For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ಕನ್ನಡ ನಟ ಯಾರು?

  |

  ಇದು ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಯುಗ. ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದಂತೆ ಬಹುತೇಕ ವಿಷಯಗಳು ಇಲ್ಲಿಯೇ ಸಿಗುತ್ತದೆ. ಬೇರೆ ಇಂಡಸ್ಟ್ರಿಗೆ ಹೋಲಿಸಿಕೊಂಡರೆ ಕನ್ನಡ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಟ್ವಿಟ್ಟರ್‌ನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾರೆ.

  ಪ್ರಸ್ತುತ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ನಟ ಯಾರು ಎಂದು ತಿಳಿಯುವುದು ಕುತೂಹಲದ ವಿಷಯ. ಅದಕ್ಕೆ ಉತ್ತರ ಇಲ್ಲಿದೆ. ಸ್ಯಾಂಡಲ್‌ವುಡ್ ಪಾಲಿಗೆ ಕಿಚ್ಚ ಸುದೀಪ್ ಅತಿ ಹೆಚ್ಚು ಟ್ವಿಟ್ಟರ್‌ ಫಾಲೋವರ್ಸ್ ಹೊಂದಿದ್ದಾರೆ. ಸುದೀಪ್ ಬಳಿಕ ಯಾರಿಗೆ ಹೆಚ್ಚು ಅನುಯಾಯಿಗಳು ಇದ್ದಾರೆ ಎಂದು ಮುಂದೆ ಓದಿ...

  ಸುದೀಪ್‌ಗೆ 2.4 ಮಿಲಿಯನ್ ಫಾಲೋವರ್ಸ್

  ಸುದೀಪ್‌ಗೆ 2.4 ಮಿಲಿಯನ್ ಫಾಲೋವರ್ಸ್

  ಕನ್ನಡ ಚಿತ್ರರಂಗದ ಪಾಲಿಗೆ ಸುದೀಪ್ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿದ್ದಾರೆ. ಪ್ರಸ್ತುತ ಒಟ್ಟು 2.4 ಮಿಲಿಯನ್ ಅನುಯಾಯಿಗಳು ಸುದೀಪ್ ಅವರನ್ನು ಹಿಂಬಾಲಿಸುತ್ತಿದ್ದಾರೆ. ಸುದೀಪ್ ಸಹ 86 ಜನರನ್ನು ಫಾಲೋ ಮಾಡುತ್ತಿದ್ದಾರೆ.

  ಟಾಪ್ 50 ಮೋಸ್ಟ್ ಡಿಸೈರಬಲ್ ಮ್ಯಾನ್: ಕನ್ನಡದವರು ಒಬ್ಬರೇ, ಎಷ್ಟನೇ ಸ್ಥಾನಟಾಪ್ 50 ಮೋಸ್ಟ್ ಡಿಸೈರಬಲ್ ಮ್ಯಾನ್: ಕನ್ನಡದವರು ಒಬ್ಬರೇ, ಎಷ್ಟನೇ ಸ್ಥಾನ

  ಉಪ್ಪಿಗೂ ಹೆಚ್ಚು ಫಾಲೋವರ್ಸ್

  ಉಪ್ಪಿಗೂ ಹೆಚ್ಚು ಫಾಲೋವರ್ಸ್

  ಸುದೀಪ್ ನಂತರ ಉಪೇಂದ್ರ ಅವರಿಗೆ ಹೆಚ್ಚು ಟ್ವಿಟ್ಟರ್ ಹಿಂಬಾಲಕರಿದ್ದಾರೆ. ಸದ್ಯ ಉಪ್ಪಿ 940.2K ಫಾಲೋವರ್ಸ್ ಹೊಂದಿದ್ದಾರೆ. ರಿಯಲ್ ಸ್ಟಾರ್ 49 ಜನರನ್ನು ಹಿಂಬಾಲಿಸುತ್ತಿದ್ದಾರೆ. ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಆಕ್ಟಿವ್ ಆಗಿರುವ ಉಪ್ಪಿ ಟ್ವಿಟ್ಟರ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ತೆಲುಗು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.

  ಡಿ ಬಾಸ್ ಹಿಂಬಾಲಕರು ಎಷ್ಟು?

  ಡಿ ಬಾಸ್ ಹಿಂಬಾಲಕರು ಎಷ್ಟು?

  ಕರ್ನಾಟಕದ ಪಾಲಿಗೆ ಅತಿ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ನಟ ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ 782.6k ಹಿಂಬಾಲಕರನ್ನು ಹೊಂದಿದ್ದಾರೆ. ಆದರೆ, ಡಿ ಬಾಸ್ 47 ಜನರನ್ನು ಫಾಲೋ ಮಾಡುತ್ತಿದ್ದಾರೆ.

  ಜಗ್ಗೇಶ್ ಹಿಂಬಾಲಕರು ಎಷ್ಟು?

  ಜಗ್ಗೇಶ್ ಹಿಂಬಾಲಕರು ಎಷ್ಟು?

  ಟ್ವಿಟ್ಟರ್‌ನಲ್ಲಿ ಸದಾ ಸಕ್ರಿಯರಾಗಿರುವ ನಟ ಜಗ್ಗೇಶ್ ಅವರಿಗೆ 616.7K ಹಿಂಬಾಲಕರಿದ್ದಾರೆ. ಆದರೆ, ಜಗ್ಗೇಶ್ ಅವರು ಫಾಲೋ ಮಾಡುತ್ತಿರುವುದು ಕೇವಲ 10 ಜನರನ್ನು ಮಾತ್ರ. ವಿಶೇಷ ಅಂದ್ರೆ ಪ್ರಧಾನಿ ಮೋದಿ ಮತ್ತು ಪತ್ನಿ ಪರಿಮಳ ಜಗ್ಗೇಶ್ ಇಬ್ಬರನ್ನು ಮಾತ್ರ ಹಿಂಬಾಲಿಸುತ್ತಿದ್ದಾರೆ. ಉಳಿದ ಎಲ್ಲವೂ ಫ್ಯಾನ್ಸ್ ಖಾತೆಗಳು.

  ರಾಕಿಂಗ್ ಸ್ಟಾರ್ ಯಶ್

  ರಾಕಿಂಗ್ ಸ್ಟಾರ್ ಯಶ್

  ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆದ ರಾಕಿಂಗ್ ಸ್ಟಾರ್ ಯಶ್ ತಮ್ಮ ಅಭಿಮಾನಿ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇದರ ಪರಿಣಾಮ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಲ್ಲೂ ಹಿಂಬಾಲಕರ ಸಂಖ್ಯೆ ಹೆಚ್ಚಾಗಿದೆ. ಸದ್ಯ, ಯಶ್ ಅವರ ಟ್ವಿಟ್ಟರ್ ಖಾತೆಯಲ್ಲಿ 523.1K ಫಾಲೋವರ್ಸ್ ಹೊಂದಿದ್ದಾರೆ.

  English summary
  Who is the Most followed sandalwood actors on twitter. jaggesh said thanks to fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X