For Quick Alerts
  ALLOW NOTIFICATIONS  
  For Daily Alerts

  ಸದ್ದು ಮಾಡುತ್ತಿದೆ 'ದಿ ವಿಲನ್' ಚಿತ್ರದ ಪ್ರಮೋಷನ್ ಸಾಂಗ್

  By Bharath Kumar
  |
  ಸಖತ್ ಕಿಕ್ ಕೊಡುತ್ತೆ ದಿ ವಿಲನ್ ಪ್ರಮೋಷನಲ್ ಸಾಂಗ್ ..! | Filmibeat Kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಯಾವಾಗ ತೆರೆಗೆ ಬರುತ್ತೆ ಸೌತ್ ಸಿನಿ ದುನಿಯಾ ಎದುರು ನೋಡುತ್ತಿದೆ.

  ಅಂದುಕೊಂಡಂತೆ ಆಗಿದ್ದರೇ, ಜುಲೈ 12 ರಂದು ಹ್ಯಾಟ್ರಿಕ್ ಹೀರೋ ಬರ್ತಡೇ ವಿಶೇಷವಾಗಿ 'ದಿ ವಿಲನ್' ಚಿತ್ರದ ಹಾಡೊಂದು ಬಿಡುಗಡೆಯಾಗಬೇಕಿತ್ತು. ಆದ್ರೆ, ಹಾಡಿನ ಕೆಲಸಗಳು ಮುಗಿಯದ ಕಾರಣ ಅದು ಸಾಧ್ಯವಾಗಿಲ್ಲ.

  ಹಾಗಂತ ಶಿವಣ್ಣ ಮತ್ತು ಸುದೀಪ್ ಫ್ಯಾನ್ಸ್ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಯಾಕಂದ್ರೆ, 'ದಿ ವಿಲನ್' ಚಿತ್ರದ ಪ್ರಮೋಷನ್ ಹಾಡೊಂದು ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿದೆ.

  ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್ಚಂಡಮಾರುತದಂತೆ ಬಂತು 'ದಿ ವಿಲನ್' ಟೀಸರ್

  ''ಗುಮ್ತಲಕಡಿ ಗುಲ ಗುಲ....'' ಎಂದು ಆರಂಭವಾಗುವ ಈ ಹಾಡು ಶಿವಣ್ಣ ಮತ್ತು ಸುದೀಪ್ ಬಗ್ಗೆ ಕುರಿತಾಗಿದೆ. ವಿಜಯ್ ಈಶ್ವರ್, ಚಂದು ಪಾರ್ಥಧ್ವಜ ಮತ್ತು ಎಚ್.ವಿ.ಆರ್ ಸಾಹಿತ್ಯ ಬರೆದಿದ್ದು, ಜೋಗಿ ಸುನೀತಾ, ಮಾದ್ವೇಶ ಭಾರಧ್ವಜ ಹಾಡಿದ್ದಾರೆ. ಈ ಹಾಡನ್ನ ಖ್ಯಾತ ಆಡಿಯೋ ಕಂಪನಿ ಆನಂದ್ ಆಡಿಯೋ ಬಿಡುಗಡೆ ಮಾಡಿದೆ.

  ಪ್ರೇಕ್ಷಕರಿಗೂ ಮುನ್ನ 'ದಿ ವಿಲನ್' ಚಿತ್ರ ಮೊದಲು ನೋಡುವವರು ಇವರೇ! ಪ್ರೇಕ್ಷಕರಿಗೂ ಮುನ್ನ 'ದಿ ವಿಲನ್' ಚಿತ್ರ ಮೊದಲು ನೋಡುವವರು ಇವರೇ!

  ಇನ್ನುಳಿದಂತೆ 'ದಿ ವಿಲನ್' ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ದಿ ವಿಲನ್' ಸಿನಿಮಾ ಇದೇ ವರ್ಷ ಬರುವ ಸಾಧ್ಯತೆ ಇದೆ. ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  English summary
  Kannada actor sudeep and shivaraj kumar starrer the villain movie is getting ready for release. now, the villain promotional song was released by fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X