For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಈ ಇಬ್ಬರು ನಟರ ಜೊತೆ ಇದ್ದರೆ ಸುಖ, ನೆಮ್ಮದಿ, ಪ್ರೀತಿ ಇರುತ್ತೆ' ಎಂದ ರಂಗಾಯಣ ರಘು

  |

  ರಂಗಾಯಣ ರಘು 1998ರಲ್ಲಿ ಶಿವ ರಾಜ್‌ಕುಮಾರ್ ಅಭಿನಯದ ಭೂಮಿ ತಾಯಿಯ ಚೊಚ್ಚಲ ಮಗ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ಸದ್ಯ ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ಕಾಮಿಡಿಯನ್ ಆದ ರಂಗಾಯಣ ರಘು ಈಗಿನ ಸ್ಟಾರ್ ನಟರು ಹಾಗೂ ಯುವ ನಟರ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಇನ್ನು ಕಳೆದ ಕೆಲ ವರ್ಷಗಳಲ್ಲಿ ರಂಗಾಯಣ ರಘು ಸ್ಟಾರ್ ನಟರ ಚಿತ್ರಗಳಿಗೆ ಅತ್ಯಗತ್ಯವಾದ ಹಾಸ್ಯ ನಟನಾಗಿಬಿಟ್ಟಿದ್ದರು. ಶಿವ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಯಶ್, ಸುದೀಪ್ ಹಾಗೂ ದರ್ಶನ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲಿ ಅಭಿನಯಿಸಿದ್ದ ರಂಗಾಯಣ ರಘು ಹಲವು ಪ್ರಯೋಗಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

  ರಂಗಾಯಣ ರಘು ಹೆಚ್ಚಾಗಿ ಅಭಿನಯಿಸಿರುವ ಸ್ಟಾರ್ ನಟನ ಚಿತ್ರಗಳೆಂದರೆ ಅದರು ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರಗಳಲ್ಲಿ. ಹೌದು, ಗಣೇಶ್ ಅಭಿನಯದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಂಗಾಯಣ ರಘು ಬಿಡುಗಡೆಗೆ ರೆಡಿ ಇರುವ ಗಣೇಶ್ ಅಭಿನಯದ ಮತ್ತೊಂದು ಚಿತ್ರ ತ್ರಿಬಲ್ ರೈಡಿಂಗ್‌ನಲ್ಲೂ ಸಹ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಿನ್ನೆಯಷ್ಟೇ ( ನವೆಂಬರ್ 16 ) ನಡೆಯಿತು. ಇದೇ ವೇಳೆ ಮಾತನಾಡಿದ ರಂಗಾಯಣ ರಘು ಮನಬಿಚ್ಚಿ ಮಾತನಾಡಿದರು.

  ಗಣೇಶ್ ಹೊಗಳಿದ ರಂಗಾಯಣ ರಘು

  ಗಣೇಶ್ ಹೊಗಳಿದ ರಂಗಾಯಣ ರಘು

  ಹೀಗೆ ಚಿತ್ರದ ಕುರಿತು ಮಾತನಾಡಲು ವೇದಿಕೆ ಮೇಲೆ ಬಂದ ರಂಗಾಯಣ ರಘು ವಿಶೇಷವಾಗಿ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಹೊಗಳಿದರು. ತಾನು ಅಭಿನಯಿಸಿರುವ ಸುಮಾರು ಮುನ್ನೂರು ಚಿತ್ರಗಳಲ್ಲಿ ಮೂವತ್ತು ಚಿತ್ರಗಳು ಗಣೇಶ್ ಚಿತ್ರಗಳೇ ಎಂದು ರಂಗಾಯಣ ರಘು ಹೇಳಿದರು. ಇನ್ನು ಗಣೇಶ್ ಜೊತೆಗಿದ್ರೆ ಎಲ್ಲವೂ ಸಿಕ್ಕಿದ ಹಾಗೆ, ಒಂದೊಂದು ಸಲ ಹೈಸ್ಕೂಲ್ ಹುಡುಗರು ಆಗ್ತೀವಿ, ಒಮ್ಮೊಮ್ಮೆ ಕಾಲೇಜ್ ಹುಡುಗರು ಆಗ್ತೀವಿ ಹಾಗೂ ವಯಸ್ಸಾಗಿದೆ ಅಂತ ನನ್ನ ಚೆನ್ನಾಗಿ ಮುದ್ದು ಮಾಡಿ ನೋಡಿಕೊಳ್ತಾರೆ ಎಂದು ರಂಗಾಯಣ ರಘು ಗೋಲ್ಡನ್ ಸ್ಟಾರ್ ಬಗ್ಗೆ ಬಂಗಾರದಂತಹ ಮಾತುಗಳನ್ನು ಆಡಿದರು.

  ಈ ಇಬ್ಬರು ನಟರ ಜೊತೆ ಇದ್ದರೆ ಸುಖ, ಪ್ರೀತಿ, ನೆಮ್ಮದಿ

  ಈ ಇಬ್ಬರು ನಟರ ಜೊತೆ ಇದ್ದರೆ ಸುಖ, ಪ್ರೀತಿ, ನೆಮ್ಮದಿ

  ಮಾತು ಮುಂದುವರಿಸಿದ ರಂಗಾಯಣ ರಘು ಈ ರೀತಿ ಗಣೇಶ್ ಜೊತೆಗಿದ್ದರೆ ಅದೊಂಥರ ಸುಖ, ಪ್ರೀತಿ, ನೆಮ್ಮದಿ, ಆತ್ಮ ವಿಶ್ವಾಸ, ಒಂಥರ ಅಪ್ಪು ಸರ್ ಜೊತೆ ಇದ್ದ ಹಾಗೆ ಆಗಿಬಿಡುತ್ತೆ ಎಂದರು. ಅಪ್ಪು ಸರ್ ಜೊತೆ ಇದ್ದಾಗಲೂ ಸಹ ನಮಗೆ ಇದೇ ರೀತಿಯ ಭಾವನೆ ಬರುತ್ತಿತ್ತು ಎಂದ ರಂಗಾಯಣ ರಘು ಇದೇ ಸಮಯದಲ್ಲಿ ಅಪ್ಪು ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದರು. ಈ ಮೂಲಕ ಪುನೀತ್ ರಾಜ್‌ಕುಮಾರ್ ಹಾಗೂ ಗಣೇಶ್ ಜೊತೆಗಿದ್ದರೆ ಸುಖ, ಪ್ರೀತಿ ಹಾಗೂ ನೆಮ್ಮದಿ ಹೆಚ್ಚಾಗಿ ಸಿಗಲಿದೆ ಎಂದು ರಂಗಾಯಣ ರಘು ತಿಳಿಸಿದರು.

  ಮೂವರು ನಾಯಕಿಯರ ಜೊತೆ ಗಣಿ ರೊಮ್ಯಾನ್ಸ್

  ಮೂವರು ನಾಯಕಿಯರ ಜೊತೆ ಗಣಿ ರೊಮ್ಯಾನ್ಸ್

  ಇನ್ನು ಈ ತ್ರಿಬಲ್ ರೈಡಿಂಗ್ ಚಿತ್ರದಲ್ಲಿ ಗಣೇಶ್ ರಾಮ್ ಪಾತ್ರದಲ್ಲಿ ನಟಿಸಿದ್ದರೆ ಅದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟ್ರೈಲರ್‌ನಲ್ಲಿ ಈ ಮೂವರೂ ಸಹ ನಾಯಕನಿಗೆ ಪ್ರೇಮ ನಿವೇದನೆ ಮಾಡುವ ದೃಶ್ಯಗಳಿದ್ದು ಈ ಬಾರಿ ಗಣೇಶ್ ಚಿತ್ರದಲ್ಲಿ ಟ್ರಯಾಂಗಲ್ ಲವ್ ಸ್ಟೋರಿಗೂ ಮಿಗಿಲಾದ ಮನರಂಜನೆ ಸಿಗಲಿದೆ. ಇನ್ನು ಟ್ರೈಲರ್‌ನಲ್ಲಿ ಲವ್, ಆಕ್ಷನ್ ಹಾಗೂ ಲವ್ ಫೀಲ್‌ನ ದೃಶ್ಯಗಳಿದ್ದು ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರವಾಗಿದೆ.

  English summary
  There will be happiness and peace when you are with Appu and Ganesh says Rangayana Raghu. Read on
  Thursday, November 17, 2022, 10:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X