»   » 'ದಿ ವಿಲನ್' ಚಿತ್ರದ ಒಂದು ಹಾಡಿನಲ್ಲಿ ಇರ್ತಾರೆ 6 ನಾಯಕಿಯರು

'ದಿ ವಿಲನ್' ಚಿತ್ರದ ಒಂದು ಹಾಡಿನಲ್ಲಿ ಇರ್ತಾರೆ 6 ನಾಯಕಿಯರು

Posted By:
Subscribe to Filmibeat Kannada
ಪ್ರೇಮ್ ಅವರು ದಿ ವಿಲನ್ ಚಿತ್ರದ ಇಂಟ್ರೊಡಕ್ಷನ್ ಹಾಡಿಗಾಗಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ | Filmibeat Kannada

'ದಿ ವಿಲನ್' ಸಿನಿಮಾ ಟೀಸರ್ ರಿಲೀಸ್ ಯಾವಾಗ ಅಂತ ಒಂದು ಕಡೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈಗ ಈ ಸಿನಿಮಾ ಮತ್ತೆ ಒಂದು ಕಾರಣಕ್ಕೆ ಸುದ್ದಿ ಮಾಡಿದೆ. 'ದಿ ವಿಲನ್' ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿ ಆಗಿದ್ದರು. ಆದರೆ ಅದರ ಜೊತೆಗೆ ಚಿತ್ರದಲ್ಲಿ ಇನ್ನು ಆರು ನಾಯಕಿಯರು ಇರುತ್ತಾರಂತೆ. ಚಿತ್ರದ ಸ್ಪೆಷಲ್ ಹಾಡಿನಲ್ಲಿ ಆರು ನಟಿಯರು ಹೆಜ್ಜೆ ಹಾಕಲಿದ್ದಾರೆ.

'ದಿ ವಿಲನ್' ಸಿನಿಮಾ ಇಂಟ್ರೊಡಕ್ಷನ್ ಹಾಡಿಗೆ ಪ್ರೇಮ್ ದೊಡ್ಡ ಪ್ಲಾನ್ ಮಾಡಿದ್ದಾರೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರು ಈ ಹಾಡಿನಲ್ಲಿ ಇರಲಿದ್ದು, ಅದ್ದೂರಿಯಾಗಿ ಈ ಹಾಡು ಮೂಡಿ ಬರಲಿದೆಂತೆ. ವಿಶೇಷ ಅಂದರೆ ಆರು ನಟಿಮಣಿಯರ ಜೊತೆ ಶಿವಣ್ಣ ಮತ್ತು ಸುದೀಪ್ ಹೆಜ್ಜೆ ಹಾಕಿದ್ದಾರೆ. ಆದರೆ ಆರು ನಟಿಯರು ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ.

The Villain kannada movie instruction song

ಈ ಹಿಂದೆ ಮಲ್ಲಿಕಾ ಶರಾವತ್, ಸನ್ನಿಲಿಯೋನ್ ಸೇರಿದಂತೆ ದೊಡ್ಡ ದೊಡ್ಡ ನಟಿಯರನ್ನು ಒಂದು ಹಾಡಿಗೆ ಪ್ರೇಮ್ ಕರೆ ತಂದಿದ್ದರು. ಆದರೆ ಈ ಬಾರಿ ಕನ್ನಡದ ಆರು ನಾಯಕಿಯರನ್ನು ಒಂದು ಹಾಡಿನಲ್ಲಿ ಪ್ರೇಮ್ ಕುಣಿಸಲಿದ್ದಾರೆ. ಸದ್ಯ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಇಂದಿನಿಂದ ಶುರುವಾಗಿದ್ದು, ಚಿತ್ರದ ಟೀಸರ್ ಸಂಕ್ರಾತಿಗೆ ಬಿಡುಗಡೆಯಾಗಲಿದೆಯಂತೆ.

English summary
6 kannada actress are shake there legs in Sudeep and Shivarajkumar starrer Kannada Movie 'The Villain' instruction song. The movie is directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X