'ಶಾಂಘೈ'ನಲ್ಲಿ 2 ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡ 'ತಿಥಿ'
ನವ ನಿರ್ದೇಶಕ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದ 'ತಿಥಿ' ಸಿನಿಮಾ ಯಶಸ್ಸಿನ ಬೆನ್ನೇರಿ ಓಡುತ್ತಲೇ ಇದೆ. ರಾಜ್ಯ-ರಾಷ್ಟ್ರ-ಅಂತಾರಾಷ್ಟ್ರೀಯ ಅಂತ ಹಲವಾರು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಂಡಿರುವ ಸೆಂಚುರಿ ಗೌಡ್ರ 'ತಿಥಿ'ಯ ಕಿರೀಟಕ್ಕೆ ಇದೀಗ ಮತ್ತೊಂದು ಗರಿ ಮೂಡಿದೆ.
ಹೌದು 19ನೇ ಅಂತಾರಾಷ್ಟ್ರೀಯ ಶಾಂಘೈ ಪ್ರಶಸ್ತಿಗೆ ಆಯ್ಕೆಯಾಗಿದ್ದ 'ತಿಥಿ' ಸಿನಿಮಾ ಅಲ್ಲೂ ಪ್ರಶಸ್ತಿ ಗೆದ್ದು ಸಂಭ್ರಮದಿಂದ ಬೀಗುತ್ತಿದೆ.[19ನೇ ಶಾಂಘೈ ಚಿತ್ರೋತ್ಸವಕ್ಕೆ ಆಯ್ಕೆಯಾದ ಸೆಂಚುರಿ ಗೌಡ್ರ 'ತಿಥಿ']

1. ಅತ್ಯುತ್ತಮ ಚಿತ್ರ, 2.ಅತ್ಯುತ್ತಮ ನಿರ್ದೇಶಕ, 3. ಅತ್ಯುತ್ತಮ ಚಿತ್ರಕಥೆ ಅಂತ ಸುಮಾರು ಮೂರು ವಿಭಾಗಗಳಲ್ಲಿ 19ನೇ ಶಾಂಘೈ ಚಲನಚಿತ್ರೋತ್ಸವದಲ್ಲಿ ಸ್ಪರ್ಧೆಗಿಳಿದಿದ್ದ 'ತಿಥಿ' ಇದೀಗ ಎರಡು ಪ್ರಶಸ್ತಿ ಗೆದ್ದು ಮತ್ತೆ ಸುದ್ದಿ ಮಾಡಿದೆ.
ಈ ಬಾರಿ 19ನೇ ಶಾಂಘೈ ಚಲನಚಿತ್ರೋತ್ಸವದಲ್ಲಿ 'ಅತ್ಯುತ್ತಮ ಚಿತ್ರ' ಮತ್ತು 'ಅತ್ಯುತ್ತಮ ಚಿತ್ರಕಥೆ' ಎಂಬ ಎರಡು ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ 'ತಿಥಿ'ಯ ಪ್ರಶಸ್ತಿಗಳ ಪಟ್ಟಿಗೆ ಮತ್ತೆರಡು ಹೊಸ ಪ್ರಶಸ್ತಿ ಸೇರ್ಪಡೆಗೊಂಡಿದೆ.['ತಿಥಿ' ನೋಡಿ ನಕ್ಕು-ನಕ್ಕು ಸುಸ್ತಾದ ಹಿಂದಿ ನಟ ಅಮೀರ್ ಖಾನ್]

ಈಗಾಗಲೇ ನಿರ್ದೇಶಕ ರಾಮ್ ರೆಡ್ಡಿ ಅವರು ಪ್ರಶಸ್ತಿ ಸ್ವೀಕರಿಸಿದ್ದು, ಈ ಅದ್ದೂರಿ ಚಲನಚಿತ್ರೋತ್ಸವದ ಕಾರ್ಯಕ್ರಮ ಚೀನಾದಲ್ಲಿ ಜೂನ್ 11ಕ್ಕೆ ಆರಂಭವಾಗಿ, ಜೂನ್ 19 ರವರೆಗೆ ನಡೆಯಲಿದೆ. ನಿನ್ನೆ (ಜೂನ್ 17) ಕನ್ನಡ ಚಿತ್ರ 'ತಿಥಿ'ಯ ಸ್ಕ್ರೀನಿಂಗ್ ನಡೆದಿತ್ತು.
ಹಾಸ್ಯಭರಿತವಾದ ಸೆಂಚುರಿ ಗೌಡ್ರ 'ತಿಥಿ'ಯನ್ನೊಳಗೊಂಡ ಈ ಸಿನಿಮಾವನ್ನು ಇಡೀ ಕನ್ನಡ ಸಿನಿಪ್ರೇಕ್ಷಕರು ಮೆಚ್ಚಿ ಚಪ್ಪಾಳೆ ತಟ್ಟಿದ್ದರು.[ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]


Click it and Unblock the Notifications











