For Quick Alerts
  ALLOW NOTIFICATIONS  
  For Daily Alerts

  ಶ್ರೀಮುರಳಿ-ಶಿವಣ್ಣ ಚಿತ್ರದ ಬಗ್ಗೆ ಸುಮ್ಮನೆ ಗಾಸಿಪ್ ಹಬ್ಬಿಸ್ಬೇಡಿ.!

  By Harshitha
  |

  ಸ್ಟಾರ್ ಗಳ ಸಿನಿಮಾ ಅಂದ್ರೇನೇ ಹಾಗೆ, ಅನೌನ್ಸ್ ಆದಾಗಿನಿಂದ ಹಿಡಿದು ಚಿತ್ರ ಬಿಡುಗಡೆ ಆಗುವವರೆಗೂ ಸುದ್ದಿಯಲ್ಲಿರುತ್ತೆ. ಅದರಲ್ಲಿ ಗಾಸಿಪ್ ಸುದ್ದಿಗಳೇ ಹೆಚ್ಚು ಅಂದ್ರೆ ಖಂಡಿತ ಅತಿಶಯೋಕ್ತಿ ಅಲ್ಲ.!

  ಸದ್ಯ ರೋರಿಂಗ್ ಸ್ಟಾರ್ ಶ್ರೀಮುರಳಿ ರವರ ಹೊಸ ಸಿನಿಮಾಗೂ ಇದೇ ಪರಿಸ್ಥಿತಿ! ಮೊನ್ನೆ ಭಾನುವಾರವಷ್ಟೇ, ತಮ್ಮ ಮುಂದಿನ ಚಿತ್ರದ ಕುರಿತಾಗಿ ಶ್ರೀಮುರಳಿ ಒಂದು 'ಬಾಂಬ್' ಬ್ಲಾಸ್ಟ್ ಮಾಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮೊಟ್ಟ ಮೊದಲ ಬಾರಿಗೆ ನಟಿಸುವ ಅವಕಾಶ ಶ್ರೀಮುರಳಿಗೆ ಸಿಕ್ಕಿದೆ ಅನ್ನೋದೇ ಆ 'ಬಾಂಬ್' ನ್ಯೂಸ್. [ಕನ್ನಡಾಭಿಮಾನಿಗಳಿಗೆ ನಟ ಶ್ರೀಮುರಳಿ ಕೊಟ್ಟ 'ಬಾಂಬ್' ನ್ಯೂಸ್ ಏನು?]

  ಅಷ್ಟಕ್ಕೂ ಅಂದೇ, ಈ ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ ಅಂತ ಸ್ವತಃ ಶ್ರೀಮುರಳಿ ಹೇಳಿದ್ದರು. ಹೀಗಿದ್ದರೂ, ಅದ್ಯಾರು ಸುಖಾಸುಮ್ಮನೆ ಗಾಳಿ ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ. ಶ್ರೀಮುರಳಿ ಹಾಗೂ ಶಿವಣ್ಣ ಜೊತೆಯಾಗಿ ನಟಿಸುವ ನರ್ತನ್ ಆಕ್ಷನ್ ಕಟ್ ಹೇಳುವ ಚಿತ್ರಕ್ಕೆ 'ಮಫ್ತಿ' ಎಂಬ ಟೈಟಲ್ ಫಿಕ್ಸ್ ಅಂತ ಗುಲ್ಲೆದ್ದಿದೆ. [ಬರ್ತಡೆ ಬಾಯ್ ಶ್ರೀಮುರಳಿ ಮುಂದಿನ ಚಿತ್ರ ಯಾವುದು?]

  ಯಾವುದಕ್ಕೂ ಒಮ್ಮೆ ಕನ್ಫರ್ಮ್ ಮಾಡಿಕೊಳ್ಳೋಣ ಅಂತ ನಿಮ್ಮ 'ಫಿಲ್ಮಿಬೀಟ್ ಕನ್ನಡ', ನಟ ಶ್ರೀಮುರಳಿ ರವರಿಗೆ ಕರೆ ಮಾಡಿದಾಗ, ''ಮಫ್ತಿ' ಅಂತ ಹೇಗೆ ಸುದ್ದಿ ಆಯ್ತೋ ನನಗೆ ಗೊತ್ತಿಲ್ಲ. ಟೈಟಲ್ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ. ಇಷ್ಟು ಬೇಗ ಏನ್ನನ್ನೂ ಹೇಳಲು ಸಾಧ್ಯ ಇಲ್ಲ. ಇನ್ನೂ ಟೈಮ್ ಬೇಕು. ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಜವಾಬ್ದಾರಿ ಹೆಚ್ಚಿದೆ'' ಅಂತ ಹೇಳಿದರು.

  ಅಲ್ಲಿಗೆ, ಜಯಣ್ಣ-ಭೋಗೇಂದ್ರ ನಿರ್ಮಾಣದ 15 ನೇ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ ಅನ್ನೋದು ಮಾತ್ರ ಸದ್ಯಕ್ಕೆ ಪಕ್ಕಾ ನ್ಯೂಸ್. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

  English summary
  Kannada Actor Srimurali is all set to share screen space with Kannada Actor Shiva Rajkumar in his upcoming movie Directed by Narthan, Produced by Jayanna-Bhogendra. Srimurali has confirmed that the Movie title is not fixed yet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X