For Quick Alerts
  ALLOW NOTIFICATIONS  
  For Daily Alerts

  ಮಾರುಕಟ್ಟೆಗೆ ಲಗ್ಗೆ ಇಟ್ಟ 'ದಿ ವಿಲನ್' ಐಸ್ ಕ್ರೀಂ

  By Pavithra
  |
  TheVillain : ಐಸ್ ಕ್ರೀಮ್ ತಿನ್ನಿಸಲು ಹೊರಟ 'ದಿ ವಿಲನ್ ' | Filmibeat Kannada

  ಪ್ರತಿ ನಿತ್ಯ ಬೆಳಗಾದರೆ 'ದಿ ವಿಲನ್' ಬಗ್ಗೆ ಒಂದಲ್ಲ ಒಂದು ಸುದ್ದಿ ಇದ್ದೇ ಇರುತ್ತೆ. ಆ ಮಟ್ಟಕ್ಕೆ ಸಿನಿಮಾ ಪ್ರಚಾರ ಗಿಟ್ಟಿಸಿಕೊಂಡಿದ್ದು ಒಂದು ಕಡೆ ವಿವಾದವಾಗುತ್ತಿದ್ದರೆ ಮತ್ತೊಂದು ಕಡೆ ಸಿನಿಮಾತಂಡ ವಿಭಿನ್ನವಾಗಿ ಚಿತ್ರರಂಗಕ್ಕೆ ಸಹಾಯ ಮಾಡಲು ಮಾಡಿರುವ ಪ್ಲಾನ್ ಗಳಿಂದ ಸಿನಿಮಾ ನ್ಯೂಸ್ ಆಗುತ್ತಿದೆ.

  'ದಿ ವಿಲನ್' ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರಿಂದ 500 ರೂಪಾಯಿ ಟಿಕೆಟ್ ಗಾಗಿ ಪಡೆದುಕೊಂಡು ನಂತರ ಅದರಿಂದ ಬಂದ ಹಣವನ್ನು ಕಷ್ಟದಲ್ಲಿರುವ ನಿರ್ದೇಶಕರಿಗೆ ಸಿನಿಮಾ ಟೀಂ ಸಹಾಯಧನವಾಗಿ ನೀಡಿತ್ತು.

  ಶುಭ ಸಂಜೆಯಲ್ಲಿ ಸಿಹಿ ಸುದ್ದಿ ಕೊಡ್ತಾರಂತೆ ಪ್ರೇಮ್ಶುಭ ಸಂಜೆಯಲ್ಲಿ ಸಿಹಿ ಸುದ್ದಿ ಕೊಡ್ತಾರಂತೆ ಪ್ರೇಮ್

  ಅದೇ ರೀತಿಯ ಮತ್ತೊಂದು ಪ್ಲಾನ್ 'ದಿ ವಿಲನ್' ಐಸ್ ಕ್ರೀಂ. ಸದ್ಯ 'ದಿ ವಿಲನ್' ಐಸ್ ಕ್ರೀಂ ಮಾರುಕಟ್ಟೆಗೆ ಬಂದಿದೆ. ಸಾಕಷ್ಟು ವಿಶೇಷತೆಗಳನ್ನು ಹೊಂದಿರುವ 'ದಿ ವಿಲನ್' ಐಸ್ ಕ್ರೀಂ ಎಲ್ಲಿ ಸಿಗುತ್ತಿದೆ. ಅದರ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ..

  ಪ್ರೇಕ್ಷಕರಿಗೆ ಸಿಕ್ತು 'ದಿ ವಿಲನ್' ಐಸ್

  ಪ್ರೇಕ್ಷಕರಿಗೆ ಸಿಕ್ತು 'ದಿ ವಿಲನ್' ಐಸ್

  ದಿ ವಿಲನ್ ಸಿನಿಮಾ ಚಿತ್ರರಂಗದಲ್ಲಿ ಮಾತ್ರವಲ್ಲದೆ ಸಾಮಾನ್ಯ ಮಾರುಕಟ್ಟೆಯಲ್ಲಿಯೂ ಸುದ್ದಿ ಮಾಡುತ್ತಿದೆ. ನಿರ್ದೇಶಕ ಪ್ರೇಮ್ ದಿ ವಿಲನ್ ಸಿನಿಮಾ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುವ ಉದ್ದೇಶದಿಂದ ಬೇರೆ ಬೇರೆ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಡೈರಿ ಡೇ ಐಸ್ ಕ್ರೀಂ ಕೂಡ ಒಂದು. 'ದಿ ವಿಲನ್' ಹೆಸರಿನ ಐಸ್ ಕ್ರೀಂ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದ್ದು 35 ರೂಪಾಯಿ ಬೆಲೆಯನ್ನು ನಿಗಧಿ ಮಾಡಲಾಗಿದ್ಯಂತೆ.

  ಎರಡು ವಿಭಿನ್ನ ರುಚಿಯ ಐಸ್ ಕ್ರೀಂ

  ಎರಡು ವಿಭಿನ್ನ ರುಚಿಯ ಐಸ್ ಕ್ರೀಂ

  ಚಾಕೊಲೇಟ್ ಹಾಗೂ ಆರೆಂಜ್ ಎರಡು ಫ್ಲೇವರ್ ನಲ್ಲಿ 'ದಿ ವಿಲನ್' ಐಸ್ ಕ್ರೀಂ ಲಭ್ಯವಾಗುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಹೆಸರಿನಲ್ಲಿ ಐಸ್ ಕ್ರೀಂ ಮಾರುಕಟ್ಟೆಗೆ ಬಂದಿದೆ.

  ಐಸ್ ಕ್ರೀಂ ನಿಂದ ಉಪಯೋಗ

  ಐಸ್ ಕ್ರೀಂ ನಿಂದ ಉಪಯೋಗ

  ಹೆಚ್ಚು ಹೆಚ್ಚು ಐಸ್ ಕ್ರೀಂ ಮಾರಟವಾದಂತೆ ಅದರಿಂದ ಮತ್ತೆ ಚಿತ್ರರಂಗಕ್ಕೆ ಉಪಯೋಗವಾಗಲಿದೆ. ಹೌದು ಪ್ರತಿ ಐಸ್ ಕ್ರೀಂ ನಲ್ಲಿ ಬರುವ ಹಣದಲ್ಲಿ ಒಂದು ರೂಪಾಯಿಯನ್ನು ಕನ್ನಡ ಸಿನಿಮಾ ತಂತ್ರಜ್ಞರ ಕಲ್ಯಾಣ ನಿಧಿ ಸೇರಿಕೊಳ್ಳಲಿದೆ.

  ಸೆಲ್ಫಿ ಹಿಡಿರಿ.. ಟಿಕೆಟ್ ಹೊಡಿರಿ..

  ಸೆಲ್ಫಿ ಹಿಡಿರಿ.. ಟಿಕೆಟ್ ಹೊಡಿರಿ..

  ಅದಷ್ಟೇ ಅಲ್ಲದೆ ದಿ ವಿಲನ್ ಐಸ್ ಕ್ರೀಂ ಖರೀದಿ ಮಾಡಿ ಅದರ ಜೊತೆ ಸೆಲ್ಫಿ ತೆಗೆದುಕೊಂಡು ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದರೆ, ಅದರಲ್ಲಿ ಆಯ್ದ ವ್ಯಕ್ತಿಗಳಿಗೆ ಉಚಿತವಾಗಿ 'ದಿ ವಿಲನ್' ಸಿನಿಮಾ ನೋಡುವ ಅವಕಾಶವನ್ನು ಚಿತ್ರತಂಡ ಮಾಡಿಕೊಡುತ್ತಂತೆ.

  English summary
  'The villain' movie name ice cream becoming available in market .This is the first time that the ice cream market has come to the film name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X