»   » 50ರ ಸಂಭ್ರಮದಲ್ಲಿ 'ಒರಿಯನ್ ತೂಂಡ ಒರಿಯಾಗಾಪುಜಿ'

50ರ ಸಂಭ್ರಮದಲ್ಲಿ 'ಒರಿಯನ್ ತೂಂಡ ಒರಿಯಾಗಾಪುಜಿ'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಂತೆಯೇ, ಇತ್ತೀಚೆಗೆ ತುಳು ಚಿತ್ರರಂಗವೂ ಸಖತ್ ಸೌಂಡ್ ಮಾಡುತ್ತಿದೆ. ಅದಕ್ಕೆ ಒಂದೊಳ್ಳೆ ಉದಾಹರಣೆ ಅಂದರೆ ಈಗಾಗಲೇ ತೆರೆ ಕಂಡು ಶತದಿನೋತ್ಸವ ಆಚರಿಸಿಕೊಂಡಿರುವ ಕೆಲ ಚಿತ್ರಗಳು.

ಸುಹಾನ್ ಪ್ರಸಾದ್ ನಿರ್ದೇಶನದ 'ರಂಗ್', ವೀರೇಂದ್ರ ಶೆಟ್ಟಿ ನಿರ್ದೇಶನದ 'ಚಾಲಿಪೋಲಿಲು' ಹಾಗೂ ಸೂರಜ್ ಶೆಟ್ಟಿ ನಿರ್ದೇಶನದ ಎಕ್ಕ-ಸಕ ಸೇರಿದಂತೆ ಹಲವು ತುಳು ಚಿತ್ರಗಳು ಹಂಡ್ರೆಡ್ ಡೇಸ್ ಪೂರೈಸಿವೆ. [ಚಾಲಿಪೋಲಿಲು 200; ಸಚಿವ ಖಾದರ್ ಜೊತೆ ಸಂಭ್ರಮ]

ಇದೀಗ ಅದೇ ಸಾಲಿಗೆ ಹೊಸ ಸೇರ್ಪಡೆ ಹೆಚ್.ಎಸ್ ರಾಜಶೇಖರ್ ನಿರ್ದೇಶನದ 'ಒರಿಯನ್ ತೂಂಡ ಒರಿಯಾಗಾಪುಜಿ'. ಅರ್ಜುನ್ ಕಾಪಿಕಾಡ್, ಪ್ರಜ್ಜು ಪೂವಯ್ಯ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಇದೀಗ ಅರ್ಧ ಶತಕದ ಸಂಭ್ರಮದಲ್ಲಿದೆ. [ತುಳು ಚಿತ್ರ ವಿಮರ್ಶೆ 'ಒರಿಯನ್ ತೂಂಡ ಒರಿಯಗಾಪುಜಿ']

ಇಂದು ಮಂಗಳೂರಿನ ಸೆಂಟ್ರಲ್ ಚಿತ್ರಮಂದಿರದಲ್ಲಿ 50ನೇ ದಿನದ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಈ ದಿನ ಇದೇ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಉಚಿತ ಸಿಡಿ ಕೂಡ ಲಭ್ಯವಾಗಲಿದೆ. ಮುಂದೆ ಓದಿ....

ಕನ್ನಡ ನಟ-ನಟಿಯರ ದಂಡು

'ಒರಿಯನ್ ತೂಂಡ ಒರಿಯಾಗಾಪುಜಿ' ರಿಲೀಸ್ ಆದ ಫಸ್ಟ್ ಡೇ ಫಸ್ಟ್ ಶೋ ನ ಕನ್ನಡ ನಟಿ ರೇಖಾದಾಸ್, ಮಿತ್ರ, ಪ್ರಜ್ಜೂ ಪೂವಯ್ಯ, ಭವ್ಯ ಮುಂತಾದ ಕಲಾವಿದರು ಮಂಗಳೂರಿನಲ್ಲಿ ಪ್ರೇಕ್ಷಕರ ಜೊತೆ ಕುಳಿತು ಚಿತ್ರ ವೀಕ್ಷಿಸಿದರು.

800 ಭರ್ಜರಿ ಪ್ರದರ್ಶನ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅನೇಕ ಚಿತ್ರಮಂದಿರಗಳಲ್ಲಿ ಒಟ್ಟು 800 ಶೋಗಳನ್ನ ನೀಡಿ ನೂರು ದಿನಗಳತ್ತ 'ಒರಿಯನ್ ತೂಂಡ ಒರಿಯಾಗಾಪುಜಿ' ಮುನ್ನುಗ್ಗುತ್ತಿದೆ. ಪುತ್ತೂರು, ಸುಳ್ಯ, ಬಿಸಿರೋಡ್, ಬೆಂಗಳೂರು, ಮುಂಬಯಿ, ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಸದ್ಯದಲ್ಲೇ ಈ ಚಿತ್ರ ಬಿಡುಗಡೆ ಆಗಲಿದೆ.

ಚಿತ್ರದ ಕಥೆ-ವ್ಯಥೆ

ಪ್ರಸ್ತುತ ಸಮಾಜದಲ್ಲಿ ನಡೆಯುವ ವ್ಯಾವಹಾರಿಕ ದ್ವೇಷ, ಅಸೂಯೆ. ಅವುಗಳಿಗಾಗಿ ನಡೆಯುವ ಸಮರ ಈ ಚಿತ್ರದ ಕಥಾವಸ್ತು. ಚಿತ್ರದಲ್ಲಿ ಪಂಚಭಾಷೆಗಳನ್ನು ಅಳವಡಿಸಿಕೊಂಡಿರುವುದು ಮತ್ತೊಂದು ಹೈಲೈಟ್. ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಹಾಗೂ ಕಾಮಿಡಿ ಕಲರವ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡಿದೆ.

ಸಂಗೀತ ಸಂಯೋಜನೆ

ಚಿತ್ರಕ್ಕೆ ವಿ. ಮನೋಹರ್ ಅವರ ಸಂಗೀತ ನಿರ್ದೇಶನ ಹಾಗೂ ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯರ್, ಅನುರಾಧ ಭಟ್, ಸುಮಧುರ ಕಂಠ ಸಿರಿಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿವೆ.

English summary
Thulu movie 'Oriyan Thoonda Oriyagapuji' has created a new wave in Thulu Film Industry by completing 50 Days in Theater. The film features Thulu Actor Arjun Kapikad, Praju Poovaiah and others. The movie is directed by H.S Rajshekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada