»   » ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಹೋದರ ದಿನಕರ್ ಸವಾಲ್!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಸಹೋದರ ದಿನಕರ್ ಸವಾಲ್!

Posted By:
Subscribe to Filmibeat Kannada

ತೂಗುದೀಪ ಶ್ರೀನಿವಾಸ್ ಕುಟುಂಬದ ಕುಡಿಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ದಿನಕರ್ ತೂಗುದೀಪ ಅವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ತೆರೆಯ ಮೇಲೆ ಗ್ರ್ಯಾಂಡ್ ಆಗಿ ಮಿಂಚಲಿದ್ದಾರೆ.

ಹೌದು ನಿರ್ದೇಶಕ ಚಿಂತನ್ ಆಕ್ಷನ್-ಕಟ್ ಹೇಳುತ್ತಿರುವ ದರ್ಶನ್ ಅವರ ಮುಂಬರುವ ಹೊಸ ಚಿತ್ರ 'ಚಕ್ರವರ್ತಿ'ಯಲ್ಲಿ ನಟ ದರ್ಶನ್ ಮತ್ತು ದಿನಕರ್ ತೂಗುದೀಪ ಅವರು ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ.[ದರ್ಶನ್ 'ಚಕ್ರವರ್ತಿ' ನಿರ್ಮಾಪಕ ಹಠಾತ್ ಬದಲಾವಣೆ.! ಕಾರಣ ಇದೇನಾ?]

ಇಲ್ಲಿಯವರೆಗೆ ಹಲವಾರು ಚಿತ್ರದ ನಿರ್ಮಾಣದ ಜೊತೆಗೆ ದರ್ಶನ್ ಅವರ 'ನವಗ್ರಹ', 'ಸಾರಥಿ' ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ನಿರ್ದೇಶನ ಮಾಡಿರುವ ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ್ ಅವರು ನಟನಾ ಕ್ಷೇತ್ರಕ್ಕೆ ಬರುತ್ತಿರೋದು ಇದೇ ಮೊದಲು.[ಮತ್ತೆ ತೆರೆಯ ಮೇಲೆ ಒಂದಾಗ್ತಾರಾ ಕುಚಿಕು ಗೆಳೆಯರು.?]

ನಿರ್ದೇಶಕ ಹಾಗೂ ನಿರ್ಮಾಪಕನಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ದಿನಕರ್ ತೂಗುದೀಪ್ ಅವರು ಇದೀಗ 'ಚಕ್ರವರ್ತಿ' ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಚಿತ್ರದಲ್ಲಿ ದಿನಕರ್ ಅವರ ಪಾತ್ರ ಏನು? ಇದಕ್ಕೆ ದರ್ಶನ್ ಏನಂತಾರೆ? ಅನ್ನೋದರ ಸಂಪೂರ್ಣ ಮಾಹಿತಿ ಕೆಳಗಿನ ಸ್ಲೈಡುಗಳಲ್ಲಿ...

ಖಳನಾಯಕನಾದ ದಿನಕರ್ ತೂಗುದೀಪ್

'ಚಕ್ರವರ್ತಿ' ಚಿತ್ರದಲ್ಲಿ ನಿರ್ಮಾಪಕ ಕಮ್ ನಿರ್ದೇಶಕ ದಿನಕರ್ ತೂಗುದೀಪ ಅವರು ಖಳನಾಯಕ ಪಾತ್ರ ಮಾಡಲಿದ್ದು, ಇದೀಗ ಸಹೋದರ ನಟ ದರ್ಶನ್ ಅವರಿಗೆ ವಿಲನ್ ಆಗಿ ಕಾಡಲಿದ್ದಾರೆ.

ದರ್ಶನ್ ಏನಂತಾರೆ?

'ನನ್ನ ತಮ್ಮನ ಜೊತೆ ಒಂದೇ ಸೆಟ್ ನಲ್ಲಿ ಕೆಲಸ ಮಾಡೋದಕ್ಕೆ ನನಗೆ ಖುಷಿಯ ಜೊತೆಗೆ ತುಂಬಾ ಹೆಮ್ಮೆ ಆಗುತ್ತಿದೆ' ಎನ್ನುತ್ತಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.

ಆದಿತ್ಯ-ಸೃಜನ್ ಗೂ ಪಾಲಿದೆ

ಅಂದಹಾಗೆ ಈ ಚಿತ್ರದಲ್ಲಿ ದರ್ಶನ್ ಅವರ ಕುಚಿಕು ಗೆಳೆಯರಾದ ನಟ ಆದಿತ್ಯ ಮತ್ತು ನಟ ಸೃಜನ್ ಲೋಕೇಶ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, 'ಚಕ್ರವರ್ತಿ' ಚಿತ್ರದಲ್ಲಿ ಇವರ ಪಾಲು ಅಧಿಕವಾಗಿದೆ.

ನಿರ್ದೇಶಕರ ಉವಾಚ

'ಚಿತ್ರದಲ್ಲಿ ದಿನಕರ್ ಅವರು ಮಾತ್ರವಲ್ಲದೇ ಅವರ ಜೊತೆ ಇನ್ನಿಬ್ಬರು ವಿಲನ್ ಗಳು ಕಾಣಿಸಿಕೊಳ್ಳುತ್ತಿದ್ದಾರೆ. 'ಆ' ಇಬ್ಬರು ಯಾರು ಅನ್ನೋದು ಇನ್ನೂ ಅಂತಿಮವಾಗಿಲ್ಲ' ಎನ್ನುತ್ತಾರೆ ಚೊಚ್ಚಲ ನಿರ್ದೇಶಕ ಚಿಂತನ್ ಅವರು.

ಅಂಜಲಿ ಫಿಕ್ಸ್

'ಚಕ್ರವರ್ತಿ' ಚಿತ್ರಕ್ಕೆ ನಾಯಕಿ ನಟಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಅಂಜಲಿ ಅವರು ಫಿಕ್ಸ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ 'ರಣವಿಕ್ರಮ' ಚಿತ್ರದ ನಂತರ 'ಚಕ್ರವರ್ತಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮೂರನೇ ಇನ್ನಿಂಗ್ಸ್ ಆರಂಭಿಸಲು ಅಂಜಲಿ ರೆಡಿ ಆಗಿದ್ದಾರೆ.[ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ನಾಯಕಿ ಇವರೇ]

ಒಂದಾದ ದರ್ಶನ್ ಆದಿತ್ಯ

'ಸ್ನೇಹಾನಾ ಪ್ರೀತಿನಾ' ಚಿತ್ರದ ನಂತರ ಮತ್ತೆ ನಟ ದರ್ಶನ್ ಮತ್ತು ಆದಿತ್ಯ ಅವರು 'ಚಕ್ರವರ್ತಿ' ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ಸೃಜನ್ ಲೋಕೇಶ್ ಮತ್ತು ದರ್ಶನ್ ಅವರು ಈ ಹಿಂದೆ 'ನವಗ್ರಹ' ಚಿತ್ರದಲ್ಲಿ ಮಿಂಚಿದ್ದರು. ತದನಂತರ 'ಜಗ್ಗುದಾದಾ' ಚಿತ್ರದಲ್ಲಿ ಒಂದಾಗಿದ್ದರು. ಸದ್ಯದಲ್ಲೇ 'ಜಗ್ಗುದಾದಾ' ರಿಲೀಸ್ ಅಗಲಿದೆ. ನಟ ಆದಿತ್ಯ ಮತ್ತು ಸೃಜನ್ ಲೋಕೇಶ್ ಅವರು 'ಎದೆಗಾರಿಕೆ' ಚಿತ್ರದಲ್ಲಿ ಮುಖಾ-ಮುಖಿಯಾಗಿದ್ದರು.

ಬದಲಾದ ನಿರ್ಮಾಪಕರು

ನಿರ್ಮಾಪಕ ಕೆ.ವಿ ಸತ್ಯಪ್ರಕಾಶ್ ಅವರ ಕನಸಿನ ಕೂಸಾಗಿದ್ದ 'ಚಕ್ರವರ್ತಿ' ಇದೀಗ ಬೇರೆಯವರ ಪಾಲಾಗಿದೆ. ಕೆಲವು ಕಾರಣಗಳಿಂದ ಇದೀಗ ಚಿತ್ರಕ್ಕೆ 'ಸ್ನೇಹನಾ ಪ್ರೀತಿನಾ' ಖ್ಯಾತಿಯ ನಿರ್ಮಾಪಕ ಅಣಜಿ ನಾಗರಾಜ್ ಅವರು ಬಂಡವಾಳ ಹೂಡುತ್ತಿದ್ದಾರೆ.

English summary
Kannada Actor Darshan Thoogudeepa and his younger brother Producer Dinakar Thoogudeepa will be seen onscreen for the first time in Kannada movie 'Chakravarthy'. And what makes their combo to create a buzz is that Dinakar plays the antagonist. The movie is directed by Chintan.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada