For Quick Alerts
  ALLOW NOTIFICATIONS  
  For Daily Alerts

  ಮಂಜು, ರಾಘಣ್ಣ, ಮುನಿರತ್ನಂಗೆ ಒಂದು ಉಚಿತ ಸಲಹೆ

  By *ಬಾಲರಾಜ್ ತಂತ್ರಿ
  |

  ಮೂವರೂ ಹಿರಿಯ ನಿರ್ಮಾಪಕರಿಗೆ ನಮಸ್ಕಾರ. ಸಂತೋಷದ ವಿಚಾರಕ್ಕೂಬೇಸರದ ವಿಚಾರಕ್ಕೂ ಒಟ್ಟಿನಲ್ಲಿ ಕನ್ನಡ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಶೈನಿಂಗೋ ಶೈನಿಂಗ್. ಈಗ ನಾ ಮುಂದಾ..ನೀ ಮುಂದಾ.. ಎಂದು ಮುನಿರತ್ನಂ ಮತ್ತು ಕೆ ಮಂಜು ನಡುವಣ ಅವರವರ ಚಿತ್ರ ಬಿಡುಗಡೆ ವಿಚಾರದಲ್ಲಿ ಭಾರೀ ಸದ್ದುಗದ್ದಲ. ತಗಲಾಕೊಂಡೆ ನಾನು.. ತಗಲಾಕೊಂಡೆ ನಾನು.. ಇಬ್ಬರು ನಿರ್ಮಾಪಕರ ನಡುವೆ ತಗಲಾಕೊಂಡೆ ಎನ್ನುವುದು ಉಪೇಂದ್ರ ಪರಿಸ್ಥಿತಿ ಏಕೆಂದರೆ ಎರಡೂ ಚಿತ್ರಕ್ಕೆ ಅವರೇ ಹೀರೋ.

  ಮೂರು ಬಹು ನಿರೀಕ್ಷಿತ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿದೆ. ಅಣ್ಣಾಬಾಂಡ್, ಕಠಾರಿವೀರ ಮತ್ತು ಗಾಡ್ ಫಾದರ್. ಈ ಮೂರು ಚಿತ್ರದಲ್ಲಿ ಅಣ್ಣಾಬಾಂಡ್ ಈ ಹಿಂದೇನೆ ಬಿಡುಗಡೆ ಡೇಟ್ ಘೋಷಿಸಿರುವುದರಿಂದ ಇನ್ನೆರಡು ಚಿತ್ರಗಳಲ್ಲಿ ಯಾವ ಒಂದು ಚಿತ್ರ ಅಣ್ಣಾಬಾಂಡ್ ಚಿತ್ರಕ್ಕೆ ಪೈಪೋಟಿ ನೀಡುವುದು ಎನ್ನುವುದು ಈಗಿನ ಪ್ರಸ್ತುತ ವಿಷಯ.

  ಮೂವರು ನಿರ್ಮಾಪಕರಿಗೆ ತಮ್ಮ ಚಿತ್ರದ ಬಗ್ಗೆ ಅಪಾರ ನಂಬಿಕೆಯಿದೆ ಎನ್ನುವುದಾದರೆ ಆಗಿದ್ದು ಆಗಿಹೋಗಲಿ ಮೂರು ಚಿತ್ರವನ್ನು ಒಂದೇ ದಿನ ಬಿಡುಗಡೆ ಮಾಡಿ. ಹಾಗಾದರೂ ಪರಭಾಷಾ ಚಿತ್ರ ಪ್ರದರ್ಶನ ಕಮ್ಮಿ ಆಗುತ್ತೋ ನೋಡೋಣ? ಪರಭಾಷೆಯ ಚಿತ್ರಗಳಿಗೆಂದೇ ಮೀಸಲಾಗಿರುವ ರಾಜ್ಯದ ಬಹಳಷ್ಟು ಚಿತ್ರಮಂದಿರಗಳಿವೆ. ಆ ಚಿತ್ರಮಂದಿರದ ಮಾಲೀಕರ ಜೊತೆ ಮಾತುಕತೆ ನಡೆಸಿ ಅವುಗಳಲ್ಲಿ ನಿಮ್ಮ ಚಿತ್ರ ಪ್ರದರ್ಶಿಸಿ. ಹಾಗೆ ಮಾಡಿದರೆ ಅದು ನೋಡಿ ಒಪ್ಪಿ ಕೊಳ್ಳಬೇಕಾದ ಮಾತು. ಅದು ಬಿಟ್ಟು..

  ಒಂದೇ ನಾಯಕನ ಎರಡು ಚಿತ್ರಗಳು ಏಕಕಾಲಕ್ಕೆ ಬಿಡುಗಡೆ ಆಗಬಾರದೆಂದು ಚಲನಚಿತ್ರಮಂಡಳಿಯ ನಿಯಮ ಏನಾದರೂ ಇದೆಯಾ? ಇದ್ರೆ ಆ ನಿಯಮವನ್ನು ಗಾಳಿಗೆ ತೋರಿ, ನಮ್ಮ ಕನ್ನಡದ ನಿರ್ಮಾಪಕರಿಗೆ ಮಂಡಳಿಯ ನಿಯಮ ಧಿಕ್ಕರಿಸುವುದು ಹೊಸದೇನೂ ಅಲ್ಲ ಬಿಡಿ. ನಿಯಮವಿರೋದೆ ಮುರಿಯೋಕೆ.

  ನನ್ನ ಚಿತ್ರ ಮೊದಲು ಮಹೂರ್ತ ಕಂಡಿದ್ದು, ನನ್ನ ಚಿತ್ರ ಮೊದಲ ಕುಂಬಳಕಾಯಿ ಹೊಡೆದಿದ್ದು, ಬೇಸಿಗೆ ರಜಾ ಇಂತಹ ಕೋಳಿ ಜಗಳ ಬೇಕಾ ಸ್ವಾಮಿ? for kind information, ಒಳ್ಳೆ ಕನ್ನಡ ಚಿತ್ರವನ್ನು ಕನ್ನಡಿಗರು ಎಂದೂ ಕೈಬಿಟ್ಟಿಲ್ಲ.

  English summary
  When and how to launch a movie? Free tips to Kannada film makers K Manju, Raghavendra Rajkumar and Muniratna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X