»   » 'ದಸರಾ'ಗೆ ಹೋಗ್ತೀರಾ, ಹಾಗಿದ್ರೆ ತಪ್ಪದೆ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಿ

'ದಸರಾ'ಗೆ ಹೋಗ್ತೀರಾ, ಹಾಗಿದ್ರೆ ತಪ್ಪದೆ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಿ

Posted By:
Subscribe to Filmibeat Kannada

ಈ ಬಾರಿಯ ದಸರಾ ಚಲನಚಿತ್ರೋತ್ಸವದಲ್ಲಿ ಭರ್ಜರಿ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಮೈಸೂರು ನಗರ ಮತ್ತು ಜಿಲ್ಲೆಯ 10 ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ಕಡಿಮೆ ಬೆಲೆಯ ಟಿಕೆಟ್ ಖರೀದಿಸಿ, ಹೊಚ್ಚ ಹೊಸ ಮತ್ತು ಕೌಟುಂಬಿಕ ಸಿನಿಮಾಗಳನ್ನು ನೋಡಬಹುದು.

ಅಕ್ಟೋಬರ್ 2 ರಿಂದ 6 ರವರೆಗೆ ಮೈಸೂರು ನಗರದ 'ಸ್ಕೈಲೈನ್' ಚಿತ್ರಮಂದಿರ, 'ಒಲಂಪಿಯಾ' ಚಿತ್ರಮಂದಿರ, 'ಡಿ.ಆರ್.ಸಿ.' ಚಿತ್ರಮಂದಿರ, 'ಐನಾಕ್ಸ್' ಚಿತ್ರಮಂದಿರ, 'ಲಕ್ಷ್ಮೀ' ಚಿತ್ರಮಂದಿರ.[ನಾಡಹಬ್ಬ 'ದಸರಾ'ದಲ್ಲಿ 'ಗಾನಯಾನ' ಕನ್ನಡ ಚಿತ್ರಗೀತೆಗಳ 'ಭಾವಯಾನ']

Top class films to be screened during 'Dasara film festival-2016'

ಹೆಚ್.ಡಿ.ಕೋಟೆಯ 'ಮಂಜುನಾಥ್' ಚಿತ್ರಮಂದಿರ, ಕೆ.ಆರ್.ನಗರದ 'ಗೌರಿಶಂಕರ' ಚಿತ್ರಮಂದಿರ, ನಂಜನಗೂಡು 'ಲಲಿತ' ಚಿತ್ರಮಂದಿರ, ಪಿರಿಯಾಪಟ್ಟಣದ 'ಮಹದೇಶ್ವರ' ಚಿತ್ರಮಂದಿರ, ಹುಣಸೂರಿನ 'ಲೀಲಾ' ಚಿತ್ರಮಂದಿರ, ಹಾಗೂ ಟಿ.ನರಸೀಪುರದ 'ಭಗವಾನ್' ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು.[ಬಾಲ್ಕನಿಯಲ್ಲಿ ಕೂತು ನೋಡಿ ದಸರಾ ಫಿಲಂ ಫೆಸ್ಟಿವಲ್]

Top class films to be screened during 'Dasara film festival-2016'

ಪ್ರವೇಶ ದರ: ನೆಲ ಅಂತಸ್ತಿಗೆ ರೂ. 10/-,
ಬಾಲ್ಕನಿ ರೂ. 20/-
ಹಾಗೂ ಮಲ್ಟಿಫ್ಲೆಕ್ಸ್ ಗೆ ರೂ. 30/-
ನಿಗದಿಪಡಿಸಲಾಗಿದೆ.

Top class films to be screened during 'Dasara film festival-2016'

'ಮಾಣಿಕ್ಯ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ', 'ರನ್ನ', 'ಇಷ್ಟಕಾಮ್ಯ', 'ಬಬ್ರುವಾಹನ', 'ಉಳಿದವರು ಕಂಡಂತೆ', 'ಜೂಮ್', 'ಬುಲ್ ಬುಲ್', 'ವಾಸ್ತುಪ್ರಕಾರ', 'ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ', 'ದೇವರ ನಾಡಲ್ಲಿ', 'ಕಿರಗೂರಿನ ಗಯ್ಯಾಳಿಗಳು', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಯುಟರ್ನ್'.[ದಸರಾ ಚಲನಚಿತ್ರೋತ್ಸವ 2010; ಪ್ರದರ್ಶನ ವಿವರ]

Top class films to be screened during 'Dasara film festival-2016'

'ಫಸ್ಟ್ ರ್ಯಾಂಕ್ ರಾಜು', 'ತಿಥಿ', 'ಸಂತೆಯಲ್ಲಿ ನಿಂತ ಕಬೀರ', 'ರಂಗಿತರಂಗ', 'ಲಾಸ್ಟ್ ಬಸ್', 'ಪ್ರಿಯಾಂಕ', 'ನಾನು ಅವನಲ್ಲ ಅವಳು', 'ನಾನು ನನ್ನ ಕನಸು', 'ರಿಕ್ಕಿ', 'ಅಸ್ತಿತ್ವ', 'ಕೆಂಡಸಂಪಿಗೆ', 'ಶಿವಲಿಂಗ' ಮುಂತಾದ ಕನ್ನಡದ ಜನಪ್ರಿಯ ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.

Top class films to be screened during 'Dasara film festival-2016'

ಅಕ್ಟೋಬರ್ 2 ರಿಂದ 8 ರವರೆಗೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರ ಪಡೆದ ಚಲನಚಿತ್ರಗಳ ಜೊತೆಗೆ ದೇಶ-ವಿದೇಶಗಳ ಅತ್ಯುತ್ತಮ ಹಾಗೂ ಜಾಗತಿಕ ಮನ್ನಣೆ ಪಡೆದ ಚಲನಚಿತ್ರ ಹಾಗೂ ಸಾಕ್ಷ್ಯ ಚಿತ್ರಗಳನ್ನು 'ರಾಣಿ ಬಹದ್ದೂರ್' ಸಭಾಂಗಣದಲ್ಲಿ ಮತ್ತು ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಪ್ರದರ್ಶಿಸಲಾಗುವುದು. ಈ ಚಿತ್ರಗಳ ಪ್ರದರ್ಶನಗಳ ಸಂದರ್ಭದಲ್ಲಿ ಪ್ರವೇಶ ಉಚಿತವಾಗಿರುತ್ತದೆ.[ಕೇವಲ ರು.10ಕ್ಕೆ ಕನ್ನಡ ಸಿನಿಮಾ ನೋಡಿ ಮಜಾ ಮಾಡಿ]

Top class films to be screened during 'Dasara film festival-2016'

ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮತ್ತು ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ, 'ಆಗಸಿ ಪಾರ್ಲರ್', 'ಅತ್ತಿ ಹಣ್ಣು ಮತ್ತು ಕಣಜ', 'ಚುರುಕುಮಾರ', 'ಗಾಳಿ ಬೀಜ', 'ಮುನ್ಸೀಫಾ', 'ಪ್ರಕೃತಿ, ಪುಟ ತಿರುಗಿಸಿ ನೋಡಿ', 'ತಲ್ಲಣ', 'ತಿಥಿ' ಹಾಗೂ 'ವಿದಾಯ' ಕನ್ನಡ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

Top class films to be screened during 'Dasara film festival-2016'

ಪನೋರಮಾ ಚಿತ್ರಗಳಾದ 'ಆಂಖೋ ದೇಖಿ', 'ಸಿನಿಮಾ ವಾಲಾ', 'ಕೋರ್ಟ್ ಏಕ್ ಹಜಾರ್ ಜಿ ನೋಟ್', 'ಎಲಿಝಬೆತ್ ಏಕಾದಶಿ', 'ಜಲ್', 'ಕುತ್ಯಾರ್ ಕಾಲ್ವಾತ್ ಗುರ್ಲಿ', 'ಕಿಲ್ಲ', 'ಕೋ ಯಾದ್', 'ಮಸಾನ್', 'ನಚೋಮ್-ಇ ಕುಂಪಸರ್', 'ರಾಮ್ ‍ಸಿಂಗ್ ಚಾರ್ಲಿ' ಹಾಗೂ 'ದಿ ಹೆಡ್ ಹಂಟರ್' ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.

Top class films to be screened during 'Dasara film festival-2016'

ವಿಶ್ವ ಚಿತ್ರಗಳಾದ '35 ರಮ್ಸ್', 'ಲಾರೆನ್ಸ್ ಎನಿವೇಸ್', 'ಮ್ಯಾಕ್‍ಬತ್', 'ಮಾನ್ ಅಂಕಲ್', 'ಮೈ ವರ್ಡ್ಸ್', 'ಮೈ ಲೈಸ್-ಮೈ ಲವ್', 'ಓ ಬಾಯ್', 'ಪೇರೆಂಟ್ಸ್', 'ಪೇಟರ್', 'ಪೋಲ್', 'ಸೋಲ್ ಕಿಚನ್', 'ಟಾಮ್ ಬಾಯ್', 'ಟೇಸ್ಟ್ ಆಫ್ ಚೆರ್ರಿ' ಹಾಗೂ 'ದಿ ವಿಂಡ್ ವಿಲ್ ಕ್ಯಾರಿ ಅಸ್' ಸಿನಿಮಾಗಳನ್ನು ಪ್ರದರ್ಶಿಸಲಾಗುವುದು.

Top class films to be screened during 'Dasara film festival-2016'

ಮುಂಬೈ ಇಂಟರ್ ನ್ಯಾಷನಲ್ ಚಲನಚಿತ್ರಗಳಾದ 'ಅಗ್ಲಿ ಬಾರ್', 'ಆಲೈಸ್/ಕಮಲಾಕ್ಷಿ', 'ಛಾಯಾ', 'ಫೇಮಸ್ ಇನ್ ಅಹ್ಮದಾಬಾದ್', 'ಫಿಶರ್ ವುಮನ್ ಅಂಡ್ ಟುಕ್ ಟುಕ್', 'ಗೋಲ್ಡನ್ ಬರ್ಡ್', 'ಲೆಟರ್ ಫ್ರಂ ಕಾರ್ಲೈ', 'ನಪ್ಯಿಯಲ್ ಮೆಮೋರಿಸ್', 'ರೋಟರಿ ಲೈಫೈನ್', 'ಸೋಲೋ ಫಿನಾಲೆ'.

Top class films to be screened during 'Dasara film festival-2016'

'ಟಾಕಿಂಗ್ ವಾಲ್ಸ್', 'ದ ಲಾಸ್ಟ್ ಮ್ಯಾಂಗೊ ಬಿಫೋರ್ ದ ಮಾನ್ಸೂನ್', 'ಪಾರ್ ಪ್ರೌಂ ಹೋಂ', 'ಫೈರ್‍ಪೈಸ್ ಇನ್ ದಿ ಎಬಿಸ್', 'ಮೈ ನೇಮ್ ಇಸ್ ಸಾಲ್ಟ್', 'ಪುಮ್ ಶಾಂಗ್', 'ಪ್ಲೆಸಿಬೊ', 'ರಸನ್ ಪಿಯ', 'ದಿ ಇಮ್ಮಾರ್ಟಲ್ಸ್' ಹಾಗೂ 'ದಿ ಕ್ವೀನ್ ಆಫ್ ಸೈಲೆನ್ಸ್' ಮುಂತಾದ ಚಿತ್ರಗಳು ಪ್ರದರ್ಶಿಸಲಾಗುವುದು.

Top class films to be screened during 'Dasara film festival-2016'

'ದಸರಾ' ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭ ಹಾಗೂ ಸಿನಿಮೋತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ, ದಸರಾ ಚಲನಚಿತ್ರೋತ್ಸವ ಸಮಿತಿಯ ಉಪವಿಶೇಷಧಿಕಾರಿ, ಕಾರ್ಯಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕೋರಿದ್ದಾರೆ.

English summary
'Dasara film festival-2016': More than 90 Kannada and English films will be screened in three theatres in the city as part of Dasara. 5 days Dasara film festival begin from October 2nd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada