»   » ಆಗಸ್ಟ್ ನಲ್ಲಿ ತೆರೆಯ ಮೇಲೆ 'ಸೂಪರ್ ಮರ್ಮಯೆ'

ಆಗಸ್ಟ್ ನಲ್ಲಿ ತೆರೆಯ ಮೇಲೆ 'ಸೂಪರ್ ಮರ್ಮಯೆ'

Posted By:
Subscribe to Filmibeat Kannada

44 ವರ್ಷಗಳ ಇತಿಹಾಸವಿರುವ ತುಳು ಚಿತ್ರರಂಗಕ್ಕೆ ಇದೀಗ ಸಂಕ್ರಮಣ ಕಾಲ. ಸದ್ಯಕ್ಕೆ ತುಳು ಇಂಡಸ್ಟ್ರಿಯಲ್ಲಿ ಬರೋಬ್ಬರಿ 56 ಸಿನೆಮಾಗಳು ತೆರೆ ಕಂಡಿವೆ. 2014 ರಲ್ಲಿ 7 ಚಿತ್ರಗಳು ತೆರೆ ಕಂಡು 3 ಚಿತ್ರಗಳು ಶತದಿನೋತ್ಸವ ಆಚರಿಸಿದೆ. 2015 ರಲ್ಲಿ ತೆರೆ ಕಂಡ 4 ಚಿತ್ರಗಳು ಅರ್ಧ ಶತಕ ಬಾರಿಸಿದ್ದು, ಕರಾವಳಿಯ ತುಳುನಾಡ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.

ಇದೀಗ ತುಳುವರನ್ನು ನಕ್ಕು ನಗಿಸಲು 'ರಾಮ್ ಶೆಟ್ಟಿ' ಆಕ್ಷನ್-ಕಟ್ ಹೇಳಿರುವ ಮತ್ತೊಂದು ಕಾಮಿಡಿ ಚಿತ್ರ 'ಸೂಪರ್ ಮರ್ಮಯೆ' ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಗಳಿಸಿದ್ದು, ಆಗಸ್ಟ್ 2ನೇ ವಾರದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ.[ಅದ್ಭುತ ದಾಖಲೆ ಬರೆದ ತುಳು ಸಿನೆಮಾ 'ಚಾಲಿಪೋಲಿಲು']

Thulu movie 'Super Marmaye' all set to release in August

ಸುವರ್ಣ ವಾಹಿನಿ 'ಪಂಚರಂಗಿ ಪೊಂ ಪೊಂ' ಖ್ಯಾತಿಯ ಮೀನನಾಥ ಅಲಿಯಾಸ್ ರಾಘವೇಂದ್ರ ರೈ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, 'ಚಾಲಿಪೋಲಿಲು' ಚಿತ್ರದ ನಾಯಕಿ ದಿವ್ಯಶ್ರೀ 'ಸೂಪರ್ ಮರ್ಮಯೆ'ಯಲ್ಲಿ ಮೀನನಾಥನೊಂದಿಗೆ ಡ್ಯುಯೆಟ್ ಹಾಡಲಿದ್ದಾರೆ.

'ಸೂಪರ್ ಮರ್ಮಯೆ' ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ಬ್ಯಾಂಕ್ ಮ್ಯಾನೇಜರ್ ಒಬ್ಬರ ಮಗಳನ್ನು ಪ್ರೇಮ ವಿವಾಹವಾದ ಆಟೋ ಡ್ರೈವರ್ ತನ್ನ ಹೆಂಡತಿಯನ್ನು ವಾಪಸ್ ಪಡೆಯಲು ನಡೆಸುವ ಕಸರತ್ತು ಈ ಚಿತ್ರದ ಹೂರಣ.[ತುಳು ಚಿತ್ರ 'ದಂಡ್ 'ನಲ್ಲಿ ಸೋನು ಸಾಂಗ್ಸ್ ಸೂಪರ್]

Thulu movie 'Super Marmaye' all set to release in August

ಚಿತ್ರಕ್ಕೆ 'ಕಡಲ ಮಗೆ' ಖ್ಯಾತಿಯ ಚಂದ್ರಕಾಂತ್ ಶೆಟ್ಟಿ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಇನ್ನುಳಿದಂತೆ ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಅರವಿಂದ ಬೋಳಾರ್ ಮುಂತಾದವರ ಪ್ರಮುಖ ತಾರಾಗಣವಿರುವುದರಿಂದ ಮನೋರಂಜನೆಗೆ ಯಾವುದೇ ಕೊರತೆ ಇಲ್ಲ ಅಂತಾನೇ ಹೇಳಬಹುದು.[ಕೋಡ್ಲು ರಾಮಕೃಷ್ಣ ನಿರ್ದೇಶನದ 25ನೇ ಚಿತ್ರ 'ಏರೆಗ್ಲಾ ಪನೊಡ್ಚಿ'
]

'ಬಂಗಾರ್ ದ ಕುರಲ್' ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಶಿವಧ್ವಜ್ ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಕಲೇಶಪುರದ ಸುಂದರ ಪರಿಸರದಲ್ಲಿ ಚಿತ್ರದ ಎರಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ.

English summary
Thulu movie 'Super Marmaye', Gets U/A Certificate from the Censor Board. The movie all set to release in August. 'Super Marmaye' features Thulu actor Raghavendra Rai, Thulu Actress Divyashree in the lead role, The movie is directed by Ram Shetty.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada