»   » ಪುರಿ ಜಗನ್ನಾಥ್ ಮನೆ ಲೂಟಿ ಮಾಡಿದ ಕಳ್ಳರು!

ಪುರಿ ಜಗನ್ನಾಥ್ ಮನೆ ಲೂಟಿ ಮಾಡಿದ ಕಳ್ಳರು!

Posted By:
Subscribe to Filmibeat Kannada

'ಟೆಂಪರ್' ಸಿನಿಮಾ ಸಕ್ಸಸ್ ಆದ ಖುಷಿ ಒಂದ್ಕಡೆ, ಇನ್ನೊಂದ್ಕಡೆ ಚಾರ್ಮಿ ಜೊತೆ 'ಜ್ಯೋತಿ ಲಕ್ಷ್ಮಿ' ಚಿತ್ರಕ್ಕೆ ಚಾಲನೆ. ಡಬ್ಕಿ ಡಬಲ್ ಖುಷಿಯಲ್ಲಿ ಇರೋವಾಗಲೇ ಪುರಿ ಜಗನ್ನಾಥ್ ಗೆ ಬಿಗ್ ಶಾಕ್ ಸಿಕ್ಕಿದೆ.

ಪುರಿ ಜಗನ್ನಾಥ್ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ ಹಣದ ಜೊತೆಗೆ ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ಲೂಟಿಯಾಗಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಜ್ಯೂಬ್ಲಿ ಹಿಲ್ಸ್ ಪೊಲೀಸ್ ಠಾಣಿಯಲ್ಲಿ ಪುರಿ ಜಗನ್ನಾಥ್ ದೂರು ದಾಖಲಿಸಿದ್ದಾರೆ.

Theft in Director Puri Jagannath's residence

ಘಟನೆ ನಡೆದ ಸಂದರ್ಭದಲ್ಲಿ ಪುರಿ ಜಗನ್ನಾಥ್ ಮನೆಯಲ್ಲಿರ್ಲಿಲ್ಲ. ಶೂಟಿಂಗ್ ನಿಮಿತ್ತ ಪುರಿ ಜಗನ್ನಾಥ್ ಮತ್ತು ಪತ್ನಿ ತೆಲಾಂಗಣಕ್ಕೆ ತೆರಳಿದ್ದರು. ನಿನ್ನೆ (ಶನಿವಾರ) ಮರಳಿ ಬರುವಷ್ಟರಲ್ಲಿ ಬೆಲೆಬಾಳುವ ಆಭರಣಗಳು ಕಾಣೆಯಾಗಿವೆ. [ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್]

ದೂರಿನಲ್ಲಿ ಪುರಿ ಜಗನ್ನಾಥ್ ಹೇಳಿರುವಂತೆ, ಕೆಲ ದಿನಗಳ ಹಿಂದೆಯಷ್ಟೇ ಕಾರ್ಯಕ್ರಮವೊಂದಕ್ಕೆ ತೆರಳುವಾಗ ತಮ್ಮ ಪುತ್ರಿ ಆಭರಣಗಳನ್ನ ಹಾಕಿಕೊಂಡಿದ್ದರು. ವಾಪಸ್ ಬಂದು ಅದನ್ನ ತೆಗೆದಿಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ಕೆಲಸಗಾರರು ಹಾಜರಿದ್ದರು.

ಹೀಗಾಗಿ ಪುರಿ ಜಗನ್ನಾಥ್ ಮತ್ತು ಕುಟುಂಬ ತಮ್ಮ ಕೆಲಸಗಾರರ ಮೇಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಜ್ಯೂಬ್ಲಿ ಹಿಲ್ಸ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
According to the reports, gold ornaments worth 15 lakhs and some cash was stolen from the house of Tollywood director Puri Jagannath. The director has filed a complaint in Jubliee Hills Police Station.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada