For Quick Alerts
ALLOW NOTIFICATIONS  
For Daily Alerts

  ಕನಸು ಹೊತ್ತು ಬಂದಿದ್ದ ಯುವತಿಗೆ 'ತಿಥಿ' ಈರೇಗೌಡ ಹೀಗೆಲ್ಲಾ ಕಿರುಕುಳ ಕೊಟ್ರಾ.?

  |

  ಸ್ಯಾಂಡಲ್ ವುಡ್ ನಲ್ಲಿ ಮೀಟೂ ಅಭಿಯಾನ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಶ್ರುತಿ ಹರಿಹರನ್ ಮತ್ತು ಸಂಜನಾ ನಂತರ ಈಗ ಯುವತಿಯೊಬ್ಬರು MeToo ಆರೋಪ ಮಾಡಿದ್ದಾರೆ.

  ಅರ್ಜುನ್ ಸರ್ಜಾ ನಂತರ ಈಗ 'ತಿಥಿ' ಖ್ಯಾತಿಯ ಈರೇಗೌಡ ವಿರುದ್ಧ #ಮೀಟೂ ಆರೋಪ ಕೇಳಿ ಬಂದಿದೆ. 'ತಿಥಿ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಈರೇಗೌಡ ಸದ್ಯ 'ಬಳೆಕೆಂಪ' ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ವೇಳೆ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಬೆಚ್ಚಿಬೀಳಿಸುವ ಸುದ್ದಿ ಬಹಿರಂಗವಾಗಿದೆ.

  'ತಿಥಿ' ಖ್ಯಾತಿಯ ಈರೇಗೌಡ ವಿರುದ್ಧ #ಮೀಟೂ ಆರೋಪ.!

  ಏಕ್ತಾ.ಎಂ ಎಂಬುವರ ಫೇಸ್ ಬುಕ್ ಅಕೌಂಟ್ ನಲ್ಲಿ ಈರೇಗೌಡ ವಿರುದ್ಧ ಆರೋಪಿಸಲಾಗಿದ್ದು, ವಿವರವಾಗಿ ನಡೆದ ಘಟನೆಯನ್ನ ಬಿಚ್ಚಿಟ್ಟಿದ್ದಾರೆ. ಇಲ್ಲಿ ಪ್ರಸ್ತಾಪಿಸಿರುವ ಸಂಗತಿಗಳನ್ನ ಓದಿದರೇ ಒಂದು ಕ್ಷಣ ಶಾಕ್ ಆಗ್ತೀರಾ. ಈರೇಗೌಡ ಅವರ ವ್ಯಕ್ತಿತ್ವ ಹೀಗಿದ್ಯಾ ಎಂಬ ಅನುಮಾನ ಉಂಟಾಗುತ್ತೆ. ಆದ್ರೆ, ಇದು ಆರೋಪ ಮಾತ್ರ. ಹಾಗಿದ್ರೆ, ಆ ಯುವತಿ ಹೇಳಿರುವ ಸಂಗತಿಯಲ್ಲಿ ಏನೆಲ್ಲಾ ಇದೆ.? ಮುಂದೆ ಓದಿ......

  ಎಲ್ಲಿಂದ ಆರಂಭವಾಯಿತು.?

  ನಾನು ಮಾಸ್ಟರ್ ಡಿಗ್ರಿ ಕೊನೆಯ ವರ್ಷ ಓದುತ್ತಿದ್ದಾಗ ಸಿನಿಮಾರಂಗದ ಬಗ್ಗೆ ನನ್ನಲ್ಲಿ ಆಸಕ್ತಿ ಇದೆ ಎಂಬ ಅರಿವು ಬಂತು. ಆಗಷ್ಟೇ 'ತಿಥಿ' ಚಿತ್ರ ಬಿಡುಗಡೆಯಾಗಿತ್ತು. ನೋಡಿದಾಗ ತುಂಬಾ ಇಷ್ಟಪಟ್ಟೆ. ನನಗೆ ಚಿತ್ರರಂಗಕ್ಕೆ ಬರಬೇಕಾದರೇ ನನಗೊಬ್ಬ ಮೆಂಟರ್ ಬೇಕಿತ್ತು. ಹಾಗಾಗಿ, ಈರೇಗೌಡ ಅವರನ್ನ ಫೇಸ್ ಬುಕ್ ಮೂಲಕ ಸಂಪರ್ಕ ಮಾಡಿದೆ. ನನಗೆ ನಂಬರ್ ಕೊಟ್ಟರು. ಬೆಂಗಳೂರಿಗೆ ಬಂದಾಗ ಭೇಟಿ ಮಾಡಿ ಎಂದರು.

  'ಕಾವೇರಿ' ವಿಚಾರದಲ್ಲಿ ಸುದ್ದಿಯಾಗಿದ್ದ ಸಿಂಬು ಮೇಲೆ MeToo ಬಾಂಬ್ ಸಿಡಿಸಿದ ನಟಿ.!

  ಮೊದಲ ಭೇಟಿ ಎಲ್ಲಿ.?

  ಶಿಕ್ಷಣ ಮುಗಿದಾಗ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಲು ಮುಂಬೈ ಅಥವಾ ಬೆಂಗಳೂರಿಗೆ ಹೋಗಬೇಕಾ ಎಂಬ ಗೊಂದಲದಲ್ಲಿದೆ. ಮುಂಬೈನಲ್ಲಿ ಮನೆ ಬಾಡಿಗೆ ಪಡೆಯುವುದು ಕಷ್ಟವೆನಿಸಿತು. ನಂತರ ಬೆಂಗಳೂರಿಗೆ ಬಂದೆ. ಸ್ನೇಹಿತರ ಮೂಲಕ ನೆಲೆಸಲು ಒಂದು ಸ್ಥಳವನ್ನ ಕೂಡ ಮಾಡಿಕೊಂಡೆ. ನಂತರ ಈರೇಗೌಡ ಅವರನ್ನ ಭೇಟಿ ಮಾಡಲು ತೀರ್ಮಾನಿಸಿದೆ. ಆಗ ನಾವು ಮೊದಲ ಭೇಟಿಯಗಿದ್ದು ಸ್ಯಾಂಕಿ ಟ್ಯಾಂಕಿ ಬಳಿ.

  ಗಾಂಜಾ ಸೇದುತ್ತಾ ಮಾಸ್ಟರ್ ಪ್ಲಾನ್ ಮಾಡಿದ #ಮೀಟೂ ನಟಿಯರು.! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹರ್ಷಿಕಾ.!

  ತುಂಬಾ ಇಷ್ಟ ಆಗ್ತಿದ್ದ ವ್ಯಕ್ತಿ

  ಮೊದಲ ಸಲ ಭೇಟಿಯಾದಾಗ 'ತಿಥಿ' ಚಿತ್ರದ ಪಾತ್ರಗಳು, ದೃಶ್ಯಗಳು, ಕಲಾವಿದರ ಆಯ್ಕೆ ಹೀಗೆ ಎಲ್ಲದರ ಬಗ್ಗೆ ಚರ್ಚೆ ಮಾಡಿದೆವು. ಇಂತಹ ಆತ್ಮೀಯ ವ್ಯಕ್ತಿ ಸಿಕ್ಕಿದ್ದಕ್ಕೆ ಖುಷಿಪಟ್ಟೆ. ನಂತರದ ಭೇಟಿಯಲ್ಲಿ ಈರೇಗೌಡ ತಮ್ಮ ಬಾಲ್ಯದ ಕಷ್ಟದ ದಿನಗಳನ್ನ, ಸುತ್ತುವರಿದ ಹಳ್ಳಿಯ ಕಥೆಗಳನ್ನ ಹೇಳುತ್ತಿದ್ದ. ಇಲ್ಲಿಂದ ನಾನು ಅವರನ್ನ ನಂಬಲು ಆರಂಭಿಸಿದೆ. ಅಲ್ಲಿಂದ ಸ್ಯಾಂಕಿ ಟ್ಯಾಂಕಿ ನಮ್ಮ ರೆಗ್ಯೂಲರ್ ಭೇಟಿಯ ಸ್ಥಳವಾಯಿತು.

  ಶ್ರುತಿ ಆರೋಪದ ಬಗ್ಗೆ ಅನುಮಾನ ಮೂಡಿಸುತ್ತಿದೆ ಈ 6 ಅಂಶಗಳು

  ಲೈಂಗಿಕವಾಗಿ ಆಕರ್ಷಿತನಾದನಂತೆ

  ಹೀಗೆ ಒಂದು ದಿನ ನನ್ನ ಬಗ್ಗೆ ಲೈಂಗಿಕವಾಗಿ ಆಕರ್ಷಿತನಾಗಿದ್ದೇನೆ ಎಂದು ಹೇಳಿದ. ಆ ಕ್ಷಣ ನಾನು ಹೇಗೋ ನಿಭಾಯಿಸಿ ವಾಪಸ್ ಬಂದೆ. ಮತ್ತೆ ಈರೇಗೌಡ ಅವರನ್ನ ಭೇಟಿ ಮಾಡಬಾರದು ಅಂದುಕೊಂಡೆ. ಈ ಬಗ್ಗೆ ನನ್ನ ಸ್ನೇಹಿತರ ಬಳಿಯೂ ಮಾತನಾಡಿದೆ. ಯಾರೋ ಏನೋ ತೊಂದರೆಕೊಟ್ಟರು ಅಂತ ವಾಪಸ್ ಓಡಿಹೋಗಬಾರದು ಎಂದು ಧೈರ್ಯ ತುಂಬಿದರು. ನಂತರ ಈರೇಗೌಡ ಅವರನ್ನ ಭೇಟಿ ಮಾಡಿ ಈ ಬಗ್ಗೆ ಮಾತನಾಡಿ ಬಗೆಹರಿಸಿಕೊಳ್ಳೋಣ ಅಂದುಕೊಂಡೆ.

  ಒಮ್ಮೆ ಸಿನಿಮಾ ಕೆಲಸಕ್ಕಾಗಿ ಹೋದಾಗ...

  ಈ ಮಧ್ಯೆ ಈರೇಗೌಡ ಅವರ ನನಗೆ ಫೋನ್ ಮಾಡಿ 'ಬಳೆಕೆಂಪ' ಚಿತ್ರದ ಸೌಂಡ್ ರೆಕಾರ್ಡಿಂಗ್ ಗಾಗಿ ಬ್ಯಾಡರಹಳ್ಳಿಗೆ ಹೋಗುತ್ತಿದ್ದೇವೆ. ನೀನೂ ಕೂಡ ಬರಬಹುದು. ಅಲ್ಲಿಯೆ ಸ್ನೇಹಿತರ ಮನೆಯಲ್ಲಿ ಉಳಿದುಕೊಳ್ಳುವ ಪ್ಲಾನ್ ಆಗಿದೆ ಎಂದರು. ನಾನು ಆತಂಕದಿಂದಲೇ ಹೋಗಲು ನಿರ್ಧರಿಸಿದೆ. ಆದ್ರೆ, ಅಂದು ರಾತ್ರಿ ಹೋಗದೇ, ಬೆಳಿಗ್ಗೆ ಟ್ರೈನ್ ನಲ್ಲಿ ಹೋದೆ. ಏನಾದರೂ ಸಮಸ್ಯೆಯಾದರೇ ಟ್ರೈನ್ ಹಿಡಿದು ಮಗತ್ತೆ ವಾಪಸ್ ಬಂದುಬಿಡೋಣ ಅಂತ ಧೈರ್ಯ ಮಾಡಿ ಹೋದೆ. ಆದ್ರೆ, ಅಲ್ಲಿ ಯಾವುದೇ ಸಮಸ್ಯೆಗಳು ಆಗಲಿಲ್ಲ. ನನ್ನ ಕೆಲಸದಲ್ಲಿ ನಾನು ತೊಡಗಿಕೊಂಡೆ.

  'ಗಂಡ-ಹೆಂಡತಿ' ಚಿತ್ರದ ಕೆಟ್ಟ ಅನುಭವ ಹಂಚಿಕೊಂಡ ಸಂಜನಾ: ನಿರ್ದೇಶಕರ ಮೇಲೆ ಗಂಭೀರ ಆರೋಪ

  ಆದ್ರೆ, ಅದೊಂದು ದಿನ....

  ನಂತರ ಎರಡು ದಿನ ಸಿನಿಮಾ ಕೆಲಸಗಳು ನಡೆದವು. ಎಲ್ಲವೂ ಚೆನ್ನಾಗಿ ಆಯಿತು. ಈ ನಡುವೆ ನನ್ನೊಂದು ಪ್ರಾಜೆಕ್ಟ್ ವರ್ಕ್ ಇದೆ. ಸಹಾಯ ಮಾಡು ಎಂದು ಕೇಳಿದರು. ಸರಿ ಪ್ರಾಜೆಕ್ಟ್ ವರ್ಕ್ ಅಲ್ಲವಾ ಎಂದು ಒಪ್ಪಿಕೊಂಡೆ. ಈ ಅಪ್ಲಿಕೇಶನ್ ಕೆಲಸಕ್ಕಾಗಿ ಸ್ನೇಹಿತರ ಮನೆಗೆ ಹೋಗೋಣ. ಅಲ್ಲಿ ಅವನು ಮತ್ತು ಅವರ ಗೆಳತಿ ಇರ್ತಾರೆ. ಅಲ್ಲೇ ಊಟ ಮಾಡಿ ಬರೋಣ ಅಂದರು.ಸರಿ ಅಂತ ಹೋದ್ವಿ. ಅಲ್ಲಿ ಕಾಫಿ ಮಾಡಿದ ಕುಡಿದೆ. ಈರೇಗೌಡ ಮತ್ತು ಸ್ನೇಹಿತ ಇಬ್ಬರು ಟೇಬಲ್ ಟೆನ್ನಿಸ್ ಆಡುತ್ತಿದ್ದರು. ನನಗೆ ಸುತ್ತಾಡಿ ಆಯಾಸವಾಗಿದ್ದರಿಂದ ಮಲಗಿಕೊಂಡೆ. ಆದ್ರೆ, ಸ್ವಲ್ಪ ಸಮಯದ ನಂತರ ಈರೇಗೌಡ ನನ್ನ ಪಕ್ಕದಲ್ಲಿ ಬಂದು ಮಲಗಿದ. ಅಸಭ್ಯವಾಗಿ ವರ್ತಿಸಲು ಶುರುಮಾಡಿದ. ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ. ನಾನು ಇಂದು ಮುಟ್ಟಾಗಿದ್ದೀನಿ ಎಂದೆ. ಆದ್ರೂ ಆತ ಸುಮ್ಮನಾಗಲಿಲ್ಲ. ನಾನು ಎಷ್ಟೇ ವಿರೋಧ ಮಾಡಿದರು, ನನ್ನ ಪ್ರಯತ್ನ ವಿಫಲವಾಯಿತು.

  ನನ್ನ ಮಗ ಇಲ್ಲದಿದ್ದಾಗ ಶ್ರುತಿ ಮನೆಗೆ ಬಂದಿದ್ದೇಕೆ.? ಸರ್ಜಾ ತಾಯಿ ಕೆಂಡಾಮಂಡಲ

  ಅವನಿಗೆ ಪಶ್ಚಾತ್ತಾಪವೇ ಆಗಲಿಲ್ಲ

  ನಂತರ ಏನೂ ಆಗದೇ ಇರೋ ರೀತಿ ನಡೆದುಕೊಂಡ. ನಾನು ಉಳಿದುಕೊಂಡಿದ್ದ ಸ್ಥಳಕ್ಕೆ ಅವನೇ ಡ್ರಾಪ್ ಮಾಡಿದ. ಆಮೇಲೆ ನಾನು ಬೆಂಗಳೂರಿಗೆ ವಾಪಸ್ ಆದೆ. ನಾನು ಇದ್ದ ರೂಂ ಬಿಟ್ಟು ಬೇರೆ ಕಡೆಗೂ ಶಿಪ್ಟ್ ಆದೆ. ಈ ಬಗ್ಗೆ ತುಂಬಾ ಬೇಸರದಿಂದ ಕೊರಗಿದ್ದೇನೆ. ಈ ಬಗ್ಗೆ ಈರೇಗೌಡ ನನಗೆ ಹಲವು ಭಾರಿ ಕ್ಷಮೆ ಕೇಳಿದ್ದಾರೆ. ಆದ್ರೆ, ಆತನನ್ನು ನೋಡಲು, ಮಾತನಾಡಲು ನನಗೆ ಇಷ್ಟವಾಗುತ್ತಿರಲಿಲ್ಲ. ಈ ಕೆಲಸವೆಲ್ಲ ಬೇಡ ಎಂದು ನಿರ್ಧರಿಸಿ, ಅಲ್ಲಿಂದ ಹೊರಟೆ. ಈ ಘಟನೆ ಬಗ್ಗೆ ಎಷ್ಟೋ ಸಲ ಹೇಳಬೇಕು ಎಂದುಕೊಂಡಿದ್ದೆ, ಆದ್ರೆ ಸಾಧ್ಯವಾಗಲಿಲ್ಲ. ಈಗ ಮೀಟೂ ಅಭಿಯಾನದಲ್ಲಿ ಇದನ್ನ ಹೇಳುತ್ತಿದ್ದೇನೆ'' ಎಂದು ಆ ಯವತಿ ಹೇಳಿಕೊಂಡಿದ್ದಾರೆ.

  English summary
  Kannada filmmaker Ere Gowda has been accused of sexual misconduct by an anonymous individual on social media. One of his former colleagues has posted a detailed account of the misconduct in a post on Facebook.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more