Just In
- 38 min ago
200 ಕೋಟಿ ಕ್ಲಬ್ ಸೇರಿದ 'ಮಾಸ್ಟರ್': ದಾಖಲೆ ಬರೆದ ದಳಪತಿ ವಿಜಯ್
- 48 min ago
ಕೊರೊನಾ ನಡುವೆಯೂ 100 ಕೆಜಿ ಕೇಕ್ ಕತ್ತರಿಸಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸಿದ ನಿಖಿಲ್
- 1 hr ago
ಟೀಸರ್ ಬಿಡುಗಡೆ: ನಿಖಿಲ್ ಹುಟ್ಟುಹಬ್ಬಕ್ಕೆ ಬಂದ 'ರೈಡರ್'
- 1 hr ago
ರಿಕ್ಕಿ ಚಿತ್ರಕ್ಕೆ 5 ವರ್ಷ: ಚೊಚ್ಚಲ ಸಿನಿಮಾಗೆ ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದ
Don't Miss!
- News
ದಕ್ಷಿಣ ಭಾರತದಲ್ಲೇ ವಿಶಿಷ್ಟ ಮೈಲಿಗಲ್ಲು ಸಾಧಿಸಿದ ಕೆಂಪೇಗೌಡ ಏರ್ಪೋರ್ಟ್
- Sports
ಏಕದಿನ ಪದಾರ್ಪಣಾ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಅಪ್ಘಾನಿಸ್ತಾನ್ ಕ್ರಿಕೆಟಿಗ
- Lifestyle
ಬೇಬಿಮೂನ್ ಎಂದರೇನು? ಇದು ಏಕೆ ಒಳ್ಳೆಯದು?
- Automobiles
ಸೀಟ್ ಬೆಲ್ಟ್ ಧರಿಸುವುದರ ಮಹತ್ವ ವಿವರಿಸಿದ ಪೊಲೀಸ್ ಅಧಿಕಾರಿ
- Finance
ಗಿರಗಿಟ್ಲೆಯಾದ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್; $ 30 ಸಾವಿರದ ಕೆಳಗೆ ವಹಿವಾಟು
- Education
Karnataka State Police Recruitment 2021: 545 ಸಬ್-ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರಜ್ವಲ್ ದೇವರಾಜ್ 'ಅಬ್ಬರ'ಕ್ಕೆ ಮೂವರು ನಾಯಕಿಯರು
ಡೈನಾಮಿಕ್ ಪ್ರಿನ್ಸ್ ದೇವರಾಜ್ ನಟಿಸುತ್ತಿರುವ 'ಅಬ್ಬರ' ಸಿನಿಮಾ ಚಿತ್ರಕ್ಕೆ ಮೂವರು ನಾಯಕಿಯರು ಎಂಬ ವಿಚಾರ ಹೊರಬಿದ್ದಿದೆ. ಇತ್ತೀಚಿಗಷ್ಟೆ ಅಬ್ಬರ ಸಿನಿಮಾದ ಟೈಟಲ್ ಅನಾವರಣಗೊಂಡಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದ ಟೈಟಲ್ ಬಿಡುಗಡೆ ಮಾಡಿದ್ದರು.
ಇದೀಗ, ಪ್ರಜ್ವಲ್ ಗೆ ಜೋಡಿಯಾಗಿ ಮೂವರು ನಟಿಮಣಿಯರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಇಂಟರೆಸ್ಟಿಂಗ್ ವಿಷಯ ತಿಳಿದು ಬಂದಿದೆ.
ಸ್ಯಾಂಡಲ್ವುಡ್ನಲ್ಲಿ 'ಅಬ್ಬರ' ಶುರು ಮಾಡಿದ ಡೈನಾಮಿಕ್ ಪ್ರಿನ್ಸ್
ನಟಿ ಲೇಖ ಚಂದ್ರ, ನಿಮಿಕಾ ರತ್ನಾಕರ್ ಹಾಗೂ ರಾಜಶ್ರೀ ಪೊನ್ನಪ್ಪ ಈ ಚಿತ್ರದಲ್ಲಿ ಪ್ರಮುಖ ನಾಯಕಿಯರಾಗಿ ನಟಿಸುತ್ತಿದ್ದಾರೆ.
ಈ ಚಿತ್ರವನ್ನು ಕೆ ರಾಮ್ ನಾರಾಯಣ್ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಅಂದ್ಹಾಗೆ, ಈ ಸಿನಿಮಾದಲ್ಲಿ ಪ್ರಜ್ವಲ್ ಮೂರು ವಿಭಿನ್ನ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ನಿರ್ದೇಶಕ ರಾಮ್ ನಾರಾಯಣ್ ಕುರಿತು ಹೇಳಬೇಕಾದರೆ, ಪ್ರಭಾಕರ್ ಮಗ ವಿನೋದ್ ಪ್ರಭಾಕರ್ ಜೊತೆ 'ಟೈಸನ್' ಮತ್ತು 'ಕ್ರ್ಯಾಕ್' ಎಂಬ ಎರಡು ಚಿತ್ರ ಮಾಡಿದ್ದಾರೆ. ಚಿರಂಜೀವಿ ಸರ್ಜಾ ನಟನೆಯ ಕೊನೆ ಸಿನಿಮಾ 'ರಾಜಮಾರ್ತಂಡ' ಚಿತ್ರಕ್ಕೂ ಇವರೇ ಆಕ್ಷನ್ ಕಟ್ ಹೇಳಿದ್ದಾರೆ.
ಪ್ರಜ್ವಲ್ ದೇವರಾಜ್ ಸದ್ಯ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾ ಮಾಡ್ತಿದ್ದು, ಅದರ ಜೊತೆಗೆ 'ಅರ್ಜುನ್ ಗೌಡ' ಹಾಗೂ 'ವೀರಂ' ಎಂಬ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ, ಇದರ ಜೊತೆಗೆ ಅಬ್ಬರ ಆರಂಭವಾಗಿದೆ.