Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

ಎವರ್ ಗ್ರೀನ್ ನಟಿ ಶ್ರೀದೇವಿ ಫೆಬ್ರವರಿ 24 ರಂದು ದುಬೈನಲ್ಲಿ ಸಾವಿಗೀಡಾದರು. ಆದ್ರೆ, ಅವರ ಅಂತಿಮ ಸಂಸ್ಕಾರವನ್ನ ಇಂದು ಮಾಡಲಾಗಿದೆ. ಅದಕ್ಕೆ ಕಾರಣ ದುಬೈನಲ್ಲಿ ಎದುರಾದ ಸಮಸ್ಯೆಗಳು.
ದುಬೈ ಹೋಟೆಲ್ ನ ಬಾತ್ ಟಬ್ ನಲ್ಲಿ ಶ್ರೀದೇವಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಇದು ಕೊಲೆಯೋ ಅಥವಾ ಆಕಸ್ಮಿಕ ಸಾವೋ ಎಂಬ ಶಂಕೆಯಲ್ಲಿ ದುಬೈ ಪೊಲೀಸರು ತನಿಖೆ ಕೈಗೊಂಡರು. ಇದರ ಮಧ್ಯೆ ಶ್ರೀದೇವಿ ಅವರ ಪಾರ್ಥಿವ ಶರೀರ ಇಂದು ಬರುತ್ತೆ, ನಾಳೆ ಬರುತ್ತೆ ಎಂದು ಭಾರತೀಯರು ಕಾದು ಕುಂತಿದ್ದರು. ಆದ್ರೆ, ದಿನಗಳು ಕಳೆಯಿತಾದರೂ ಪಾರ್ಥಿವ ಶರೀರ ಮಾತ್ರ ಬರಲಿಲ್ಲ.
ಶ್ರೀದೇವಿಯ ಅಂತಿಮ ದರ್ಶನ ಪಡೆದ ಸಿನಿತಾರೆಯರು: ಯಾರೆಲ್ಲಾ ಹೋಗಿದ್ದರು.?
ಆಗ ಬೋನಿ ಕಪೂರ್ ಗೆ ನೆರವಾಗಿದ್ದು ಭಾರತ ಮೂಲದ ವ್ಯಕ್ತಿ. ದುಬೈ ಸರ್ಕಾರದ ನಿಯಮಗಳನ್ನ ಪೂರ್ಣಗೊಳಿಸಲು ಕಪೂರ್ ಕುಟುಂಬಕ್ಕೆ ನೆರವಾಗಿ, ಶ್ರೀದೇವಿ ಪಾರ್ಥಿವ ಶರೀರವನ್ನ ತಾಯ್ನಾಡಿಗೆ ತರಲು ಸಹಾಯ ಮಾಡಿದ್ದಾರೆ. ಅಷ್ಟಕ್ಕೂ ದುಬೈನಲ್ಲಿ ಎದುರಾದ ಸಂಕಷ್ಟವೇನು? ಕಪೂರ್ ಕುಟುಂಬಕ್ಕೆ ಸಹಾಯ ಮಾಡಿದ ಆ ಭಾರತೀಯ ವ್ಯಕ್ತಿ ಯಾರು.? ಮುಂದೆ ಓದಿ.....

ಕೋಟಿ ಕೋಟಿ ಇದ್ದರೂ ಶರೀರ ತರಲು ಸಾಧ್ಯವಾಗಲಿಲ್ಲ
ಕಪೂರ್ ಕುಟುಂಬ ಬಾಲಿವುಡ್ ನ ಶ್ರೀಮಂತ ಮನೆತನ. ಕೋಟಿ ಕೋಟಿ ದುಡ್ಡು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಹೊಂದಿದ್ದಾರೆ. ಆದ್ರೆ, ದುಬೈನಲ್ಲಿ ಸಾವಿಗೀಡಾಗಿದ್ದ ಶ್ರೀದೇವಿಯ ಪಾರ್ಥಿವ ಶರೀರವನ್ನ ಭಾರತಕ್ಕೆ ತರಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಕಪೂರ್ ಕುಟುಂಬಕ್ಕೆ ನೆರವಾಗಿದ್ದು ಕೇರಳ ಮೂಲದ ವ್ಯಕ್ತಿ.
'ಬಾತ್ ಟಬ್'ನಲ್ಲಿ ಮಲಗಿ ಶ್ರೀದೇವಿ ಸಾವಿನ ಬಗ್ಗೆ ವರದಿ ನೀಡಿದ ಪತ್ರಕರ್ತ!

ಅಶ್ರಫ್ ಶೆರ್ರಿ ಥಮರಸ್ಸರಿ
44 ವರ್ಷದ ಅಶ್ರಫ್ ಶೆರ್ರಿ ಥಮರಸ್ಸರಿ ಎಂಬುವವರು ದುಬೈ ಸರ್ಕಾರದ ನಿಯಮಗಳ ಅನುಗುಣವಾಗಿ ಪ್ರಕ್ರಿಯೆಗಳನ್ನ ಪೂರ್ಣಗೊಳಿಸಿ ಶ್ರೀದೇವಿ ಪಾರ್ಥೀವ ಶರೀರವನ್ನ ಭಾರತಕ್ಕೆ ಕೊಂಡೊಯ್ಯಲು ನೆರವಾದರು.
ಬೋನಿ ಕಪೂರ್ ಮೊದಲ ಪತ್ನಿ ಮತ್ತು ಶ್ರೀದೇವಿ ಇಬ್ಬರೂ ದುರಾದೃಷ್ಟವಂತರೇ.! ಯಾಕೆ.?

ಅಶ್ರಫ್ ವೃತ್ತಿಯೇ ಇದು
ಭಾರತದ ಕೇರಳ ಮೂಲದವರಾದ ಅಶ್ರಫ್ ಶೆರ್ರಿ ಥಮರಸ್ಸರಿ ವೃತ್ತಿಯಲ್ಲಿ ಮೆಕಾನಿಕ್ ಆಗಿದ್ದು, ಕ್ರಮೇಣ ದುಬೈನಲ್ಲಿ ವಿದೇಶಿ ಪ್ರಜೆ ಮೃತಪಟ್ಟರೆ, ಮೃತದೇಹವನ್ನ ಸಂಬಂಧಪಟ್ಟ ದೇಶಕ್ಕೆ ರವಾನೆ ಆಗುವಂತೆ ನೋಡಿಕೊಳ್ಳಲು ಹಾಗೂ ಮೃತ ಸಂಬಂಧಿಕರಿಗೆ ಸಹಾಯ ಹಸ್ತ ಚಾಚಲು ಆರಂಭಿಸಿದರು. ದುಬೈ ಸರ್ಕಾರದ ಅನುಸಾರ ಪ್ರಮಾಣ ಪತ್ರಗಳನ್ನು ಹಾಗೂ ದಾಖಲೆಗಳನ್ನ ಸಲ್ಲಿಕೆ ಮಾಡಿ ಇದುವರೆಗೂ ಸುಮಾರು 30 ದೇಶಗಳ 4700ಕ್ಕೂ ಹೆಚ್ಚು ಮೃತದೇಹಗಳನ್ನ ರವಾನಿಸಿದ್ದಾರೆ.

ಎಲ್ಲರಿಗೂ ಒಂದೇ ಕಾನೂನು
''ನೀವಾಗಲಿ, ನಾನಾಗಲಿ ಅಥವಾ ಯಾರಾದರೂ ಆಗಲಿ ಎಲ್ಲರಿಗೂ ಒಂದೇ ಕಾನೂನು. ಯಾರಾದರೂ ಕೋಣೆಯಲ್ಲಿ ನಿಧನರಾದರೇ, ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷಿಸಲಾಗುತ್ತೆ. ತದ ನಂತರ ಪೊಲೀಸ್ ತಪಾಸಣೆ ಮಾಡಲಾಗುತ್ತೆ. ದುಬೈ, ಶಾರ್ಜಾ ಎಲ್ಲಿಯಾದರೂ ಇದೇ ಪ್ರಕ್ರಿಯೆ. ಈ ವಿಚಾರದಲ್ಲಿ ಶ್ರೀಮಂತ- ಬಡವ ಎನ್ನುವ ತಾರತಮ್ಯವಿಲ್ಲ'' ಎಂದು ಅಶ್ರಫ್ ಶೆರ್ರಿ ಥಮರಸ್ಸರಿ ತಿಳಿಸಿದ್ದಾರೆ.
'ಅತಿಲೋಕ ಸುಂದರಿ'ಗೆ ಅಂತಿಮ ನಮನ ಸಲ್ಲಿಸಿದ 'ಜಗದೇಕ ವೀರ'
ವೈರಲ್ ವಿಡಿಯೋ: ಕೊನೆಯ ಜಾಹೀರಾತಿನಲ್ಲಿ ಮಿರ ಮಿರ ಮಿಂಚಿದ್ದ 'ಚಾಂದಿನಿ'