»   » ತೆಲುಗು ಪೋಷಕ ನಟಿ ತೆಲಂಗಾಣ ಶಕುಂತಲಾ ವಿಧಿವಶ

ತೆಲುಗು ಪೋಷಕ ನಟಿ ತೆಲಂಗಾಣ ಶಕುಂತಲಾ ವಿಧಿವಶ

Posted By:
Subscribe to Filmibeat Kannada

ತೆಲುಗು ಚಿತ್ರರಂಗದ ಖ್ಯಾತ ಪೋಷಕ ಕಲಾವಿದೆ ತೆಲಂಗಾಣ ಶಕುಂತಲಾ (65) ಅವರು ಶುಕ್ರವಾರ (ಜೂ.13) ಮಧ್ಯರಾತ್ರಿ ವಿಧಿವಶರಾಗಿದ್ದಾರೆ. ಹೈದರಾಬಾದಿನ ಕೊಂಪಲ್ಲಿಯಲ್ಲಿನ ತಮ್ಮ ನಿವಾಸದಲ್ಲಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಹೃದಯಾಘಾತವಾದ ಕೂಡಲೆ ಅವರನ್ನು ಸಮೀಪದ ನಾರಾಯಣ ಹೃದಯಾಲಕ್ಕೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೆ ಅವರ ಕೊನೆಯುಸಿರೆಳೆಸಿದ್ದನ್ನು ಆಸ್ಪತ್ರೆ ವೈದ್ಯರು ದೃಢಪಡಿಸಿದ್ದಾರೆ. 1981ರಲ್ಲಿ ಚಿತ್ರರಂಗಕ್ಕೆ ಅಡಿಯಿಟ್ಟ ಅವರು ತೆಲಂಗಾಣ ಶೈಲಿಯಲ್ಲಿ ಮಾತನಾಡುತ್ತಾ ತನ್ನದೇ ಆದಂತಹ ಛಾಪನ್ನು ಮೂಡಿಸಿದ್ದರು.

Telangana Shakuntala

ಸುಮಾರು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಶಕುಂತಲಾ ಅವರು ಪೋಷಕ ಕಲಾವಿದೆಯಾಗಿ, ಹಾಸ್ಯನಟಿಯಾಗಿ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮಹಾರಾಷ್ಟ್ರ ಮೂಲದ ಈ ನಟಿ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿದವರು. ಮೃತರಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ.

ರಾಯಸೀಮೆಯ ಬಹುತೇಕ ಫ್ಯಾಕ್ಷನ್ ಚಿತ್ರಗಳಲ್ಲಿ ಅವರ ಪಾತ್ರ ಖಾಯಂ ಆಗಿರುತ್ತಿತ್ತು. ತೆಲುಗಿನ ಸೂಪರ್ ಹಿಟ್ 'ಒಕ್ಕಡು' ಚಿತ್ರದಲ್ಲಿ ಪ್ರಕಾಶ್ ರೈ ಅವರಿಗೆ ತಾಯಿಯಾಗಿ ಅವರು ಅಭಿನಯಿಸಿದ ಪಾತ್ರ ಎಲ್ಲರ ಮೆಚ್ಚುಗೆ ಪಾತ್ರವಾಗಿತ್ತು. ತೆಲುಗು ಚಿತ್ರರಂಗ ಮತ್ತೊಬ್ಬ ಪ್ರತಿಭಾವಂತ ಪೋಷಕ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ. (ಏಜೆನ್ಸೀಸ್)

English summary
Tollywood comedy, character artist Telangana Shakuntala died of cardiac arrest in the early hours of June 14. She is 63 and is survived by a daughter and a son.
Please Wait while comments are loading...