For Quick Alerts
  ALLOW NOTIFICATIONS  
  For Daily Alerts

  ಚಿಕಿತ್ಸೆಗೆ ಹಣವಿಲ್ಲದೆ ಕಲಾವಿದ ಪರದಾಟ : ದರ್ಶನ್ ಗಾಗಿ ಕಾಯುತ್ತಿದೆ ಕುಟುಂಬ

  |

  ಕಿರತೆರೆ, ರಂಗಭೂಮಿ, ಮತ್ತು ಸಿನಿಮಾರಂಗದಲ್ಲಿ ಮಿಂಚುತ್ತಿದ್ದ ಖ್ಯಾತ ಕಲಾವಿದ ಅನಿಲ್ ಕುಮಾರ್ ಈಗ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಾತು ಕೂಡ ಬಾರದೆ ಇರುವ ಸ್ಥಿತಿಯಲ್ಲಿದ್ದಾರೆ ಅನಿಲ್ ಕುಮಾರ್. ಅಲ್ಲದೆ, ಅವರ ಕುಟಂಬಕ್ಕೆ ಚಿಕಿತ್ಸೆ ವೆಚ್ಚ ಬರಿಸಲು ಸಾಧ್ಯವಾಗದಷ್ಟು ಸೋಚನೀಯ ಸ್ಥಿತಿಯಲ್ಲಿದ್ದಾರೆ.

  ಅನಿಲ್ ಕುಮಾರ್ ಚಾಲೆಂಜ್ ಸ್ಟಾರ್ ದರ್ಶನ್ ಅವರ ಸಹಪಾಠಿ ಕೂಡ ಆಗಿದ್ದರಂತೆ. ದರ್ಶನ್ ನೀನಾಸಂನಲ್ಲಿ ನಾಟಕ ಅಭ್ಯಾಸ ಮಾಡುತ್ತಿದ್ದ ವೇಳೆ ಅನಿಲ್ ಕುಮಾರ್ ಕೂಡ ಜೊತೆಯಲ್ಲಿದ್ದರಂತೆ. ರಂಗಭೂಮಿಯೇ ಜೀವಾಳವೆಂದುಕೊಂಡು ಬದುಕುತ್ತಿದ್ದ ಅನಿಲ್ ಕುಮಾರ್ ಈಗ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  'ಮೂಡಲ ಮನೆ' ಧಾರವಾಹಿಯಿಂದ ಕಿರುತೆರೆ ಪಯಣ ಪ್ರಾರಂಭಿಸಿದ ಅನಿಲ್ ಕುಮಾರ್ ಸದ್ಯ ಪ್ರಸಾರವಾಗುತ್ತಿರುವ 'ಬ್ರಹ್ಮಗಂಟು' ಧಾರವಾಹಿಯಲ್ಲಿಯೂ ಅಭಿನಯಿಸುತ್ತಿದ್ದಾರೆ. ಸದಾ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಅನಿಲ್ ಕುಮಾರ್ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆಸ್ಪತ್ರೆಯ ಖರ್ಚು ಬರಿಸಲಾಗದೆ, ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

  ಕಷ್ಟದಲ್ಲಿರುವವರಿಗೆ ಸದಾ ಸಹಾಯ ಹಸ್ತ ಚಾಚುವ ದಾಸ ಈಗ ಅವರ ಸಹಪಾಠಿಯೇ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಅಂತ ಗೊತ್ತಾದರೆ ಖಂಡಿತ ಸಹಾಯ ಮಾಡ್ತಾರೆ ಎನ್ನುವುದು ಕುಟಂಬದವಕ ನಂಬಿಕೆ. ಹಾಗಾಗಿ ಈ ಸುದ್ದಿಯನ್ನು ದರ್ಶನ್ ಅವರಿಗೆ ತಲುಪಿಸಿ ಎಂದು ಈ ಮೂಲಕ ಮನವಿ ಮಾಡಿದ್ದಾರೆ.

  English summary
  Kannada theatre artist Anil Kumar admit hospital for illness, he has not money to pay hospital bill.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X