»   » ಬಿಡುಗಡೆಗೂ ಮೊದಲೇ ಕೋಟಿ ಕೋಟಿ ಬಾಚಿ ದಾಖಲೆ ಬರೆದ 'ದಿ ವಿಲನ್'

ಬಿಡುಗಡೆಗೂ ಮೊದಲೇ ಕೋಟಿ ಕೋಟಿ ಬಾಚಿ ದಾಖಲೆ ಬರೆದ 'ದಿ ವಿಲನ್'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಪೈಕಿ 'ದಿ ವಿಲನ್' ಸಿನಿಮಾ ಪ್ರಮುಖವಾಗಿದೆ. ಚಿತ್ರದಲ್ಲಿ ಮೊದಲ ಬಾರಿಗೆ ಶಿವಣ್ಣ ಮತ್ತು ಸುದೀಪ್ ಒಟ್ಟಿಗೆ ನಟಿಸುವುದರಿಂದ ಹಿಡಿದು ಸಾಕಷ್ಟು ವಿಶೇಷತೆಗಳನ್ನು ಈ ಸಿನಿಮಾ ಹೊಂದಿದೆ.

'ದಿ ವಿಲನ್' ರಿಮೇಕ್: ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ಹೆಬ್ಬುಲಿ ಸುದೀಪ್!

'ದಿ ವಿಲನ್' ಸಿನಿಮಾದ ಡಿಮ್ಯಾಂಡ್ ಯಾವ ಮಟ್ಟಕ್ಕೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಈಗ ಈ ಸಿನಿಮಾಗೆ ಇರುವ ಬೇಡಿಕೆಯಿಂದ ಬಿಡುಗಡೆಗೆ ಮೊದಲೇ ನಿರ್ಮಾಪಕರ ಜೇಬು ತುಂಬುತ್ತಿದೆ. ಪ್ರೇಮ್ ನಿರ್ದೇಶನದ ಈ ಸಿನಿಮಾ ರಿಲೀಸ್ ಗೂ ಮೊದಲೇ ಕೋಟಿ ಕೋಟಿ ಹಣ ಮಾಡಿ ದಾಖಲೆ ಮಾಡುತ್ತಿದೆ. ಮುಂದೆ ಓದಿ...

ಸ್ಯಾಟೆಲೈಟ್ ಹಕ್ಕು ಮಾರಾಟ

'ದಿ ವಿಲನ್' ಸಿನಿಮಾದ ಸ್ಯಾಟಲೈಟ್ ಹಕ್ಕು ಈಗ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಈ ವಿಷಯವನ್ನು ಸ್ವತಃ ಚಿತ್ರದ ನಿರ್ದೇಶಕ ಜೋಗಿ ಪ್ರೇಮ್ ಹಂಚಿಕೊಂಡಿದ್ದಾರೆ.

ಪ್ರೇಮ್ ಟ್ವೀಟ್

ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ದಿ ವಿಲನ್' ಸ್ಯಾಟಲೈಟ್ ಹಕ್ಕು ಮಾರಟವಾಗಿದೆ ಅಂತ ಹೇಳಿದ್ದಾರೆ ಹೊರತು ಎಷ್ಟು ಮೊತ್ತಕ್ಕೆ ಅಂತ ಬಹಿರಂಗ ಪಡಿಸಿಲ್ಲ.

'ಲಂಡನ್'ನಿಂದ ವಾಪಸ್ ಆಗ್ತಿರುವ 'ದಿ ವಿಲನ್'

7.3 ಕೋಟಿ

ಮೂಲಗಳ ಪ್ರಕಾರ 'ದಿ ವಿಲನ್' ಚಿತ್ರದ ಸ್ಯಾಟೆಲೈಟ್ ರೈಟ್ಸ್ 'ಜೀ ಕನ್ನಡ' ವಾಹಿನಿ ಖರೀದಿ ಮಾಡಿದ್ದು, 7.3 ಕೋಟಿಗೆ ಚಿತ್ರದ ಹಕ್ಕು ಮಾರಟ ಆಗಿದೆಯಂತೆ.

ದಾಖಲೆ ಬೆಲೆಗೆ ಮಾರಟ

'ದೊಡ್ಮನೆ ಹುಡ್ಗ', 'ರನ್ನ', 'ಜಗ್ಗುದಾದ' ಸೇರಿದಂತೆ ಕೆಲ ಸಿನಿಮಾಗಳ ಸ್ಯಾಟೆಲೈಟ್ ಹಕ್ಕು 5 ರಿಂದ 6 ಕೋಟಿಗೆ ಸೇಲ್ ಆಗಿತ್ತು. ಈಗ ಈ ಎಲ್ಲ ಸಿನಿಮಾಗಳನ್ನು 'ದಿ ವಿಲನ್' ಹಿಂದಿಕ್ಕಿದೆ.

ಚಿತ್ರಗಳು: ಲಂಡನ್ ನಲ್ಲಿ 'ದಿ ವಿಲನ್' ಕಾರುಬಾರು

'ಓಂ' ದಾಖಲೆ

ಉಪೇಂದ್ರ ನಿರ್ದೇಶನದ ಮತ್ತು ಶಿವಣ್ಣ ನಟನೆಯ 'ಓಂ' ಸಿನಿಮಾದ ಟಿವಿ ರೈಟ್ಸ್ 9 ರಿಂದ 10 ಕೋಟಿಗೆ ಮಾರಾಟ ಆಗಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಈಗ 'ದಿ ವಿಲನ್' 7.3 ಕೊಟಿ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.

'ದಿ ವಿಲನ್' ಚಿತ್ರದ ಬಗ್ಗೆ

ಪ್ರೇಮ್ ನಿರ್ದೇಶನದ 'ದಿ ವಿಲನ್' ಚಿತ್ರವನ್ನು ಸಿ.ಆರ್.ಮನೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ, ಸುದೀಪ್, ಆಮಿ ಜಾಕ್ಸನ್, ಶೃತಿ ಹರಿಹರನ್ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಬೆತ್ತಲೆ ಬೆನ್ನು ಪ್ರದರ್ಶಿಸಿದ 'ದಿ ವಿಲನ್' ಬೆಡಗಿ ಆಮಿ ಜಾಕ್ಸನ್

English summary
According to the source, 'The Villain’s satellite rights sold for Rs 7.3 crore to Zee kannada channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada