twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರ ರೀ ಓಪನ್: 24 ನಿಯಮ ಪಾಲಿಸುವಂತೆ ಕೇಂದ್ರ ಸೂಚನೆ

    |

    ಚಿತ್ರಮಂದಿರಗಳು ಅಕ್ಟೋಬರ್ 15 ರಿಂದ ಪುನಃ ಪ್ರಾರಂಭವಾಗಲಿವೆ. ಚಿತ್ರಮಂದಿರಗಳು ಪುನರ್‌ ಆರಂಭಿಸುವ ಸಂದರ್ಭ ಚಿತ್ರಮಂದಿರಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದೆ.

    ಅಕ್ಟೋಬರ್ 15 ರಂದು ಚಿತ್ರಮಂದಿರಗಳು ಪುನರ್ ಪ್ರಾರಂಭವಾದಾಗ ಚಿತ್ರಮಂದಿರದ ಒಟ್ಟು ಸೀಟು ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಿಸಲು ಅವಕಾಶ ಇರಲಿದೆ. 50% ಪ್ರೇಕ್ಷಕರಷ್ಟೆ ಒಂದು ಬಾರಿ ಸಿನಿಮಾ ವೀಕ್ಷಿಸಬಹುದಾಗಿದೆ.

    ಕೇಂದ್ರದ ಮಾರ್ಗಸೂಚಿಯಂತೆ, ಚಿತ್ರಮಂದಿರದ ಒಳಗೆ ಸ್ಯಾನಿಟೈಸರ್ ಹಾಗೂ ಪ್ರೇಕ್ಷಕರು ಕೈತೊಳೆಯಲು ಅವಕಾಶ ಕಲ್ಪಿಸಿರಬೇಕು. ಆಸನ ವ್ಯವಸ್ಥೆಯಲ್ಲಿ ಅಂತರ ಕಡ್ಡಾಯವಾಗಿ ಇರಲೇಬೇಕು. ಪ್ರೇಕ್ಷಕರು ಕೂರಬಾರದ ಸೀಟನ್ನು ಗುರುತಿಸಿಟ್ಟರಬೇಕು.

    ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

    ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

    ಪ್ರೇಕ್ಷಕರು ಚಿತ್ರಮಂದಿರ ಪ್ರವೇಶಿಸುವ ಮುನ್ನಾ ಎಲ್ಲರ ಸ್ಕ್ರೀನಿಂಗ್ ಪರೀಕ್ಷೆ ಮಾಡಿಸಲೇಬೇಕು. ಪ್ರೇಕ್ಷಕರು ಆರೋಗ್ಯ ಸೇತು ಆಪ್ ಹೊಂದಿದ್ದರೆ ಉತ್ತಮ ಎಂದಿದೆ ಕೇಂದ್ರ. ಟಿಕೆಟ್ ಖರೀದಿ ವೇಳೆ ಕಡ್ಡಾಯವಾಗಿ ಅಂತರ ಕಾಪಾಡಿಕೊಳ್ಳಬೇಕು, ಡಿಜಿಟಲ್ ಟಿಕೆಟ್ ಖರೀದಿಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.

    ಚಿತ್ರಮಂದಿರ ಸ್ವಚ್ಛತೆ ಕಡ್ಡಾಯ

    ಚಿತ್ರಮಂದಿರ ಸ್ವಚ್ಛತೆ ಕಡ್ಡಾಯ

    ಚಿತ್ರಮಂದಿರದ ಒಳಗೆ, ಆರೋಗ್ಯ ಸಂಬಂಧಿತ ದೂರು ನೀಡಲು ವ್ಯವಸ್ಥೆ ಇರಬೇಕು. ಪ್ರೇಕ್ಷಕರ ಆರೋಗ್ಯದ ಬಗ್ಗೆ ನಿಗಾ ವಹಿಸಿರಬೇಕು, ಚಿತ್ರಮಂದಿರವನ್ನು ಸ್ವಚ್ಛವಾಗಿಡಬೇಕು, ಪ್ರತಿಯೊಂದು ಪ್ರದರ್ಶನದ ನಂತರ ಚಿತ್ರಮಂದಿರವನ್ನು ಸ್ವಚ್ಛ ಮಾಡಬೇಕು.

    ಸಿಬ್ಬಂದಿ ಮಾಸ್ಕ್, ಗ್ಲೌಸ್, ಬೂಟ್ ಧರಿಸಬೇಕು

    ಸಿಬ್ಬಂದಿ ಮಾಸ್ಕ್, ಗ್ಲೌಸ್, ಬೂಟ್ ಧರಿಸಬೇಕು

    ಸಿನಿಮಾ ನಡುವೆ ವಿರಾಮದ ವೇಳೆಯಲ್ಲಿ ಸಹ ಅಂತರ ಕಾಯ್ದುಕೊಳ್ಳಬೇಕು, ಟಿಕೆಟ್ ಖರೀದಿ ವೇಳೆ ವೀಕ್ಷಕರು ನಿಂತುಕೊಳ್ಳಲು ನೆಲದ ಮೇಲೆ ಮಾರ್ಕ್‌ಗಳನ್ನು ಹಾಕಬೇಕು. ಚಿತ್ರಮಂದಿರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್, ಬೂಟುಗಳ ಉಪಯೋಗ ಮಾಡಬೇಕು.

    ಪ್ಯಾಕೇಜ್ ಆಹಾರವಷ್ಟೆ ಮಾರಾಟ ಮಾಡಬೇಕು

    ಪ್ಯಾಕೇಜ್ ಆಹಾರವಷ್ಟೆ ಮಾರಾಟ ಮಾಡಬೇಕು

    ಚಿತ್ರಮಂದಿರದ ಒಳಗೆ ಉಗಿಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಚಿತ್ರಮಂದಿರದ ಒಳಗೆ ಪ್ಯಾಕೆಜ್ ಆಹಾರವನ್ನಷ್ಟೆ ಮಾರಾಟ ಮಾಡಬೇಕು. ಸಿನಿಮಾ ನಡೆಯುವ ಅವಧಿಯಲ್ಲಿ ಪ್ರೇಕ್ಷಕರಿಗೆ ಆಹಾರ ವಿತರಿಸಬಾರದು. ಒಂದಕ್ಕೂ ಹೆಚ್ಚು ಪರದೆ ಇದ್ದರೆ ಒಂದೊಂದು ಪರದೆಯ ಸಿನಿಮಾ ಪ್ರದರ್ಶನ ಅವಧಿ ಬೇರೆ-ಬೇರೆ ಇರಬೇಕು.

    Recommended Video

    ದಾವಣಗೆರೆಯಲ್ಲಿ ಕೊನೆಯುಸಿರೆಳೆದ Junior Rajkumar | Filmibeat Kannada
    ಪ್ರೇಕ್ಷಕರ ಮೊಬೈಲ್ ಸಂಖ್ಯೆ ತೆಗೆದುಕೊಳ್ಳಬೇಕು

    ಪ್ರೇಕ್ಷಕರ ಮೊಬೈಲ್ ಸಂಖ್ಯೆ ತೆಗೆದುಕೊಳ್ಳಬೇಕು

    ಎಲ್ಲಾ ಪ್ರೇಕ್ಷಕರ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಳ್ಳಬೇಕು, ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು, ಎಸಿ ಚಿತ್ರಮಂದಿರ ಆಗಿದ್ದರೆ ತಾಪಮಾನವನ್ನು 24-30 ಡಿಗ್ರಿ ಸೆಲ್ಸಿಯಸ್‌ ಮಾತ್ರವೇ ಇಟ್ಟಿರಬೇಕು. ಮಾಸ್ಕ್ ಧರಿಸುವ ಬಗ್ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಚಿತ್ರಮಂದಿರದ ಒಳಗೆ ಘೋಷಣೆಗಳು, ಭಿತ್ತಿ ಪತ್ರಗಳು, ಎಚ್ಚರಿಕೆ ಸಂದೇಶಗಳು ಇರಬೇಕಾಗಿವೆ.

    English summary
    Theaters will re open from October 15. Central government released SOP released by central government.
    Tuesday, October 6, 2020, 14:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X