»   » ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ನಿರ್ದೇಶಕ ಪ್ರೇಮ್

ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ನಿರ್ದೇಶಕ ಪ್ರೇಮ್

Posted By:
Subscribe to Filmibeat Kannada

ನಿರ್ದೇಶಕ ಪ್ರೇಮ್ ಈಗ 'ದಿ ವಿಲನ್' ಸಿನಿಮಾ ಮಾಡುತ್ತಿದ್ದಾರೆ. ಆದರೆ ಅವರು ಹೊಸ ವರ್ಷದ ಸಂಭ್ರಮದಲ್ಲಿರುವ ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

'ದಿ ವಿಲನ್' ಸಿನಿಮಾದ ಬಿಡುಗಡೆ ಸುದ್ದಿ ಬಂದೇ ಬಿಟ್ಟಿತು!

'ದಿ ವಿಲನ್' ಸಿನಿಮಾದ ಟೀಸರ್ ನೋಡುವುದಕ್ಕೆ ಅಭಿಮಾನಿಗಳು ಬಹಳ ದಿನದಿಂದ ಕಾಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ 'ದಿ ವಿಲನ್' ಟೀಸರ್ ಅದಷ್ಟು ಬೇಗ ಬೇಕು ಎಂದು ಅಭಿಯಾನ ಕೂಡ ಶುರು ಮಾಡಿದ್ದರು. ಪ್ರೇಮ್ ಚಿತ್ರದ ಟೀಸರ್ ಅನ್ನು ಹೊಸ ವರ್ಷದ ವಿಶೇಷವಾಗಿ ಜನವರಿ 1 ರಂದು ರಿಲೀಸ್ ಮಾಡುವ ಪ್ಲಾನ್ ನಲ್ಲಿ ಇದ್ದರು. ಆದರೆ ಈಗ ಮತ್ತೆ ಟೀಸರ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ.

The Villain kannada movie teaser release date postponed

ದಿ ವಿಲನ್ ಚಿತ್ರದ ಅಫೀಷಿಯಲ್ ಫೇಸ್ ಬುಕ್ ಪೇಜ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಬಗ್ಗೆ ತಿಳಿಸಲಾಗಿದೆ. ''ಪ್ರಿಯ 'ದಿ ವಿಲನ್' ಅಭಿಮಾನಿಗಳಲ್ಲಿ ನಮ್ಮ ಮನವಿ. ಅಂದುಕೊಂಡಂತೆ ನಡೆದಿದ್ದರೆ 'ದಿ ವಿಲನ್' ಚಿತ್ರದ ಟೀಸರ್ ನಾಳೆ (ಜನವರಿ 1) ಬಿಡುಗಡೆಯಾಗಬೇಕಿತ್ತು. ಆದರೆ ಗ್ರಾಫಿಕ್ಸ್ ವರ್ಕ್ ಇನ್ನು ಸ್ವಲ್ಪ ಬಾಕಿ ಇರುವ ಕಾರಣ ಬಿಡುಗಡೆಯ ದಿನಾಂಕವನ್ನು ಮುಂದೂಡಲಾಗಿದೆ. ನಿರಾಸೆಯಾಗದೆ ದಯಮಾಡಿ ಎಲ್ಲರು ಸಪೋರ್ಟ್ ಮಾಡಬೇಕೆಂದು ಕೇಳಿಕೊಳ್ಳುತ್ತಿದ್ದೇವೆ.'' ಎಂದು ಹೇಳಲಾಗಿದೆ.

ಅಂದಹಾಗೆ, 'ದಿ ವಿಲನ್' ಸಿನಿಮಾ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಕನ್ನಡದ ಅದ್ದೂರಿ ಸಿನಿಮಾವಾಗಿದೆ. ಮೊದಲ ಬಾರಿ ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣ ಒಟ್ಟಿಗೆ ಅಭಿನಯಿಸಿದ್ದಾರೆ. ಆಮಿ ಜಾಕ್ಸನ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ.

English summary
Actor Sudeep and Shivarajkumar starrer Kannada Movie 'The Villain' teaser release date postponed. The movie is directed by Prem.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X