For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲಿ 'ದಿ ವಿಲನ್' ನೋಡಿದ ಅಭಿಮಾನಿಗಳು ಏನೆಲ್ಲಾ ಮಾಡಿದ್ರು ನೋಡಿ

  |
  ಟಿವಿಯಲ್ಲಿ ಪ್ರಸಾರವಾದ ದಿ ವಿಲನ್ ಸಿನಿಮಾ ನೋಡಿ ಅಭಿಮಾನಿಗಳು ಖುಷ್ | FILMIBEAT KANNADA

  ಸಾಮಾನ್ಯವಾಗಿ ಥಿಯೇಟರ್ ನಲ್ಲಿ ಸ್ಟಾರ್ ನಟರ ಚಿತ್ರಗಳು ಬರ್ತಿದೆ ಅಂದ್ರೆ ಸಂಭ್ರಮ ಮಾಡೋದು ಕಾಮನ್. ಚಿತ್ರಮಂದಿರದ ಬಳಿ ಕಟೌಟ್ ನಿಲ್ಲಿಸಿ, ಪೋಸ್ಟರ್ ಗಳಿಗೆ ಹಾರ ಹಾಕಿ, ಸಿಹಿ ಹಂಚಿ ಪಟಾಕಿ ಹೊಡೆದು ಹಬ್ಬ ಮಾಡ್ತಾರೆ. ಆದ್ರೆ, ಟಿವಿಯಲ್ಲೂ ಸಿನಿಮಾ ಪ್ರಸಾರವಾದಗಲೂ ಈ ಸಂಭ್ರಮ ಇರುತ್ತೆ ಅನ್ನೋದಕ್ಕೆ ದಿ ವಿಲನ್ ತಾಜಾ ಉದಾಹರಣೆ.

  ಹೌದು, ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಟ್ಟಿಗೆ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಗೆ ವಿಲನ್ ಟೆಲಿಕಾಸ್ಟ್ ಆಗಿತ್ತು.

  'ಓ ಭ್ರಮೆ' ಈ ಡೈಲಾಗ್ ಬರೆದಿದ್ದು ಪ್ರೇಮ್ ಅಲ್ಲ, ಬೇರೆ ಯಾರು? 'ಓ ಭ್ರಮೆ' ಈ ಡೈಲಾಗ್ ಬರೆದಿದ್ದು ಪ್ರೇಮ್ ಅಲ್ಲ, ಬೇರೆ ಯಾರು?

  ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಂಡಿದ್ದ ಫ್ಯಾನ್ಸ್ ಟಿವಿಯಲ್ಲಿ ವಿಲನ್ ಸಿನಿಮಾ ನೋಡಿ ಇನ್ನೊಂದು ಸಲ ಹಬ್ಬ ಮಾಡಿದ್ದಾರೆ. ಶಿವಣ್ಣ ಫ್ಯಾನ್ಸ್ ಒಂದು ಕಡೆ ಸೆಲೆಬ್ರೇಟ್ ಮಾಡಿದ್ರೆ, ಕಿಚ್ಚನ ಫ್ಯಾನ್ಸ್ ಇನ್ನೊಂದು ಕಡೆ ಸಂಭ್ರಮಿಸಿದ್ದಾರೆ. ಫೋಟೋಗಳು ಮುಂದೆ ಓದಿ......

  ಕೈಯಲ್ಲಿ ಕರ್ಪೂರ ಹಚ್ಚಿದ ಕಿಚ್ಚನ ಫ್ಯಾನ್ಸ್

  ಕೈಯಲ್ಲಿ ಕರ್ಪೂರ ಹಚ್ಚಿದ ಕಿಚ್ಚನ ಫ್ಯಾನ್ಸ್

  'ದಿ ವಿಲನ್' ಸಿನಿಮಾದಲ್ಲಿ ಸುದೀಪ್ ಅವರ ಎಂಟ್ರಿ ಸೀನ್ ಬರ್ತಿದ್ದಂತೆ ಸುದೀಪ್ ಅಭಿಮಾನಿಯೊಬ್ಬ ಕೈಯಲ್ಲಿ ಕರ್ಪೂರವನ್ನ ಹಚ್ಚಿ ಸುದೀಪ್ ಗೆ ಆರತಿ ಮಾಡಿದ್ದಾನೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  'ವಿಲನ್' ಚಿತ್ರತಂಡದ ಮೇಲೆ ಸುದೀಪ್ ಮುನಿಸಿಕೊಳ್ಳಲು ಕಾರಣ ಇದೇ.! 'ವಿಲನ್' ಚಿತ್ರತಂಡದ ಮೇಲೆ ಸುದೀಪ್ ಮುನಿಸಿಕೊಳ್ಳಲು ಕಾರಣ ಇದೇ.!

  ಟಿವಿಗೆ ಹಾರ ಹಾಕಿ ಪೂಜೆ

  ಟಿವಿಗೆ ಹಾರ ಹಾಕಿ ಪೂಜೆ

  ಮತ್ತೊಬ್ಬ ಸುದೀಪ್ ಅಭಿಮಾನಿ ದಿ ವಿಲನ್ ಸಿನಿಮಾ ಪ್ರಸಾರದ ವೇಳೆ ಸುದೀಪ್ ದೃಶ್ಯ ಬಂದಾಗ, ಟಿವಿಗೆ ಹಾರ ಹಾಕಿ, ದೀಪ ಹಚ್ಚಿ ತನ್ನ ಅಭಿಮಾನ ಮರೆದಿದ್ದಾನೆ. ಇದೂ ಕೂಡ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಹರಿದಾಡ್ತಿದೆ.

  'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಅಸಲಿ ಗೆಟಪ್ ಇದಾಗಬೇಕಿತ್ತಂತೆ.! 'ದಿ ವಿಲನ್' ಚಿತ್ರದಲ್ಲಿ ಶಿವಣ್ಣನ ಅಸಲಿ ಗೆಟಪ್ ಇದಾಗಬೇಕಿತ್ತಂತೆ.!

  ಶಿವಣ್ಣ ಅಭಿಮಾನಿಗಳಲ್ಲೂ ಸಂಭ್ರಮ

  ಶಿವಣ್ಣ ಅಭಿಮಾನಿಗಳಲ್ಲೂ ಸಂಭ್ರಮ

  ಸುದೀಪ್ ಅಭಿಮಾನಿಗಳು ಒಂದು ಕಡೆ ದಿ ವಿಲನ್ ಚಿತ್ರದ ಟೆಲಿವಿಷನ್ ಪ್ರೀಮಿಯರ್ ಸಂಭ್ರಮಿಸಿದ್ರೆ, ಮತ್ತೊಂದೆಡೆ ಶಿವರಾಜ್ ಕುಮಾರ್ ಅಭಿಮಾನಿಗಳು ಕೂಡ ಟಿವಿಗೆ ಹಾರ ಹಾಕಿ, ಶಿವಣ್ಣ ಎಂಟ್ರಿಗೆ ದೀಪ ಹಚ್ಚಿ ಸ್ವಾಗತಿಸಿದ್ದಾರೆ.

  ಇತಿಹಾಸ ಸೃಷ್ಟಿಸಿದ 'ದಿ ವಿಲನ್': ದಾಖಲೆ ಬೆಲೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್.! ಇತಿಹಾಸ ಸೃಷ್ಟಿಸಿದ 'ದಿ ವಿಲನ್': ದಾಖಲೆ ಬೆಲೆಗೆ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್.!

  'ದಿ ವಿಲನ್' ಟಿಆರ್ ಪಿ ಎಷ್ಟಿರಬಹುದು

  'ದಿ ವಿಲನ್' ಟಿಆರ್ ಪಿ ಎಷ್ಟಿರಬಹುದು

  ಹಾಗ್ನೋಡಿದ್ರೆ, ದಿ ವಿಲನ್ ಚಿತ್ರದ ಟಿಆರ್ ಪಿ ಮೇಲೆ ಈಗ ಬಹುದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ಅಭಿನಯಿಸಿದ್ದ ಈ ಚಿತ್ರವನ್ನ ಪ್ರೇಮ್ ನಿರ್ದೇಶನ ಮಾಡಿದ್ದರು. ಆಮಿ ಜಾಕ್ಸನ್ ನಾಯಕಿಯಾಗಿ ನಟಿಸಿದ್ದರು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬಿಸಿನೆಸ್ ಮಾಡಿದ್ದ ವಿಲನ್ ಗೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಬಂದಿತ್ತು. ಅಕ್ಟೋಬರ್ ತಿಂಗಳಲ್ಲಿ ದಿ ವಿಲನ್ ತೆರೆಕಂಡಿತ್ತು.

  English summary
  Kannada actor shiva rajkumar and sudeep starrer the villain movie has premiered in zee kannada yesterday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X