For Quick Alerts
  ALLOW NOTIFICATIONS  
  For Daily Alerts

  ಈ ವಾರ 4 ಸಿನಿಮಾ: ಪ್ರತಿಯೊಂದು ಚಿತ್ರದಲ್ಲಿ ಒಂದೊಂದು ವಿಶೇಷತೆ

  By Bharath Kumar
  |

  ಈ ವಾರ ಕನ್ನಡದಲ್ಲು ಒಟ್ಟು ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿದೆ. ನಾಲ್ಕು ಚಿತ್ರಗಳು ಒಂದಕ್ಕಿಂತ ಇನ್ನೊಂದು ತುಂಬಾ ವಿಶೇಷವಾಗಿದೆ. ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಅಭಿನಯದ ಚೊಚ್ಚಲ ಸಿನಿಮಾ ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ. ಹೀಗಾಗಿ, ಡೈನಾಮಿಕ್ ಕುಟುಂಬದ ಎರಡನೇ ಮಗನ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ಸ್ಯಾಂಡಲ್ ವುಡ್ ಮಂದಿಗೆ ಕಾಡುತ್ತಿದೆ.

  'ಚೌಕ' ಮತ್ತು 'ಹ್ಯಾಪಿ ನ್ಯೂ ಇಯರ್' ನಂತರ ದಿಗಂತ್ ಸಿನಿಮಾ ಬಿಡುಗಡೆಯಾಗುತ್ತಿದೆ. ಪಕ್ಕಾ ಕ್ಲಾಸ್ ಆಗಿರುವ ಕಥೆಯೊಂದಿಗೆ ಬರ್ತಿರುವ ದಿಗ್ಗಿಗೆ ಸ್ವಾಗತ ಹೇಗಿರಲಿದೆ ಎಂಬ ಪ್ರಶ್ನೆ.

  ಇನ್ನು ನಾನ್ ಪಕ್ಕಾ ಕಮರ್ಷಿಯಲ್ ಅಂತ ನಟ ಅನಿಶ್ ನಟನೆಯ ಜೊತೆ ನಿರ್ಮಾಪಕನಾಗಿಯೂ ಪ್ರೇಕ್ಷಕರ ಮುಂದೆ ಎಂಟ್ರಿ ಕೊಡ್ತಿದ್ದಾರೆ. ಈ ಮೂವರ ನಡುವೆ ಮೋದಿ ಅವರ ಸುತ್ತಾ ನಡೆಯ ಕಥೆಯೊಂದಿಗೆ ಇನ್ನೊಂದು ಚಿತ್ರ ಈ ವಾರ ಥಿಯೇಟರ್ ಗೆ ಲಗ್ಗೆಯಿಡ್ತಿದೆ. ಆ ಚಿತ್ರಗಳು ಒಂದು ವಿಶೇಷ ವರದಿ ಇಲ್ಲಿದೆ. ಮುಂದೆ ಓದಿ.....

  ವಾಸು ನಾನ್ ಪಕ್ಕಾ ಕಮರ್ಷಿಯಲ್

  ವಾಸು ನಾನ್ ಪಕ್ಕಾ ಕಮರ್ಷಿಯಲ್

  ಅಕಿರಾ ಖ್ಯಾತಿಯ ಅನಿಶ್ ತೇಜೇಶ್ವರ್ ಅಭಿನಯದ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ನಾಳೆ ರಿಲೀಸ್ ಆಗ್ತಿದೆ. ಅನಿಶ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದು, ಸ್ವತಃ ಅನಿಶ್ ತೇಜೇಶ್ವರ್ ಅವರೇ ನಿರ್ಮಾಣ ಮಾಡಿದ್ದಾರೆ. ಇನ್ನು ಅಜಿತ್ವಾಸನ್ ಉಗ್ಗಿನಾ ನಿರ್ದೇಶನ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  'ಸುಪ್ರೀಂ ಸ್ಟಾರ್' ಬಿರುದಿಗೆ ಬೇಸರಗೊಂಡ ಅನಿಶ್ ತೇಜೇಶ್ವರ್'ಸುಪ್ರೀಂ ಸ್ಟಾರ್' ಬಿರುದಿಗೆ ಬೇಸರಗೊಂಡ ಅನಿಶ್ ತೇಜೇಶ್ವರ್

  ಕಥೆಯೊಂದು ಶುರುವಾಗಿದೆ

  ಕಥೆಯೊಂದು ಶುರುವಾಗಿದೆ

  ರಕ್ಷಿತ್ ಶೆಟ್ಟಿ ಮತ್ತು ಪುಷ್ಖರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿರುವ 'ಕಥೆಯೊಂದು ಶುರುವಾಗಿದೆ' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ದಿಗಂತ್ ಮತ್ತು ಪೂಜಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನ ಸೆನ್ನಾ ಹೆಗ್ಡೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇನ್ನುಳಿದಂತೆ ಅಶ್ವಿನ್ ರಾವ್ ಪಲ್ಲಕಿ, ಶ್ರೇಯಾ ಅಂಜನ್, ಪ್ರಾಕಾಶ್, ಬಾಬು ಹಿರಣ್ಣಯ್ಯ, ಅರುಣ ಬಾಲರಾಜ್, ರಘು ರಾಮನ್‍ಕೊಪ್ಪ ಅಭಿನಯಿಸಿದ್ದಾರೆ. ವಿದೇಶದಲ್ಲಿ ತೆರೆಕಂಡಿರುವ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.

  ಮೊಟ್ಟ ಮೊದಲ ವಿಮರ್ಶೆ: ಪ್ರೇಕ್ಷಕರ ಮನಗೆದ್ದ 'ಕಥೆಯೊಂದು ಶುರುವಾಗಿದೆ'ಮೊಟ್ಟ ಮೊದಲ ವಿಮರ್ಶೆ: ಪ್ರೇಕ್ಷಕರ ಮನಗೆದ್ದ 'ಕಥೆಯೊಂದು ಶುರುವಾಗಿದೆ'

  ಕುಮಾರಿ 21ಎಫ್

  ಕುಮಾರಿ 21ಎಫ್

  ಖ್ಯಾತ ನಟ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಾಮ್ ದೇವರಾಜ್ ನಾಯಕರಾಗಿ ಅಭಿನಯಿಸಿರುವ ಚೊಚ್ಚಲ ಸಿನಿಮಾ 'ಕುಮಾರಿ 21ಎಫ್' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ತೆಲುಗಿನ ರೀಮೇಕ್ ಆಗಿರುವ ಈ ಚಿತ್ರಕ್ಕೆ ಸುಕುಮಾರ್ ಕಥೆ, ಚಿತ್ರಕಥೆ ಬರೆದಿದ್ದು, ಶ್ರೀಮಾನ್ ವೆಮುಲಾ ನಿರ್ದೇಶನ ಮಾಡಿದ್ದಾರೆ. ಪ್ರಣಾಮ್ ದೇವರಾಜ್ ಗೆ ನಿಧಿ ಕುಶಾಲಪ್ಪ ನಾಯಕಿಯಾಗಿದ್ದು, ರವಿಕಾಳೆ, ಅವಿನಾಶ್, ಉಮೇಶ್, ಸಂಗೀತ, ರಿತೀಶ್, ಅಕ್ಷಯ್, ಮನೋಜ್, ಚಿದಾನಂದ್, ಅಪೂರ್ವ ಗೌಡ, ವಾಣಿಶ್ರೀ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  'ಕುಮಾರಿ 21F' ಚಿತ್ರ ನೋಡಲು ಈ ನಾಲ್ಕು ಕಾರಣ ಸಾಕು'ಕುಮಾರಿ 21F' ಚಿತ್ರ ನೋಡಲು ಈ ನಾಲ್ಕು ಕಾರಣ ಸಾಕು

  ಈ ವಾರ 'ಸ್ಟೇಟ್ ಮೆಂಟ್' ತೆರೆಗೆ

  ಈ ವಾರ 'ಸ್ಟೇಟ್ ಮೆಂಟ್' ತೆರೆಗೆ

  ವೇಣು ಕೆ ಅಎಚ್ ಅವರು ನಿರ್ಮಿಸಿರುವ 'ಸ್ಟೇಟ್ ಮೆಂಟ್' ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಪ್ಪಿ ಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಾಧಾರಾಮಚಂದ್ರ, ಗಿರೀಶ್ ಜತ್ತಿ, ಅಭಿಲಾಶ್, ಮನೋಜ್, ಕಾರ್ತಿಕ್, ನಿರಂಜನ್, ಎಂ.ಕೆ.ಮಠ ಪ್ರಮುಖ ತಾರಬಳಗದಲ್ಲಿ ನಟಿಸಿದ್ದಾರೆ.

  English summary
  anish tejeshwar's vasu naan pakka commercial, diganth starrer katheyondu shuruvagide, kumari 21f, and statement movie are releasing this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X