twitter
    For Quick Alerts
    ALLOW NOTIFICATIONS  
    For Daily Alerts

    ಸುಮಲತಾ ಸ್ಪರ್ಧೆಯಿಂದ ಚಿತ್ರರಂಗ ಇಬ್ಭಾಗ ಆಯ್ತಾ.? ಅಂಬಿ ಪತ್ನಿ ಹೇಳಿದ್ದೇನು?

    |

    Recommended Video

    Lok Sabha Elections 2019 : : ಮಂಡ್ಯದಲ್ಲಿ ಅಂಬಿ ಪತ್ನಿ ಶಕ್ತಿ ಪ್ರದರ್ಶನ | FILMIBEAT KANNADA

    ಚಿತ್ರರಂಗದಲ್ಲಿ ಏನೇ ಸಮಸ್ಯೆಯಾದರೂ ಅಂತಿಮವಾಗಿ ಅದನ್ನ ಬಗೆಹರಿಸುತ್ತಿದಿದ್ದು ರೆಬೆಲ್ ಸ್ಟಾರ್ ಅಂಬರೀಶ್. ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಅಂಬರೀಶ್ ಮನೆ ಒಂದು ರೀತಿ ಹೆಡ್ ಅಫೀಸ್ ಆಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಅಂಬಿ ಇರೋವರೆಗೂ ಒಗ್ಗಟ್ಟಾಗಿದ್ದ ಕನ್ನಡ ಚಿತ್ರರಂಗ ಈಗ ಸುಮಲತಾ ಅವರ ಚುನಾವಣೆ ಸ್ಪರ್ಧೆಯಿಂದ ಇಬ್ಬಾಗವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

    ಮಂಡ್ಯದಲ್ಲಿ ಸುಮಲತಾ ಸ್ಪರ್ಧೆ ಮಾಡಿರುವುದರಿಂದ ಕೆಲವು ಕಲಾವಿದರಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ಚರ್ಚೆಯಾಗ್ತಿದೆ. ಸುಮಲತಾ ಅವರಿಗೆ ಬೆಂಬಲವಾಗಿ ದರ್ಶನ್ ಮತ್ತು ಯಶ್ ಮಾತ್ರ ನಿಂತಿದ್ದಾರೆ. ಉಳಿದವರು ಸುಮಲತಾ ಅವರಿಂದ ದೂರ ಉಳಿಯಲು ಅದೇ ಕಾರಣ ಎಂಬ ಊಹಾಪೋಹಗಳು ಹರಿದಾಡುತ್ತಿದೆ.

    ಮುಂದಿನ 5 ದಿನ ದರ್ಶನ್ ಪ್ರಚಾರ ಮಾಡಲ್ಲ, ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು?ಮುಂದಿನ 5 ದಿನ ದರ್ಶನ್ ಪ್ರಚಾರ ಮಾಡಲ್ಲ, ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು?

    ಈ ಬಗ್ಗೆ ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅವರನ್ನ ಪ್ರಶ್ನಿಸಿದಾಗ, ಅವರು ಅದನ್ನ ತಳ್ಳಿ ಹಾಕಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದಲ್ಲಿ ಮಾತನಾಡಿದ ಅಂಬಿ ಪತ್ನಿ ಚಿತ್ರರಂಗ ಇಬ್ಬಾಗವಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ಮುಂದೆ ಓದಿ.....

    ಇಂಡಸ್ಟ್ರಿ ಇಬ್ಭಾಗವಾಗಿಲ್ಲ

    ಇಂಡಸ್ಟ್ರಿ ಇಬ್ಭಾಗವಾಗಿಲ್ಲ

    ಮಾಧ್ಯಮ ಸಂವಾದಲ್ಲಿ ನಿಮ್ಮಿಂದ ಇಂಡಸ್ಟ್ರಿ ಇಬ್ಭಾಗವಾಯ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ 'ಇಂಡಸ್ಟ್ರಿ ಯಾವುದೇ ಕಾರಣಕ್ಕೂ ಇಬ್ಭಾಗವಾಗಿಲ್ಲ' ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಮಾತನಾಡಿದ ಅವರ 'ಚಿತ್ರರಂಗವನ್ನ ರಾಜಕೀಯಕ್ಕೆ ಹೋಲಿಸುವುದು ಸರಿಯಿಲ್ಲ' ಎಂದು ಊಹಾಪೋಹಗಳಿಗೆ ತೆರೆ ಎಳೆದರು.

    ನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾ

    ಚಿತ್ರರಂಗದಲ್ಲಿ ಪಕ್ಷ ಇಲ್ಲ

    ಚಿತ್ರರಂಗದಲ್ಲಿ ಪಕ್ಷ ಇಲ್ಲ

    ''ಚಿತ್ರರಂಗದಲ್ಲಿ ನಾವು ಪಕ್ಷಗಳನ್ನ ಮಾಡಿಕೊಂಡಿಲ್ಲ. ಅಲ್ಲಿ ಚುನಾವಣೆ ನಡೆಯಲ್ಲ. ಅದಕ್ಕೂ ಮಿಗಿಲಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು. ಹಾಗಾಗಿ, ಇಲ್ಲಿ ಇಂಡಸ್ಟ್ರಿಯಲ್ಲಿ ಭಿನ್ನಾಭಿಪ್ರಾಯವಾಗಿದೆ ಎಂಬ ಮಾತೇ ಬರಲ್ಲ'' ಎಂದು ಹೇಳುವ ಮೂಲಕ ಇದೆಲ್ಲಾ ವದಂತಿಗಳು ಅಷ್ಟೇ ಎಂದರು.

    ಜೋಡೆತ್ತುಗಳು ಕಾಣೆಯಾಗಿದೆ ಎಂದು ಕೂಗುತ್ತಿರುವವರಿಗೆ ಸುಮಲತಾ ಸ್ಪಷ್ಟನೆಜೋಡೆತ್ತುಗಳು ಕಾಣೆಯಾಗಿದೆ ಎಂದು ಕೂಗುತ್ತಿರುವವರಿಗೆ ಸುಮಲತಾ ಸ್ಪಷ್ಟನೆ

    ಸುಮಲತಾ ಎದುರಾಳಿಯೂ ಚಿತ್ರರಂಗದವರೇ

    ಸುಮಲತಾ ಎದುರಾಳಿಯೂ ಚಿತ್ರರಂಗದವರೇ

    ಅಂದ್ಹಾಗೆ, ಈ ಪ್ರಶ್ನೆ ಮೂಡಲ ಕಾರಣ ಮಂಡ್ಯದಲ್ಲಿ ಸುಮಲತಾ ಎದುರು ಸ್ಪರ್ಧೆ ಮಾಡಿರುವುದು ನಿಖಿಲ್ ಕುಮಾರ್ ಕೂಡ ಒಬ್ಬ ನಟ. ಅವರ ತಂದೆ ಎಚ್ ಡಿ ಕುಮಾರಸ್ವಾಮಿ ಓರ್ವ ನಿರ್ಮಾಪಕರಾಗಿದ್ದಾರೆ. ಇಂಡಸ್ಟ್ರಿಯಲ್ಲಿ ಕೆಲವು ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಜೆಡಿಎಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ. ಇದು ಸಹಜವಾಗಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಹೇಳಲಾಗ್ತಿದೆ.

    ಅಂಬಿ ಸಮಾಧಿ ಬಗ್ಗೆ ಮಾತನಾಡಿದ ಮುನಿರತ್ನಗೆ ಸುಮಲತಾ ತಿರುಗೇಟುಅಂಬಿ ಸಮಾಧಿ ಬಗ್ಗೆ ಮಾತನಾಡಿದ ಮುನಿರತ್ನಗೆ ಸುಮಲತಾ ತಿರುಗೇಟು

    ಸುದೀಪ್ ಬರಲ್ಲ, ಶಿವಣ್ಣನೂ ಬರಲ್ಲ

    ಸುದೀಪ್ ಬರಲ್ಲ, ಶಿವಣ್ಣನೂ ಬರಲ್ಲ

    ಹಾಗ್ನೋಡಿದ್ರೆ, ಕಿಚ್ಚ ಸುದೀಪ್ ಅವರು ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡ್ತಾರೆ ಎಂಬ ಮಾತು ಜೋರಾಗಿತ್ತು. ಆದ್ರೆ, ಸುಮಲತಾಗೆ ಶುಭಕೋರಿದ ಸುದೀಪ್ ಪ್ರಚಾರಕ್ಕೆ ಬರಲ್ಲ ಎಂದುಬಿಟ್ಟರು. ಅದೇ ರೀತಿ ಶಿವರಾಜ್ ಕುಮಾರ್ ಕೂಡ ಪ್ರಚಾರಕ್ಕೆ ಬರ್ತಾರೆ ಎಂಬ ನಿರೀಕ್ಷೆ ಇತ್ತು. ಕೊನೆಗೆ ಶಿವಣ್ಣ, ಪುನೀತ್ ರಾಜ್ ಕುಮಾರ್ ನಾವು ಬರಲ್ಲ ಎಂದರು. ಅಲ್ಲಿಗೆ ಈ ಅಂತೆ-ಕಂತೆಗಳಿಗೆ ಮತ್ತಷ್ಟು ಜೀವ ಬಂತು. ಆದ್ರೀಗ, ಅಂಬರೀಶ್ ಪತ್ನಿ ಈ ರೀತಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಹೇಳಿದ್ದಾರೆ.

    ಸುಮಲತಾ ಪರ ಪ್ರಚಾರ ಮಾಡೋದ್ರಿಂದ 'ಜೋಡೆತ್ತು'ಗಳಿಗಾಗುವ ನಷ್ಟವೇನು?ಸುಮಲತಾ ಪರ ಪ್ರಚಾರ ಮಾಡೋದ್ರಿಂದ 'ಜೋಡೆತ್ತು'ಗಳಿಗಾಗುವ ನಷ್ಟವೇನು?

    English summary
    'there is no differential in film industry' said sumalatha she has contest independent candidate in mandya lok sabha election.
    Friday, April 5, 2019, 16:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X