»   » 'ಟೈಮ್ಸ್ ಮ್ಯೂಸಿಕ್' ಪಾಲಾಯ್ತು 'ಅಶ್ವಿನಿ ರೆಕಾರ್ಡಿಂಗ್ ಕಂಪನಿ' ಹಾಡುಗಳು

'ಟೈಮ್ಸ್ ಮ್ಯೂಸಿಕ್' ಪಾಲಾಯ್ತು 'ಅಶ್ವಿನಿ ರೆಕಾರ್ಡಿಂಗ್ ಕಂಪನಿ' ಹಾಡುಗಳು

Posted By:
Subscribe to Filmibeat Kannada

ಪ್ರಸಿದ್ಧ ರೆಕಾರ್ಡ್ ಲೇಬಲ್ ಮತ್ತು ಮ್ಯೂಸಿಕ್ ಪಬ್ಲಿಷರ್ ಕಂಪನಿ 'ಟೈಮ್ಸ್ ಮ್ಯೂಸಿಕ್' ಈಗ ಕನ್ನಡ ಹಾಡುಗಳ ಸೇವೆ ನೀಡುವ 'ಅಶ್ವಿನಿ ರೆಕಾರ್ಡಿಂಗ್ ಕಂಪನಿ'ಯ ಮ್ಯೂಸಿಕ್ ಹಕ್ಕುಗಳನ್ನು ಖರೀದಿಸಿದೆ. ಇನ್ನು ಮುಂದೆ 'ಅಶ್ವಿನಿ ರೆಕಾರ್ಡಿಂಗ್ ಕಂಪನಿ' ನೀಡುತ್ತಿದ್ದ ಕನ್ನಡದ ಎಕ್ಸ್‌ಕ್ಲೂಸಿವ್ ಹಾಡುಗಳು ಟೈಮ್ಸ್ ಮ್ಯೂಸಿಕ್ ನಲ್ಲಿಯೇ ಸಿಗಲಿವೆ.

ಟೈಮ್ಸ್ ಮ್ಯೂಸಿಕ್ ವೈವಿಧ್ಯಮಯ ಚಲನಚಿತ್ರಗಳ ಹಾಡುಗಳ ಕ್ಯಾಟಲಾಗ್ ಹಕ್ಕನ್ನು ಪಡೆದಿದ್ದು, ಇದರಲ್ಲಿ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಸುದೀಪ್, ದರ್ಶನ್ ಮತ್ತು ಇತರರ 900 ಬ್ಲಾಕ್‌ ಬಸ್ಟರ್ ಕನ್ನಡ ಸಿನಿಮಾಗಳ ಹಾಡುಗಳ ಸೇವೆಯು ದೊರೆಯಲಿದೆ.

Times Music acquires music rights of Ashwini Recording Company

1985 ರಲ್ಲಿ ಸ್ಥಾಪನೆ ಆದ 'ಅಶ್ವಿನಿ ರೆಕಾರ್ಡಿಂಗ್ ಕಂಪನಿ' ಭಕ್ತಿಗೀತೆಗಳನ್ನು ರಚಿಸುವ ಮತ್ತು ವಿತರಿಸುವ ಸಂಪೂರ್ಣ ಹಕ್ಕನ್ನು ಕೇಂದ್ರೀಕೃತವಾಗಿಟ್ಟುಕೊಂಡಿತ್ತು. ಕೆ.ಜೆ.ಯೇಸುದಾಸ್, ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಮಧು ಬಾಲಕೃಷ್ಣ, ಎಸ್.ಜಾನಕಿ, ಕೆ.ಎಸ್.ಚಿತ್ರ, ದಿವಂಗತ ಸಿ.ಅಶ್ವಥ್ ಮತ್ತು ಇನ್ನೂ ಹಲವು ಸಂಗೀತ ದಿಗ್ಗಜರು 'ಅಶ್ವಿನಿ ರೆಕಾರ್ಡಿಂಗ್ ಕಂಪನಿ' ಅಡಿಯಲ್ಲಿ ಹಾಡಿದ್ದರು. ಇವರೆಲ್ಲಾ ಹಾಡಿದ 20,000 ಕ್ಕೂ ಹೆಚ್ಚಿನ ಭಕ್ತಿಗೀತೆಗಳ ಹಕ್ಕು ಸಹ ಈಗ 'ಟೈಮ್ಸ್ ಮ್ಯೂಸಿಕ್' ಪಾಲಾಗಿವೆ'. ಇನ್ನುಮುಂದೆ ಸಂಪೂರ್ಣ ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಮ್ಯೂಸಿಕ್ ಕ್ಯಾಟಲಾಗ್ ಟೈಮ್ಸ್ ಮ್ಯೂಸಿಕ್ ನಲ್ಲಿ ದೊರೆಯಲಿದ್ದು, ಇತರೆ ಮ್ಯೂಸಿಕ್ ಸ್ಟೋರ್‌ಗಳು, ಡಿಜಿಟಲ್ ಮತ್ತು ಮೊಬೈಲ್ ಗಳಿಗೂ ಸೇವೆ ಲಭ್ಯವಿದೆ.

ಅಲ್ಲದೇ ಎಲ್ಲಾ ಹಾಡುಗಳ ವಿಡಿಯೋಗಳು ಸಹ ಟೈಮ್ಸ್ ಮ್ಯೂಸಿಕ್ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ದೊರೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Times Music, one of India’s most progressive record labels has acquired the music rights of leading Kannada record label, Ashwini Recording Company. The exclusive collection of songs will now be available with other Kannada hits bringing a diverse range of music styles together under one roof of Times Music.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada