»   » ಬಿಳಿ ಪಂಚೆ, ಬಿಳಿ ಶರ್ಟ್ ಹಾಕ್ಕೊಂಡು 'ಮದುಮಗ'ನಂತೆ ಮಿಂಚಿದ ಸುದೀಪ್

ಬಿಳಿ ಪಂಚೆ, ಬಿಳಿ ಶರ್ಟ್ ಹಾಕ್ಕೊಂಡು 'ಮದುಮಗ'ನಂತೆ ಮಿಂಚಿದ ಸುದೀಪ್

Posted By:
Subscribe to Filmibeat Kannada
Sudeep appears in a different style at The Villain movie shooting set

ಕಿಚ್ಚ ಸುದೀಪ್ ಕನ್ನಡದ ಸ್ಟೈಲಿಶ್ ಸ್ಟಾರ್. ಪ್ರತಿಯೊಂದು ಚಿತ್ರಗಳಲ್ಲಿಯೂ ಸುದೀಪ್ ಡಿಫ್ರೆಂಟ್ ಸ್ಟೈಲ್ ಗಳಲ್ಲಿ ಮಿಂಚುತ್ತಿದ್ದಾರೆ. ಸದ್ಯ ಸುದೀಪ್ ಅಭಿನಯಿಸುತ್ತಿರುವ 'ದಿ ವಿಲನ್' ಚಿತ್ರದಲ್ಲೂ ಕೂಡ ಅಷ್ಟೇ ಕಿಚ್ಚನ ಸ್ಟೈಲ್ ಗೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಅದರಲ್ಲೂ, ಸುದೀಪ್ ಅವರ 'ದಿ ವಿಲನ್' ಹೇರ್ ಸ್ಟೈಲ್ ಗೆ ಮೋಡಿ ಆಗಿರುವ ಸುದೀಪ್ ಅಭಿಮಾನಿಗಳು, ಅವರಂತೆ ತಾವು ಕೂಡ ಸ್ಟೈಲ್ ಮಾಡುತ್ತಾ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ. ಹೀಗೆ, 'ವಿಲನ್' ಸೆಟ್ ನಲ್ಲಿ ಸದಾ ಸ್ಟೈಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸುದೀಪ್ ಚಿಕ್ಕಮಗಳೂರಿನಲ್ಲಿ ಒಳ್ಳೆ ಮದುಮಗನಂತೆ ಪ್ರತ್ಯಕ್ಷವಾಗಿದ್ದಾರೆ.

'ದಿ ವಿಲನ್' : ರಾಮನೊಳಗೊಬ್ಬ ರಾವಣ... ರಾವಣನೊಳಗೊಬ್ಬ ರಾಮ..!


The Villain Shooting in Chikkamagaluru

ಹೌದು, ಬಿಳಿ ಪಂಚೆ, ಬಿಳಿ ಶರ್ಟ್ ಹಾಕ್ಕೊಂಡು ಕಿಚ್ಚ ಸುದೀಪ್ ಶೂಟಿಂಗ್ ಸೆಟ್ ಗೆ ಹಾಜರಾಗಿದ್ದರು. ಇದೇನ್ ಸುಮ್ಮನೆ ರೌಂಡಿಂಗ್ ಇರಬೇಕು ಎಂದುಕೊಳ್ಳಬೇಡಿ. ಇದು 'ವಿಲನ್' ಚಿತ್ರದ ಒಂದು ದೃಶ್ಯದಲ್ಲಿ ಸುದೀಪ್ ಅವರ ಗೆಟಪ್.


ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ 'ದಿ ವಿಲನ್' ಮೋಷನ್ ಪೋಸ್ಟರ್ ನೋಡಿ!


The Villain Shooting in Chikkamagaluru

ಸದ್ಯ, ಚಿಕ್ಕಮಗಳೂರಿನಲ್ಲಿ ನಟ ಸುದೀಪ್ ಮತ್ತು ನಟಿ ಆಮಿ ಜಾಕ್ಸನ್ ನಡುವಿನ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದೆ. ಚಿತ್ರತಂಡದ ಮಾಹಿತಿಯ ಪ್ರಕಾರ, ಸಾಹಸ ದೃಶ್ಯವನ್ನ ಸೆರೆ ಹಿಡಿಯಲಾಗುತ್ತಿದೆ. ಯಾಕಂದ್ರೆ, ಸಾಹಸ ನಿರ್ದೇಶಕ ರವಿವರ್ಮ ಅವರು ಕೂಡ ಈ ಸೆಟ್ ನಲ್ಲಿ ಭಾಗಿಯಾಗಿದ್ದಾರೆ.

English summary
Kannada Actor, Kiccha sudeep and Shiva rajkumar Starrer 'The Villain' movie Shooting starts in Chikka magaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada