»   » ಟಾಲಿವುಡ್ ಹೀರೋ ರವಿತೇಜ ಸೋದರ ಬಂಧನ

ಟಾಲಿವುಡ್ ಹೀರೋ ರವಿತೇಜ ಸೋದರ ಬಂಧನ

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಟಾಲಿವುಡ್ ಹೀರೋ ರವಿತೇಜ ಅವರ ಸೋದರನ್ನು ಹೈದರಾಬಾದಿನ ಮಾದಾಪುರ್ ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಕಾರು ಚಲಾಯಿಸುತ್ತಿದ್ದ ಭರತ್ ನನ್ನು ಪೊಲೀಸರು ತಡೆದು ವಿಚಾರಿಸಿದಾಗ ಅವರ ಮೇಲೆ ಕೈ ಮಾಡಿದ ಆರೋಪದ ಮೇಲೆ ವಶಕ್ಕೆ ಪಡೆದಿದ್ದಾರೆ.

ಹೈಟೆಕ್ ಸಿಟಿ ಬಳಿಯ ಮಾದಾಪುರ್ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಮಂಗಳವಾರ (ಮಾ.4) ಬೆಳಗ್ಗೆ ನಡೆದಿದೆ. ಈ ಹಿಂದೊಮ್ಮೆ ಡ್ರಗ್ಸ್ ಸೇವನೆ ಆರೋಪದಲ್ಲಿ ಭರತ್ ಅವರನ್ನು ಬಂಧಿಸಲಾಗಿತ್ತು. ಸ್ಮಗ್ಲಿಂಗ್ ಆರೋಪಗಳಲ್ಲೂ ಅವರು ಭಾಗಿಯಾಗಿದ್ದರು ಎಂಬ ಆರೋಪಗಳೂ ಭರತ್ ಮೇಲಿವೆ.

Ravi Teja brother Bharat

ಕಂಠಪೂರ ಕುಡಿದು ಕಾರು ಚಲಾಯಿಸುತ್ತಿದ್ದ ಭರತ್ ನನ್ನು ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿದಾಗ ನಾನಾ ರಾದ್ಧಾಂತ ಮಾಡಿದ್ದಾನೆ. ಬಳಿಕ ಪೊಲೀಸರ ಮೇಲೆ ಕೈ ಮಾಡುವ ಮೂಲಕ ಈಗ ಬಂಧನಕ್ಕೆ ಒಳಗಾಗಿದ್ದಾನೆ. ಈ ಹಿಂದೊಮ್ಮೆ ತಿರುಮಲ ತಿರುಪತಿಯಲ್ಲಿ ಧೂಮಪಾನ ಮಾಡಿ ದಂಡತೆತ್ತಿದ್ದ. ತೆಲುಗಿನ ಕೆಲವು ಚಿತ್ರಗಳಲ್ಲಿ ಭರತ್ ಅಭಿನಯಿಸಿದ್ದಾರೆ.

ರಸ್ತೆ ಮೇಲೆ ಸುಮಾರು ಅರ್ಧಗಂಟೆಗೂ ಹೆಚ್ಚು ಸಮಯ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆದಿದೆ. ಸದ್ಯಕ್ಕೆ ಪೊಲೀಸರ ಅತಿಥಿಯಾಗಿರುವ ಭರತ್ ನನ್ನು ರಿಮ್ಯಾಂಡ್ ರೂಂಗೆ ಕಳುಹಿಸಲಾಗಿದೆ. ಒಂದಿಲ್ಲೊಂದು ಕಿರಿಕ್ ಮಾಡಿಕೊಂಡು ಬಂಧನಕ್ಕೆ ಒಳಗಾಗುತ್ತಿರುವ ತನ್ನ ತಮ್ಮನ ಬಗ್ಗೆ ರವಿತೇಜ ಏನು ಹೇಳುತ್ತಾರೋ ನೋಡಬೇಕು.

English summary
Tollywood hero Ravi Teja's brother Bharat arrested for making nuisance. Early Tuesday Bharat had a duel with police and he was under the sway of liquor at that time.
Please Wait while comments are loading...