»   » ದರ್ಶನ್ ಹಾಗೂ ನನ್ನ ನಡುವೆ ದ್ವೇಷ, ವೈರತ್ವ ಇಲ್ಲ ಎಂದ ಶಿವಣ್ಣ

ದರ್ಶನ್ ಹಾಗೂ ನನ್ನ ನಡುವೆ ದ್ವೇಷ, ವೈರತ್ವ ಇಲ್ಲ ಎಂದ ಶಿವಣ್ಣ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 50ನೇ ಸಿನಿಮಾ 'ಕುರುಕ್ಷೇತ್ರ'ದಲ್ಲಿ ನಟಿಸಲು ಶಿವಣ್ಣ 'ನೋ' ಎನ್ನುವುದಕ್ಕೆ ಇಬ್ಬರ ನಡುವಿನ 'ಕೋಲ್ಡ್ ವಾರ್' ಕಾರಣ ಎಂದು 'ಗಾಸಿಪ್' ಪಂಡಿತರು ವ್ಯಾಖ್ಯಾನಿಸಿದ್ದರು. ಆದರೆ, ಅದೆಲ್ಲವೂ ಶುದ್ಧ ಸುಳ್ಳು ಎನ್ನುತ್ತಾರೆ ಸ್ವತಃ ಶಿವರಾಜ್ ಕುಮಾರ್.

'ಕುರುಕ್ಷೇತ್ರ' ಚಿತ್ರವನ್ನ ರಿಜೆಕ್ಟ್ ಮಾಡಲು 'ಡೇಟ್ಸ್ ಕ್ಲಾಶ್' ಕಾರಣವೇ ಹೊರತು ಬೇರೇನೂ ಅಲ್ಲ ಎಂದಿದ್ದಾರೆ ಶಿವಣ್ಣ.

''There is no rift between Darshan and I'' says Shiva Rajkumar

''ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ನಾನು ಕರ್ಣನ ಪಾತ್ರ ಮಾಡಬೇಕಿತ್ತು. ದುರ್ಯೋಧನ ಮತ್ತು ಕರ್ಣನ ನಡುವೆ ಎಂತಹ ಸ್ನೇಹವಿತ್ತೋ, ಅದೇ ಸ್ನೇಹ ನಮ್ಮಿಬ್ಬರ ನಡುವೆಯೂ ಇದೆ. ದರ್ಶನ್ ಅವರನ್ನು ಚಿಕ್ಕ ಹುಡುಗನಿದ್ದಾಗಿನಿಂದ ನೋಡುತ್ತಾ ಬಂದಿದ್ದೇನೆ. ನಮ್ಮಿಬ್ಬರ ನಡುವೆ ಯಾವುದೇ ದ್ವೇಷ, ವೈರತ್ವ ಇಲ್ಲ'' ಎಂದು ಸ್ಪಷ್ಟ ಪಡಿಸಿದ್ದಾರೆ ಶಿವರಾಜ್ ಕುಮಾರ್.

ಶಿವಣ್ಣ ರವರ ಈ ಮಾತುಗಳಿಂದ 'ಗಾಸಿಪ್' ಪಂಡಿತರ ಬಾಯಿಗೆ ಗೋದ್ರೆಜ್ ಬೀಗ ಬಿದ್ದಂತಾಗಿದೆ.

English summary
''There is no rift between Darshan and I'' says Shiva Rajkumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada