For Quick Alerts
  ALLOW NOTIFICATIONS  
  For Daily Alerts

  ಭಾಷೆಯ ಗಡಿ ಮೀರಿ ಬೆಳೆದವರು, ಬಾಂಧವ್ಯ ಪಡೆದವರು

  |
  ಭಾಷೆಯ ಗಡಿ ಮೀರಿ ಬೆಳೆದವರು..!

  ಸಿನಿಮಾ, ನಾಟಕ, ಸಂಗೀತ ಹೀಗೆ ಯಾವುದೇ ಕಲಾ ಪ್ರಕಾರವಾಗಲಿ ಅಲ್ಲಿ ಭಾಷೆಗಿಂತ ಕಲೆ ಮುಖ್ಯ. ಕಲೆ ಎನ್ನುವುದು ಭಾಷೆಯನ್ನು ಮೀರಿದ ಅದ್ಬುತ ಪ್ರಪಂಚ.

  ಈ ರೀತಿ ಭಾಷೆಯನ್ನು ಮೀರಿ ಕೆಲವು ಸೌತ್ ಇಂಡಿಯ ನಟರು ಬೆಳೆದು ನಿಂತಿದ್ದಾರೆ. ಇಂದು ಎಲ್ಲ ಭಾಷೆಯ ಪ್ರೇಕ್ಷಕರಿಂದ ಅವರು ಪ್ರೀತಿ ಪಡೆದುಕೊಂಡಿದ್ದಾರೆ. ಅವರು ಮಾಡುವ ಸಿನಿಮಾಗಳನ್ನ ಎಲ್ಲ ಚಿತ್ರರಂಗದ ಪ್ರೇಕ್ಷಕರು ಖುಷಿ ಪಟ್ಟು ನೋಡುತ್ತಾರೆ. ಈ ನಟರು ಇತ್ತೀಚಿಗಿನ ತಮ್ಮ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

  ಯಶ್ ಬಿಟ್ರೆ ಬಿ.ಸುರೇಶ್ ಗೆ ಹೆಚ್ಚು ಸಂಭಾವನೆ: ಹಾಗಿದ್ರೆ 'ರಾಕಿ' ಸಂಭಾವನೆ ಎಷ್ಟು?

  ತಮಿಳಿನ ನಟ ವಿಜಯ್ ಸೇತುಪತಿ, ತೆಲುಗಿನ ವಿಜಯ್ ದೇವರಕೊಂಡ, ಮಲೆಯಾಳಂ ನಟ ದುಲ್ಕರ್ ಸಲ್ಮಾನ್ ಇದೀಗ ಕನ್ನಡದ ನಟ ಯಶ್ ಈ ನಾಲ್ಕು ಸೌತ್ ಸ್ಟಾರ್ ಗಳು ತಮ್ಮ ಸಿನಿಮಾಗಳಿಂದ ಇಡೀ ದೇಶದ ಜನರ ಗಮನ ಸೆಳೆದಿದ್ದಾರೆ. ಜೊತೆಗೆ ಅವರ ಸ್ವಭಾವಗಳ ಮೂಲಕ ಇಷ್ಟ ಆಗುತ್ತಿದ್ದಾರೆ. ಮುಂದೆ ಓದಿ...

  ಭಾರತಕ್ಕೆ ಅಣ್ತಮ್ಮ ನಾದ ಯಶ್

  ಭಾರತಕ್ಕೆ ಅಣ್ತಮ್ಮ ನಾದ ಯಶ್

  ಇಷ್ಟು ದಿನ ಯಶ್ ಬರೀ ಕನ್ನಡದ ಅಣ್ತಮ್ಮನಾಗಿದ್ದರು. ಆದರೆ, ಈಗ ಅವರು ಇಡೀ ಭಾರತದ ಅಣ್ತಮ್ಮನಾಗಿದ್ದಾರೆ. 'ಕೆಜಿಎಫ್' ಎಂಬ ಮಹಾ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಎಲ್ಲ ಚಿತ್ರರಂಗದ ಜನರ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾ ಸೇರಿದಂತೆ ಅನೇಕ ಕಡೆ ಬೇರೆ ಭಾಷೆಯ ಅಭಿಮಾನಿಗಳು ಯಶ್ ಬಗ್ಗೆ ಒಳ್ಳೆಯ ಮಾತುಗಳನ್ನು ಬರೆಯುತ್ತಿದ್ದಾರೆ. ಯಶ್ ಪ್ರಯತ್ನಕ್ಕೆ ಗೌರವ ನೀಡುತ್ತಿದ್ದಾರೆ.

  ವಿಜಯ್ ಸೇತುಪತಿ ಕಂಡ್ರೆ ಎಲ್ಲರಿಗೂ ಇಷ್ಟ

  ವಿಜಯ್ ಸೇತುಪತಿ ಕಂಡ್ರೆ ಎಲ್ಲರಿಗೂ ಇಷ್ಟ

  ಕಾಲಿವುಡ್ ನಟ ವಿಜಯ್ ಸೇತುಪತಿ ಸಿನಿಮಾದಿಂದ ಸಿನಿಮಾಗೆ ಪ್ರಬುದ್ಧತೆ ಪಡೆಯುತ್ತಿದ್ದಾರೆ. '96' ಚಿತ್ರ ಬಂದ ಮೇಲಂತೂ ಅವರು ಎಲ್ಲ ಚಿತ್ರರಂಗದ ಜನರ ಪ್ರೀತಿ ಪಡೆದಿದ್ದಾರೆ. ವಿಜಯ್ ಸೇತುಪತಿ ಒಬ್ಬ ಬೇರೆ ಭಾಷೆಯ ನಟ ಎನ್ನುವ ಭಾವ ಇಲ್ಲದೆ ಜನ ಅವರನ್ನು ಇಷ್ಟಪಡುತ್ತಿದ್ದಾರೆ. ಅವರ ಸಿನಿಮಾಗಳು ಹಾಗೂ ಅವರ ಪಾತ್ರಗಳು ಅವರ ಅಭಿಮಾನಿಗಳ ಸಂಖ್ಯೆಯನ್ನ ಹೆಚ್ಚು ಮಾಡುತ್ತಿವೆ.

  ಅತಿ ಹೆಚ್ಚು ಸ್ಕ್ರೀನ್ ನಲ್ಲಿ 'ಕೆಜಿಎಫ್': ಎಷ್ಟು ಚಿತ್ರಮಂದಿರ?

  ದುಲ್ಕರ್ ಸಲ್ಮಾನ್ ಎಂಬ ಯುತ್ ಐಕಾನ್

  ದುಲ್ಕರ್ ಸಲ್ಮಾನ್ ಎಂಬ ಯುತ್ ಐಕಾನ್

  ಮಲೆಯಾಳಂ ನಟ ದುಲ್ಕರ್ ಸಲ್ಮಾನ್ ಮಾಡುವ ಸಿನಿಮಾಗಳು ಇಂದಿನ ಜನರೇಷನ್ ಗೆ ಬಹಳ ಇಷ್ಟ ಆಗುತ್ತದೆ. ಲಾರ್ಜರ್ ದ್ಯಾನ್ ಲೈಫ್ ರೀತಿಯ ಅವರ ಸಿನಿಮಾಗಳು ನೋಡುಗರಿಗೆ ಆನಂದ ನೀಡುತ್ತದೆ. ಸಿನಿಮಾ ಮಾತ್ರವಲ್ಲದೆ ನಡೆ ನುಡಿಯಿಂದಲು ದುಲ್ಕರ್ ಎಲ್ಲರಿಗೆ ಹತ್ತಿರ ಎನ್ನಿಸಿ ಬಿಡುತ್ತಾರೆ. ಇದು ಅವರನ್ನ ಮಾಲಿವುಡ್ ನಿಂದ ಬಾಲಿವುಡ್ ನಲ್ಲಿಯೂ ಸಿನಿಮಾ ಮಾಡುವ ಹಾಗೆ ಮಾಡಿತ್ತು.

  ವಿಜಯ್ ದೇವರಕೊಂಡ ಆಟಿಟ್ಯೂಡ್

  ವಿಜಯ್ ದೇವರಕೊಂಡ ಆಟಿಟ್ಯೂಡ್

  ಟಾಲಿವುಡ್ ನಟ ವಿಜಯ್ ದೇವರಕೊಂಡ 'ಅರ್ಜುನ್ ರೆಡ್ಡಿ' ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಪಡೆದರು. ಟಾಲಿವುಡ್ ಗಡಿದಾಟಿ ಎಲ್ಲ ಚಿತ್ರರಂಗದಲ್ಲಿ ಅವರ ಫ್ಯಾನ್ಸ್ ಗಳು ಹೆಚ್ಚಾದರು. ಏಳೆಂಟು ಸಿನಿಮಾ ಮಾಡಿರುವ ಈ ನಟನ ಮೇಲೆ ಅದೇನೋ ಎಲ್ಲರಿಗೂ ಲವ್ ಇದೆ. ಅವರ ಆಟಿಟ್ಯೂಡ್ ಎಲ್ಲರ ಗಮನ ಸೆಳೆಯುತ್ತದೆ.

  'ಕೆಜಿಎಫ್' ಸಿನಿಮಾಗೂ ಕಮಲ್ ಹಾಸನ್ ಗೂ ಸಂಬಂಧ ಇದ್ಯಾ?

  English summary
  These 4 south indian actors got attention from movie lovers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X