47ನೇ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕನ್ನಡದ 3 ಚಿತ್ರಗಳು
ಗೋವಾದ ಪಣಜಿಯಲ್ಲಿ ಈ ಬಾರಿ ನಡೆಯಲಿರುವ 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭಕ್ಕೆ ಮೂರು ಕನ್ನಡ ಚಿತ್ರಗಳು ಆಯ್ಕೆಯಾಗಿವೆ. 'ಯು-ಟರ್ನ್', 'ಅಲ್ಲಮ' ಮತ್ತು 'ಹರಿಕಥಾ ಪ್ರಸಂಗ' ಮೂರು ಚಿತ್ರಗಳು ಪನೋರಮಾ ವಿಭಾಗದಲ್ಲಿ ಪ್ರದರ್ಶನವಾಗಲಿದೆ.
ಸುಂದರ ತಾಣ ಗೋವಾದಲ್ಲಿ ಅದ್ಧೂರಿಯಾಗಿ ನಡೆಯಲಿರುವ, 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಸಿನಿಮೋತ್ಸವಕ್ಕೆ ಕನ್ನಡದ ಮೂರು ಸಿನಿಮಾಗಳು ಆಯ್ಕೆಯಾಗಿವೆ.
'ಲೂಸಿಯಾ' ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರ 'ಯು-ಟರ್ನ್', ನಿರ್ದೇಶಕ ಟಿ.ಎಸ್ ನಾಗಾಭರಣ ಅವರ ಇನ್ನೂ ಬಿಡುಗಡೆ ಆಗದ 'ಅಲ್ಲಮ' ಮತ್ತು ಅನನ್ಯ ಕಾಸರವಳ್ಳಿ ನಿರ್ದೇಶನದ 'ಹರಿಕಥಾ ಪ್ರಸಂಗ' ಸಿನಿಮಾ, 47ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.[ಪನೋರಮಾ ವಿವಾದ : ಸಿಡಿದೆದ್ದ ನಿರ್ದೇಶಕ ಬಿ.ಎಸ್.ಲಿಂಗದೇವರು!]

ನವೆಂಬರ್ 20 ರಿಂದ 28ರವರೆಗೆ, ಗೋವಾದ ಪಣಜಿಯಲ್ಲಿ ನಡೆಯಲಿರುವ 47ನೇ ಚಲನಚಿತ್ರೋತ್ಸವದಲ್ಲಿ ಭಾರತದಿಂದ ಆಯ್ಕೆಯಾದ ಸಿನಿಮಾಗಳ ವಿಭಾಗಕ್ಕೆ ಪನೋರಮಾ ಎಂದು ಕರೆಯಲಾಗುತ್ತದೆ.
ಬೇರೆ-ಬೇರೆ ಭಾಷೆಗಳಿಂದ ಸುಮಾರು 22 ಸಿನಿಮಾಗಳು, 47ನೇ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಅದರಲ್ಲಿ ಮೂರು ಸಿನಿಮಾಗಳು ಕನ್ನಡ ಭಾಷೆಯದ್ದು, ಅನ್ನೋದು ಮತ್ತೊಂದು ವಿಶೇಷ.[ಚಿತ್ರಗಳು: 'ಅಲ್ಲಮ'ನಿಗೆ ಪರಕಾಯ ಪ್ರವೇಶ ಮಾಡಿದ ಧನಂಜಯ್]

ಇನ್ನು 'ಯು-ಟರ್ನ್' ಈಗಾಗಲೇ ಬಿಡುಗಡೆ ಆಗಿದ್ದು, 'ಅಲ್ಲಮ' ಮತ್ತು 'ಹರಿಕಥಾ ಪ್ರಸಂಗ' ಇನ್ನಷ್ಟೇ ತೆರೆ ಕಾಣಬೇಕಿದೆ. ಅಂತೂ 'ಅಲ್ಲಮ' ಮತ್ತು 'ಹರಿಕಥಾ ಪ್ರಸಂಗ' ನೇರವಾಗಿ ಗೋವಾದಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ.[ಮಾಸ್ಕೋ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡಿಗರ 'ಬೊಂಬೆಯಾಟ']

ಈ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು 'ಯು-ಟರ್ನ್' ನಿರ್ದೇಶಕ ಪವನ್ ಕುಮಾರ್ ಮತ್ತು ಕಲಾವಿದರು ಗೋವಾಗೆ ತೆರಳಲಿದ್ದಾರೆ. 'ಅಲ್ಲಮ' ಚಿತ್ರದ ನಿರ್ದೇಶಕ ಟಿ ಎಸ್ ನಾಗಾಭರಣ, ನಟ ಧನಂಜಯ್ ಮತ್ತು ನಟಿ ಮೇಘನಾ ರಾಜ್ ಕೂಡ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.


Click it and Unblock the Notifications











