»   » ಬರ್ತಡೇ ಬಾಯ್ ಉಪೇಂದ್ರರಿಗೆ ಟಾಲಿವುಡ್ ನಿಂದ ತೇಲಿ ಬಂದ ಶುಭಾಶಯಗಳು!

ಬರ್ತಡೇ ಬಾಯ್ ಉಪೇಂದ್ರರಿಗೆ ಟಾಲಿವುಡ್ ನಿಂದ ತೇಲಿ ಬಂದ ಶುಭಾಶಯಗಳು!

Posted By:
Subscribe to Filmibeat Kannada

ರಿಯಲ್ ಸ್ಟಾರ್, ಸೂಪರ್ ಸ್ಟಾರ್ ಉಪೇಂದ್ರ ಇಂದು ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಬರ್ತಡೇ ಬಾಯ್ ಉಪ್ಪಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಅಭಿಮಾನಿಗಳ ಜೊತೆಗೆ ಉಪೇಂದ್ರ ಅವರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ ನಟಿಯರು ಕೂಡ ಉಪ್ಪಿಗೆ ಶುಭಾಶಯವನ್ನು ಕೋರುತ್ತಿದ್ದಾರೆ.

ಉಪೇಂದ್ರ ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿಯೂ ಹೆಸರು ಮಾಡಿದ್ದಾರೆ. ಅಲ್ಲಿಯೂ ಅವರಿಗೆ ದೊಡ್ಡ ಫ್ಯಾನ್ಸ್ ಫಾಲೋವಿಂಗ್ ಇದೆ. ಅದ್ದರಿಂದ ಟಾಲಿವುಡ್ ಕಡೆಯಿಂದ ಕೂಡ ಉಪೇಂದ್ರ ಅವರಿಗೆ ಶುಭಾಶಯಗಳು ತೇಲಿ ಬರುತ್ತಿದೆ. ತೆಲುಗು ಸ್ಟಾರ್ ಗಳ ಫ್ಯಾನ್ಸ್ ಪೇಜ್ ಗಳಲ್ಲಿ ಈಗ ಬರೀ ಉಪೇಂದ್ರ ಅವರ ಫೋಟೋಗಳೇ ಕಾಣುತ್ತಿದೆ. ಮುಂದೆ ಓದಿ..

ನಟಿ ವೇದಿಕಾ

ಕಾಲಿವುಡ್ ನಟಿ ವೇದಿಕಾ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಉಪೇಂದ್ರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಸದ್ಯ ಉಪೇಂದ್ರ ಅವರ 'ಹೋಮ್ ಮಿನಿಸ್ಟರ್' ಚಿತ್ರದಲ್ಲಿ ವೇದಿಕಾ ನಾಯಕಿಯಾಗಿದ್ದಾರೆ.

ಅಲ್ಲು ಅರ್ಜುನ್ ಫ್ಯಾನ್ಸ್

ಉಪ್ಪಿ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ಫ್ಯಾನ್ಸ್ ಕೂಡ ಶುಭಾಶಯ ಕೋರಿದ್ದಾರೆ. 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ಉಪೇಂದ್ರ ಮತ್ತು ಅಲ್ಲು ಅರ್ಜುನ್ ಒಟ್ಟಿಗೆ ನಟಿಸಿದ್ದರು.

ಜೂನಿಯರ್ NTR ಫ್ಯಾನ್ಸ್

ಟಾಲಿವುಡ್ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಫ್ಯಾನ್ಸ್ ಗಳು ತಮ್ಮ ಟ್ವಿಟ್ಟರ್ ಖಾತೆಗಳ ಮೂಲಕ ಉಪೇಂದ್ರ ಅವರಿಗೆ ತಮ್ಮದೆ ರೀತಿಯಲ್ಲಿ ವಿಶ್ ಮಾಡಿದ್ದಾರೆ.


ಪ್ರೀತಿಯ ಪತಿ ಉಪೇಂದ್ರಗೆ ಪ್ರಿಯಾಂಕಾ ಉಪೇಂದ್ರ ವಿಶ್ ಮಾಡಿದ್ದು ಹೀಗೆ

ಲಕ್ಷ್ಮಿ ರೈ ಫ್ಯಾನ್ಸ್

ನಟಿ ಲಕ್ಷ್ಮಿ ರೈ ಅವರ ಅಭಿಮಾನಿಗಳು ಕೂಡ ಉಪ್ಪಿ ಬರ್ತಡೇ ಗೆ ಶುಭ ಕೋರಿದ್ದಾರೆ. ಉಪೇಂದ್ರ ಅವರ 'ಕಲ್ಪನಾ' ಚಿತ್ರದಲ್ಲಿ ಲಕ್ಷ್ಮಿ ರೈ ಜೋಡಿಯಾಗಿದ್ದರು.

ಕನ್ನಡದ ಮೂರು ತಾರೆಗಳಿಗಿಂದು ಜನುಮದಿನದ ಸಂಭ್ರಮ

ನಿರ್ದೇಶಕ ತ್ರಿವಿಕ್ರಮ್

ಟಾಲಿವುಡ್ ನಿರ್ದೇಶಕ ತ್ರಿವಿಕ್ರಮ್ ಅವರ ಅಭಿಮಾನಿಗಳು ಸಹ ಉಪ್ಪಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಅಂದಹಾಗೆ, ತ್ರಿವಿಕ್ರಮ್ ನಿರ್ದೇಶನದ 'ಸನ್ ಆಫ್ ಸತ್ಯ ಮೂರ್ತಿ' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

English summary
Tollywood Stars and fans have taken their twitter account to wish Real Star Upendra on his 50th birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada