twitter
    For Quick Alerts
    ALLOW NOTIFICATIONS  
    For Daily Alerts

    ನಕಲಿ ವಿಡಿಯೋ ಬಳಸಿ ಟಿಕ್‌ಟಾಕ್ ಸ್ಟಾರ್‌ಗೆ ಬೆದರಿಕೆ: ದೂರು ನೀಡಿದ ಯುವತಿ

    |

    ಟಿಕ್‌ಟಾಕ್, ಇನ್‌ಸ್ಟಾಗ್ರಾಂ ಇನ್ನಿತರೆ ಸಾಮಾಜಿಕ ಜಾಲತಾಣಗಳು ಹಲವರನ್ನು ಸೆಲೆಬ್ರಿಟಿಗಳನ್ನಾಗಿ ಮಾಡಿಬಿಟ್ಟಿದೆ. ಹಲವು ಯುವತಿಯರು ಟಿಕ್‌ಟಾಕ್, ಇನ್‌ಸ್ಟಾಗ್ರಾಂಗಳ ಮೂಲಕ ತಮ್ಮದೇ ವಿಡಿಯೋಗಳನ್ನು ಪ್ರಕಟಿಸಿ ಸೆಲಿಬ್ರಿಟಿಗಳಂತಾಗಿದ್ದಾರೆ.

    ಆದರೆ ಇಂಥಹಾ ದಿಢೀರ್ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟ ಟ್ರೋಲ್‌ಗಳನ್ನು ಸಹ ಎದುರಿಸುತ್ತಿದ್ದಾರೆ.

    ಸೋನು ಶ್ರೀನಿವಾಸ್ ಗೌಡ ಟಿಕ್‌ ಟಾಕ್ ವಿಡಿಯೋಗಳ ಮೂಲಕ ಜನಪ್ರಿಯರಾಗಿದ್ದರು, ಟಿಕ್‌ಟಾಕ್ ಬಂದ್ ಆದ ಬಳಿಕ ಇನ್‌ಸ್ಟಾಗ್ರಾಂನಲ್ಲಿ ರೀಲ್‌ಗಳನ್ನು ಅಪ್‌ಲೋಡ್ ಮಾಡಲು ಆರಂಭಿಸಿದರು. ಇದೀಗ ಸೋನು ಶ್ರೀನಿವಾಸ್‌ಗೌಡ ಪೊಲೀಸರಿಗೆ ದೂರು ನೀಡಿದ್ದು, ಕೆಲವರು ತಮ್ಮ ನಕಲಿ ವಿಡಿಯೋ ಇಟ್ಟುಕೊಂಡು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    Tik Tok Star Sonu Srinivas Gowda Complaint Against Troll Pages

    ಇ-ಮೇಲ್ ಮೂಲಕ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಸೋನು ಶ್ರೀನಿವಾಸ್ ಗೌಡ, ''ಕಿಶೋರ್ ಎಂಬ ವ್ಯಕ್ತಿಯು ನನ್ನ ನಕಲಿ ವಿಡಿಯೋ ಇಟ್ಟುಕೊಂಡು ನನಗೆ ಬರೆ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ. ಕಿರುಕುಳ ನೀಡುತ್ತಿದ್ದಾನೆ. ಅವನ ವಿರುದ್ಧ ಮೊಕದ್ದಮೆ ದಾಖಲಿಸಿ'' ಎಂದು ಸೋನು ಮನವಿ ಮಾಡಿದ್ದಾರೆ. ಕಿಶೋರ್ ಎಂಬಾತನ ಮೊಬೈಲ್ ನಂಬರ್ ಅನ್ನು ಸಹ ಸೋನು ಶ್ರೀನಿವಾಸ್ ಗೌಡ ನೀಡಿದ್ದಾರೆ.

    ಮುಂದುವರೆದು, ''ಕೆಲವು ಟ್ರೋಲ್ ಪೇಜ್‌ಗಳು ಅನಗತ್ಯವಾಗಿ ಪದೇ-ಪದೇ ನನ್ನ ವಿಡಿಯೋಗಳನ್ನು ಬಳಸಿಕೊಂಡು ಕೆಟ್ಟದಾಗಿ ಟ್ರೋಲ್ ಮಾಡುತ್ತಿರುತ್ತವೆ. ಈ ಟ್ರೋಲರ್‌ಗಳಿಂದ ನಾನು ಮಾನಸಿಕ ಕಿರುಕುಳ, ಒತ್ತಡ ಅನುಭವಿಸುತ್ತಿದ್ದೇನೆ'' ಎಂದಿರುವ ಸೋನು ಶ್ರೀನಿವಾಸ್ ಗೌಡ, ತಮ್ಮನ್ನು ಟ್ರೋಲ್‌ ಮಾಡಿದ ಪೇಜ್‌ಗಳ ಲಿಂಕ್‌ಗಳನ್ನು ಪೊಲೀಸರಿಗೆ ನೀಡಿದ್ದಾರೆ.

    ತಾವು ಪೊಲೀಸ್ ಆಯುಕ್ತರಿಗೆ ಕಳಿಸಿರುವ ಮೇಲ್‌ನ ಸ್ಕ್ರೀನ್‌ ಶಾಟ್ ಹಂಚಿಕೊಂಡಿರುವ ಸೋನು ಶ್ರೀನಿವಾಸ್‌ ಗೌಡ, ''ಕೆಲವು ದುಷ್ಕರ್ಮಿ ಟ್ರೋಲ್‌ ಪೇಜ್‌ಗಳ ವಿರುದ್ಧ ಹಾಗೂ ನನ್ನ ನಕಲಿ ಸಿಡಿ, ವಿಡಿಯೋ ಇಟ್ಟುಕೊಂಡು ನನಗೆ ಬ್ಲಾಕ್‌ಮೇಲ್ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದೇನೆ'' ಎಂದು ಹೇಳಿದ್ದಾರೆ.

    ನಟಿ-ನಟಿಯರು ಸಹ ಈ ಟ್ರೋಲ್‌ ಪೇಜ್‌ಗಳ ಹಾವಳಿಗೆ ಹೈರಾಣಾಗಿದ್ದಿದೆ. ಕೆಲವು ತಿಂಗಳ ಹಿಂದೆ ನಟ ಸಾಧು ಕೋಕಿಲ ಇದೇ ವಿಷಯವಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತಮ್ಮ ಹೆಸರಲ್ಲಿ ನಕಲಿ ಖಾತೆ ತೆರೆದು ನಟ-ನಟಿಯರನ್ನು ಟ್ರೋಲ್ ಮಾಡಲಾಗುತ್ತಿದೆ ಎಂದು ಅವರು ದೂರು ನೀಡಿದ್ದರು. ಅದಕ್ಕೂ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಇಂದ್ರಜಿತ್ ಲಂಕೇಶ್ ವಿರುದ್ಧ ಅವಾಚ್ಯವಾಗಿ ಪೋಸ್ಟ್ ಹಾಕಿದ್ದ ಟ್ರೋಲ್ ಮಗಾ ಪೇಜ್‌ ವಿರುದ್ಧ ದೂರು ದಾಖಲಾಗಿ, ಆತನ ಬಂಧನವೂ ಆಗಿತ್ತು.

    English summary
    Tik Tok star Sonu Srinivas Gowda gave complaint against people who blackmailing her by using fake videos. She also gave complaint against some troll pages.
    Wednesday, January 19, 2022, 16:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X