»   » ಸುದೀಪ್ ಹುಟ್ಟುಹಬ್ಬಕ್ಕೆ 'ದಿ ವಿಲನ್' ತಂಡ ಕೊಡ್ತಿರುವ ಗಿಫ್ಟ್ ಏನು?

ಸುದೀಪ್ ಹುಟ್ಟುಹಬ್ಬಕ್ಕೆ 'ದಿ ವಿಲನ್' ತಂಡ ಕೊಡ್ತಿರುವ ಗಿಫ್ಟ್ ಏನು?

Posted By:
Subscribe to Filmibeat Kannada
Sudeep Birthday : The Villain Movie Team Decide Special Gift To Him | Filmibeat Kannada

ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ ಕೇವಲ ಮೂರು ದಿನ ಮಾತ್ರ ಬಾಕಿಯಿದೆ. ಈ ವರ್ಷ ಸುದೀಪ್ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಈಗಾಗಲೇ ನಿರ್ಧರಿಸಿದ್ದಾರೆ. ಆದ್ರೂ, ಅವರ ಅಭಿಮಾನಿಗಳು ಮತ್ತು ಚಿತ್ರತಂಡದವರು ಕಿಚ್ಚನ ಬರ್ತ್ ಡೇಯನ್ನ ವಿಶೇಷವಾಗಿಸಲು ಸಿದ್ದವಾಗಿದ್ದಾರೆ.

ಪ್ರೇಮ್ ನಿರ್ದೇಶನ 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದು, ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಕೂಡ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ 'ವಿಲನ್' ಚಿತ್ರತಂಡದಿಂದ ಸುದೀಪ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ಕೊಡುತ್ತಿದ್ದಾರೆ.

ಸುದೀಪ್ ಅಭಿಮಾನಿ ಮಾಡಿದ 'ದಿ ವಿಲನ್' ಟೀಸರ್ ನೋಡಿ


The Villain Motion Poster Releasing on Kiccha Sudeep's Birthday

ಸೆಪ್ಟಂಬರ್ 2ರಂದು ಸುದೀಪ್ ಬರ್ತ್ ಡೇ ಆಗಿದ್ದು, 1ನೇ ತಾರೀಖು ಮಧ್ಯರಾತ್ರಿ 'ದಿ ವಿಲನ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡುತ್ತಿದ್ದಾರೆ. ಈ ಪೋಸ್ಟರ್ ನ್ನ ಯಾರು ರಿಲೀಸ್ ಮಾಡಲಿದ್ದಾರೆ ಎಂಬುದರ ಬಗ್ಗೆ ಚಿತ್ರತಂಡ ಬಹಿರಂಗಪಡಿಸಿಲ್ಲ.


ಇನ್ನು ಹೆಬ್ಬುಲಿ ಕೃಷ್ಣ ಹಾಗೂ ಸುದೀಪ್ ಜೋಡಿಯಲ್ಲಿ ಮೂಡಿ ಬರಲಿರುವ ಹೊಸ ಚಿತ್ರದ ಫಸ್ಟ್ ಲುಕ್ ಕೂಡ ಅದೇ ದಿನ ರಿಲೀಸ್ ಆಗಲಿದೆ.

English summary
The Villain Motion Poster will release on Kiccha Sudeep Birthday special - September 2nd

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada