈ ಮತ್ತು ಕೊಯಮತ್ತೂರುನಲ್ಲಿ ಹುಡುಗರನ್ನು ಬಿಟ್ಟು ಸೆಲೆಬ್ರಿಟಿಗಳ ಅಪಹರಣ ಮಾಡೋದು ವೀರಪ್ಪನ್ ತಂತ್ರವಾಗುತ್ತದೆ.


ಯಾರ ಮೇಲೆ ಕಣ್ಣು

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ಕರ್ನಾಟಕ ಮತ್ತು ತಮಿಳುನಾಡು ಮಂತ್ರಿಗಳನ್ನು ಅಪಹರಣ ಮಾಡಿ ಇಡೀ ಸರ್ಕಾರನ್ನೇ ಬೀಳಿಸುತ್ತೇನೆ ಎಂದು ಒಂದೆಡೆ ಬಡಬಡಿಸುತ್ತಾನೆ.


ಮಗಳನ್ನೇ ಕೊಂದನೇ ವೀರಪ್ಪನ್?

ಪೊಲೀಸರು ವೀರಪ್ಪನ್ ಅನ್ನು ಅಟ್ಟಿಸಿಕೊಂಡ ಹೋದಾಗ ಮಗು ಅಳುತ್ತಿದೆ ಎಂಬ ಕಾರಣಕ್ಕೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಲ್ಲು ಬಂಡೆಗೆ ಮಗುವನ್ನು ವೀರಪ್ಪನ್ ಚಚ್ಚುತ್ತಾನೆ. (ಪೊಲೀಸ್ ಹೇಳಿಕೆ), ತಪ್ಪಿಸಿಕೊಳ್ಳುವಾಗ ಮಗು ಕೈ ಜಾರಿ ಬಿದ್ದು ಸಾವನ್ನಪ್ಪಿತು(ಮುತ್ತುಲಕ್ಷ್ಮೀ ಹೇಳಿಕೆ)... ವೀರಪ್ಪನ್ ಆರಿಸಿಕೊಂಡ ಜೀವನಕ್ಕೆ ಆತನ ಮಗು ಬಲಿಯಾಯಿತು(ನಾಯಕನ ಹೇಳಿಕೆ)
ವೀರಪ್ಪನ್ ಅರಣ್ಯ ಬಿಟ್ಟು ಬಂದಿದ್ದು ಯಾಕೆ?

ಆರೋಗ್ಯ ತಪಾಸಣೆಗೆ ವೀರಪ್ಪನ್ ಅರಣ್ಯ ಬಿಟ್ಟು ಹೊರಬಂದ ಎಂಬುದು ಗೊತ್ತಿರುವ ಕತೆ. ಆದರೆ ವರ್ಮಾ ಹೇಳುವುದೇ ಬೇರೆ ಎಲ್ ಟಿಟಿಇ ಮುಖಂಡನಾಗಿ ಮೆರೆದ ಪ್ರಭಾಕರನ್ ಜತೆ ಕೈ ಜೋಡಿಸಿ ದೇಶವನ್ನೇ ನಡುಗಿಸುವ ಸ್ಕೆಚ್ ವೀರಪ್ಪನ್ ನಂದಾಗಿತ್ತು. ಆದರೆ ಪ್ರಭಾಕರನ್ ಸಹಚರರ ವೇಷದಲ್ಲಿ ತೆರಳಿದ್ದ ಪೊಲೀಸರು ಅಕ್ಟೋಬರ್ 18, 2004 ರಂದು ವೀರಪ್ಪನ್ ಗೆ ಅಂತ್ಯ ಹಾಡುತ್ತಾರೆ.


ಅಟ್ಟಹಾಸ vs ಕಿಲ್ಲಿಂಗ್

ಎ ಎಂ ಆರ್ ರಮೇಶ್ ಅಟ್ಟಹಾಸ ಚಿತ್ರದಲ್ಲಿ ಹೇಳಿದ್ದ ವೀರಪ್ಪನ್ ಕಥೆಗೂ, ವರ್ಮಾ ಕಥೆಗೂ ಬಹಳ ವ್ಯತ್ಯಾಸವಿದೆ. ಎ ಎಂ ಆರ್ ತನ್ನ ಚಿತ್ರದಲ್ಲಿ ತಮಿಳುನಾಡು ಎಸ್ ಟಿಎಫ್ ಅಧಿಕಾರಿ ವೀರಪ್ಪನ್ ನನ್ನು ಕೊಂದಿದ್ದು ಎಂದು ತೋರಿಸಿದ್ದರು. ಆದರೆ ಇಲ್ಲಿ ಅಧಿಕಾರಿ ಕೇವಲ ಕಾರ್ಯತಂತ್ರ ಹಣೆದು ಟೀ ಹೀರುತ್ತ ಕುಳಿತುಕೊಂಡಿರುತ್ತಾನೆ.


English summary
Ram Gopal Varma Directorial 'Killing Veerappan' movie hit the theaters on January 1, 2016. Director Ram Gopal Varma told the story of Killing Veerappan' on his own way.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada