Don't Miss!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- News
Indira Canteens: ಇಂದಿರಾ ಕ್ಯಾಂಟೀನ್ಗಳಲ್ಲಿ ಕುಡಿಯಲು ನೀರಿಲ್ಲ, ಬಿಲ್ ಕಟ್ಟಿಲ್ಲ ಎಂದು ಸಂಪರ್ಕ ಕಡಿತ
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Technology
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ vs ಅಪ್ಪು ಹೊಸಪೇಟೆ ಫ್ಯಾನ್‌ವಾರ್‌ಗೆ ಇವೆ ಹಳೆಯ ಸೇಡುಗಳು; ಗಲಾಟೆ ಆಗಿದ್ದೇ ಇವುಗಳಿಂದ!
ಹೊಸಪೇಟೆ.. ಅಕ್ಷರಶಃ ತೆಲುಗು ಸಿನಿಮಾಗಳ ಅಬ್ಬರ ಇರುವ ಪಟ್ಟಣ. ತೆಲುಗು ಚಿತ್ರಗಳು ಇಲ್ಲಿ ಹೊಂದಿರುವ ಕ್ರೇಜ್ ಅನ್ನು ದಶಕದ ಹಿಂದೆಯೇ ಮೀರಿಸಿ ನಿಂತದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಅಪ್ಪು ಚಿತ್ರಗಳು ಬಿಡುಗಡೆಯಾಗುತ್ತವೆ ಎಂದರೆ ಮಧ್ಯರಾತ್ರಿ 12 ಗಂಟೆಗಳಿಗೇನೇ ಪ್ರದರ್ಶನಗಳು ಶುರುವಾಗ್ತಾ ಇದ್ವು. ಈ ಮೂಲಕವೇ ತೆಲುಗು ಸಿನಿಮಾಗಳ ಅಡ್ಡ ಆಗಿದ್ದ ಹೊಸಪೇಟೆ ಅಪ್ಪು ಅಡ್ಡಾ ಎಂದು ಬದಲಾಗಿತ್ತು. ಮಧ್ಯರಾತ್ರಿಯೂ ಚಿತ್ರಮಂದಿರಗಳಲ್ಲಿ ನಿಗದಿತ ಸೀಟುಗಳಿಗಿಂತ ಹೆಚ್ಚು ಜನ ನಿಂತು ಚಿತ್ರಗಳನ್ನು ವೀಕ್ಷಿಸುತ್ತಿದ್ದರು.
ಹೀಗೆ ಅಲ್ಲಿನ ಸಿನಿ ಪ್ರೇಮಿಗಳಿಗೆ ಪುನೀತ್ ಎಂದರೆ ಏನೋ ಪ್ರೀತಿ, ಯಾರಿಂದಲೂ ಮುಟ್ಟಲಾಗದ ಕ್ರೇಜ್. ಇನ್ನು ಹೊಸಪೇಟೆ ಅಂದ್ರೆ ನಂಗೆ ಇಷ್ಟ, ಹೊಸಪೇಟೆ ಜನ ಅಂದ್ರೆ ಸಖತ್ ಇಷ್ಟ ಎಂದು ಅಪ್ಪು ಕೂಡ ಹೇಳಿದ್ದು ವೈರಲ್ ಆಗಿತ್ತು. ಆದರೆ ಆ ಮಾತ್ರಕ್ಕೆ ಅಲ್ಲಿ ಬೇರೆ ನಟರನ್ನು ದ್ವೇಷಿಸುತ್ತಾರೆ, ಬೇರೆ ನಟರ ಕಾರ್ಯಕ್ರಮ ಆದರೆ ಬ್ಯಾನರ್ ಕಿತ್ತು ಆಕ್ರೋಶ ಹೊರಹಾಕುತ್ತಾರೆ ಎಂದಲ್ಲ.
ಕ್ರಾಂತಿ ಚಿತ್ರದ ವಿಷಯದಲ್ಲಿ ಈ ರೀತಿ ಅಪ್ಪು ಅಭಿಮಾನಿಗಳು ಬ್ಯಾನರ್ ಕಿತ್ತದ್ದು, ತಮ್ಮ ಬ್ಯಾನರ್ ಹಾಕಿದ್ದು ಹಾಗೂ ಅಪ್ಪು ಘೋಷಣೆ ಕೂಗಿ ಸಂಭ್ರಮಿಸಿದ್ದಕ್ಕೆ ಕೆಲ ಪ್ರಚೋದನಕಾರಿ ಅಂಶಗಳೂ ಇವೆ ಹಾಗೂ ಕೆಲ ತಪ್ಪುಗಳೂ ಇವೆ ಎಂಬುದು ಸತ್ಯ. ಇದೆಲ್ಲಾ ಶುರುವಾಗಿದ್ದು ನಟ ದರ್ಶನ್ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಬೇರೆ ಅರ್ಥ ನೀಡಿ ಅಪ್ಪು ಅಭಿಮಾನಿಗಳಲ್ಲಿ ಕಿಡಿ ಹತ್ತಿಸಿದ್ದ ಕಾರಣ. ಈ ಹೇಳಿಕೆಗಳ ನಂತರ ಅಭಿಮಾನಿಗಳು ಕೆಳಕಂಡಂತೆ ವರ್ತಿಸಿದ್ದೇ ಹೊಸಪೇಟೆಯಲ್ಲಿ ಅಪ್ಪು ಹಾಗೂ ದರ್ಶನ್ ಇಬ್ಬರ ಅಭಿಮಾನಿಗಳ ನಡುವೆ ವಾರ್ ನಡೆಯಲು ಕಾರಣ.

ಯಾವುದು ಆ ಹೇಳಿಕೆ?
ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ದರ್ಶನ್ ತಮ್ಮ ಅಭಿಮಾನಿಗಳನ್ನು ಹೊಗಳಿದ್ದರು. ಪುನೀತ್ ರಾಜ್ ಕುಮಾರ್ ಅವರು ನಿಧನ ಹೊಂದಿದ ನಂತರ ಸಿಕ್ಕ ಅಭಿಮಾನಿಗಳ ಪ್ರೀತಿಯನ್ನು ನನ್ನ ಅಭಿಮಾನಿಗಳು ನನಗೆ ಬದುಕಿದ್ದಾಗಲೇ ತೋರಿಸಿದ್ದಾರೆ ಎಂದಿದ್ದರು. ಆದರೆ ಈ ಹೇಳಿಕೆ ಅಪ್ಪು ಅಭಿಮಾನಿಗಳನ್ನು ಕೆರಳಿಸಿತ್ತು. ತನ್ನ ಅಭಿಮಾನಿಗಳ ಪ್ರೀತಿಯನ್ನು ಅಪ್ಪು ಸಾವಿನ ಜತೆ ಹೋಲಿಕೆ ಮಾಡಿಕೊಳ್ಳಬೇಕಿತ್ತಾ ಎಂದು ದರ್ಶನ್ ವಿರುದ್ಧ ಕಿಡಿಕಾರಿದ್ದರು.

ಈ ಹೇಳಿಕೆಯಿಂದ ಹೊಸಪೇಟೆಯಲ್ಲಿ ಕಿಡಿ
ಈ ಹೇಳಿಕೆ ಸರಿಯಿಲ್ಲ ಎಂದು ಅಪ್ಪು ಅಭಿಮಾನಿಗಳು ವಿರೋಧಿಸಿದ್ದಕ್ಕೆ ದರ್ಶನ್ ಅಭಿಮಾನಿಗಳು ಮರು ಟ್ರೋಲ್ ಶುರು ಮಾಡಿದ್ದರು. ಅದರಲ್ಲೂ 'ಡಿಬಾಸ್ ಸೋಲ್ಜರ್ಸ್' ಎಂಬ ಫೇಸ್ ಬುಕ್ ಪುಟದಲ್ಲಿ ಅಪ್ಪು ಬಗ್ಗೆ ಅತಿಕೆಳಮಟ್ಟದಲ್ಲಿ ಟ್ರೋಲ್ ಮಾಡಲಾಗಿತ್ತು, ಕೆಲ ಪೋಸ್ಟ್ ಅಪ್ಪು ಸಾವನ್ನೂ ಸಂಭ್ರಮಿಸಿದಂತೆ ಕೂಡ ಇದ್ದವು. ಈ ಎರಡೂ ವಿಷಯಗಳ ಬಗ್ಗೆ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದ ಅಪ್ಪು ಅಭಿಮಾನಿಗಳು ಇಂತಹ ಹೇಳಿಕೆ ನೀಡಿದ ದರ್ಶನ್ ಚಿತ್ರಗಳನ್ನು ಹೊಸಪೇಟೆಯಲ್ಲಿ ಬ್ಯಾನ್ ಮಾಡ್ತೇವೆ ಹುಷಾರ್ ಎಂದಿದ್ರು ಹಾಗೂ ಇದು ದರ್ಶನ್ ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿತ್ತು. ಇದರ ಬಗ್ಗೆ ಸ್ವತಃ ದರ್ಶನ್ ಆಪ್ತ ವಿನೋದ್ ಪ್ರಭಾಕರ್ ಮಾತನಾಡಿ ಬುದ್ಧಿವಾದ ಹೇಳಿ ಪುನೀತ್ ಅಭಿಮಾನಿಗಳಲ್ಲಿ ಮನವಿಯನ್ನೂ ಮಾಡಿದ್ರು. ಅಂದು ವಿನೋದ್ ಪ್ರಭಾಕರ್ ಹೇಳಿದ ಮಾತನ್ನು ಇಬ್ಬರು ನಟರ ಅಭಿಮಾನಿಗಳು ಕೇಳಿ ಸುಮ್ಮನಾಗಿದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತಿತ್ತು.

ಬ್ಯಾನ್ ಮಾಡ್ತೀವಿ ಅಂದ್ರಲ್ಲ ಇವಾಗ ತಾಕತ್ತಿದ್ರೆ ಮಾಡಿ!
ಹೀಗೆ ಸುಮಾರು ಮೂರ್ನಾಲ್ಕು ತಿಂಗಳುಗಳ ಬ್ಯಾನ್ ಮಾಡ್ತೇವೆ ಎಂದು ಹೇಳಿದ್ರಲ್ಲ, ಈಗ ಅದೇ ಊರಿಗೆ ನಮ್ಮ ಬಾಸ್ ಬರುತ್ತಿದ್ದಾರೆ, ಅದೇನು ಮಾಡ್ಕೊತಿರೊ ಮಾಡ್ಕೊಳಿ ಎಂದು ಕೆಲ ದರ್ಶನ್ ಅಭಿಮಾನಿಗಳು ಪುನೀತ್ ಅಭಿಮಾನಿಗಳನ್ನು ಕಿಚಾಯಿಸಿದ್ದರು. ಇದರಿಂದ ರೊಚ್ಚಿಗೆದ್ದ ಅಪ್ಪು ಫ್ಯಾನ್ಸ್ ಎಲ್ಲಿ ಕ್ರಾಂತಿ ಹಾಡು ಬಿಡುಗಡೆ ವೇದಿಕೆ ಸಿದ್ಧವಾಗುತ್ತಿತ್ತೋ ಅಲ್ಲೇ ಅಪ್ಪು ಹೊಸಪೇಟೆ ಕಿಂಗ್ ಎಂಬ ಬ್ಯಾನರ್ ಹಾಕಿದರು, ಪಟಾಕಿ ಸಿಡಿಸಿದರು. ಇನ್ನು ಇದನ್ನೂ ಟ್ರೋಲ್ ಮಾಡಿದ ಕೆಲವು ದರ್ಶನ್ ಫ್ಯಾನ್ಸ್ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಬ್ಯಾನರ್ ಹಾಕಿದ್ದಾರೆ ಎಂದರು ಹಾಗೂ ಹೊಸಪೇಟೆ ಅಪ್ಪು ಅಡ್ಡವಲ್ಲ ಇಲ್ಲಿ ನಮ್ದೇ ದರ್ಬಾರ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಹಂಚಿಕೊಂಡರು. ಈ ಎಲ್ಲಾ ಟ್ರೋಲುಗಳಿಂದ ಮತ್ತಷ್ಟು ಕೋಪಗೊಂಡ ಅಪ್ಪು ಫ್ಯಾನ್ಸ್ ಅಪ್ಪು ಬಾವುಟ ಹಿಡಿದು ರೋಡಿಗಿಳಿದರು ಹಾಗೂ ದರ್ಶನ್ ಅಭಿಮಾನಿಗಳು ಹಾಕಿದ್ದ ಬ್ಯಾನರ್ ಹರಿದರು.
ಒಟ್ಟಿನಲ್ಲಿ ಮೇಲಿನವುಗಳ ಪೈಕಿ ಯಾವುದಾದರೊಂದು ತಪ್ಪು ಅಥವಾ ಅನಗತ್ಯ ಕೆಲಸ ನಡೆಯದೇ ಇದ್ದಿದ್ರೂ ಸಹ ಕ್ರಾಂತಿ ಹಾಡು ಬಿಡುಗಡೆ ಕಾರ್ಯಕ್ರಮ ಹೊಸಪೇಟೆಯಲ್ಲಿಯೇ ಸಹಜವಾಗಿಯೇ ನಡೆದು ಮುಗಿದಿರುತ್ತಿತ್ತು. ಆದರೆ ಇಲ್ಲಿ ಇಬ್ಬರೂ ಆಭಿಮಾನಿಗಳು ದುಡುಕಿದ ಕಾರಣ ಇಷ್ಟೆಲ್ಲಾ ನಡೆಯಿತು.

ಚಪ್ಪಲಿ ಎಸೆದದ್ದಾರು ಎಂಬುದು ಬಹಿರಂಗವಾಗಬೇಕಿದೆ
ಇನ್ನು ದರ್ಶನ್ ಅಪ್ಪು ಪುತ್ಥಳಿಗೆ ಹಾರ ಹಾಕಿದ ನಂತರ ಎಲ್ಲವೂ ತಣ್ಣಗಾಗಿತ್ತು ಹಾಗೂ ಕಾರ್ಯಕ್ರಮವೂ ಶುರು ಆಗಿತ್ತು. ಆದರೆ ಕೆಲ ಸಮಯದಲ್ಲೇ ಕಿಡಿಗೇಡಿಯೊಬ್ಬ ವೇದಿಕೆ ಮೇಲಿದ್ದ ದರ್ಶನ್ ಅವರಿಗೆ ಚಪ್ಪಲಿ ಎಸೆದಿದ್ದ. ಇದು ಸದ್ಯ ದೊಡ್ಡ ಕನ್ನಡ ಚಲನಚಿತ್ರರಂಗವೇ ತಲೆ ತಗ್ಗಿಸುವಂತಹ ಬೆಳವಣಿಗೆಯಾಗಿದ್ದು, ಈ ಕೃತ್ಯ ಎಸಗಿದ್ದು ಅಪ್ಪು ಅಭಿಮಾನಿಗಳೇ ಎಂದು ದರ್ಶನ್ ಅಭಿಮಾನಿಗಳು ವಾದಿಸುತ್ತಿದ್ದರೆ, ಅಪ್ಪು ಫ್ಯಾನ್ಸ್ ಇದು ಮೂರನೇ ವ್ಯಕ್ತಿ ಅಪ್ಪು ಹೆಸರಿಗೆ ಮಸಿ ಬಳಿಯಲು ಮಾಡಿರುವ ಕೆಲಸ ಎಂದಿದ್ದಾರೆ. ಇನ್ನೂ ಕೆಲವರು ದರ್ಶನ್ ಅದೃಷ್ಟ ದೇವತೆ ಹೇಳಿಕೆ ನೀಡಿದ್ದಕ್ಕೆ ಕೋಪಗೊಂಡವರು ಯಾರೋ ಚಪ್ಪಲಿ ಎಸೆದಿದ್ದಾರೆ ಎಂದೂ ಸಹ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಆತ ಯಾರು ಎಂದು ತಿಳಿಯುವ ತನಕ ಅಪ್ಪು ಹಾಗೂ ದರ್ಶನ್ ಅಭಿಮಾನಿಗಳ ಕಿತ್ತಾಟಕ್ಕೆ ಕೊನೆಯಂತೂ ಇಲ್ಲ.