»   » ಕಳೆದ ವಾರ 'ಸ್ಯಾಂಡಲ್ ವುಡ್'ನಲ್ಲಿ ಸದ್ದು ಮಾಡಿದ ವಿಷ್ಯಗಳು

ಕಳೆದ ವಾರ 'ಸ್ಯಾಂಡಲ್ ವುಡ್'ನಲ್ಲಿ ಸದ್ದು ಮಾಡಿದ ವಿಷ್ಯಗಳು

By Bharath Kumar
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಳೆದ ವಾರ ಸಿನಿ ದುನಿಯಾದಲ್ಲಿ ಹಲವು ಇಂಟ್ರೆಸ್ಟಿಂಗ್ ವಿಷ್ಯಗಳು ನಡೆದಿದೆ. ಸ್ಯಾಂಡಲ್ ವುಡ್ ನಲ್ಲಿ ವಿವಾದ, ಖುಷಿ ಹಾಗೂ ಬೇಜಾರಿನ ಸಂಗತಿಯೂ ಆಗಿದೆ. ಇಂತಹ ಕೆಲವು ವಿಷ್ಯಗಳನ್ನ ಕಳೆದ ವಾರ ನೀವು ಮಿಸ್ ಮಾಡಿಕೊಂಡಿರಬಹುದು.

  ತೆಲುಗಿನ ಮಿಲ್ಕಿ ಬ್ಯೂಟಿ ತಮನ್ನಾ ಎರಡನೇ ಬಾರಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ನಿರ್ದೇಶಕರ ಕಮಿಟ್ ಮೆಂಟ್ ನಾನು ಒಪ್ಪಲಿಲ್ಲ ಎಂದು ಸಿನಿಮಾದಿಂದ ಡ್ರಾಪ್ ಮಾಡಿದ್ದಾರೆ ಎಂದು ಬಿಗ್ ಬಾಸ್ ಖ್ಯಾತಿಯ ನಟಿ ಆರೋಪ ಮಾಡಿದ್ದರು. ತಮಿಳುನಾಡಿನ ಖ್ಯಾತ ಬರಹಗಾರ ಎಂ ಕರುಣಾನಿಧಿ ನಿಧನ.

  ಒಂದೇ ವಾರದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದೆ. ರಕ್ಷಿತ್ ಶೆಟ್ಟಿಯ ನೋ ಪಾರ್ಕಿಂಗ್ ವಿವಾದಕ್ಕೆ ಟ್ವಿಸ್ಟ್. ಕನ್ನಡಕ್ಕೆ 'ಮಾಲ್ಗುಡಿ ಡೇಸ್' ಬರಲಿ...ಇದೆಲ್ಲ ಕಳೆದ ವಾರ ಸದ್ದು ಮಾಡಿದ ಪ್ರಮುಖ ಸುದ್ದಿಗಳು. ಒಂದು ವೇಳೆ ನೀವು ಮಿಸ್ ಮಾಡಿಕೊಂಡಿದ್ದರೇ ಈ ಸ್ಟೋರಿ ಓದಿ....ಎಲ್ಲ ಸುದ್ದಿಗಳು ಒಂದೆಡೆ ಇದೆ....

  'ಕೆಜಿಎಫ್' ಹಾಡಿನಲ್ಲಿ ತಮನ್ನಾ

  ರಾಕಿಂಗ್ ಸ್ಟಾರ್ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಹಾಡೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಹೆಜ್ಜೆ ಹಾಕಿದ್ದಾರೆ. 1970 ರಲ್ಲಿ ತೆರೆಕಂಡ ಡಾ.ರಾಜ್ ಕುಮಾರ್ ಅಭಿನಯದ ಸೂಪರ್ ಡ್ಯೂಪರ್ ಹಿಟ್ 'ಪರೋಪಕಾರಿ' ಚಿತ್ರದ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡನ್ನ ರಿಮಿಕ್ಸ್ ಮಾಡಿದ್ದು, ಈ ಹೊಸ ರೂಪದ ಹಾಡಿಗೆ ಮಿಲ್ಕಿ ಬ್ಯೂಟಿ ತಮನ್ನಾ ಬಳ್ಳಿಯಂತೆ ಬಳುಕಿದ್ದಾರೆ.

  ಅಂದು ವಿಜಯಲಲಿತಾ, ಇಂದು ತಮನ್ನಾ: ಜೋಕೆ.. ಇದು 'ಕೆಜಿಎಫ್' ಮಿಂಚು.!

  'ಕರುಣಾನಿಧಿ' ಅವರನ್ನ ಕಳೆದುಕೊಂಡ ತಮಿಳುನಾಡು

  ತಮಿಳು ಸಿನಿರಂಗ ಕಂಡ ಶ್ರೇಷ್ಠ ಬರಹಗಾರ ಕರುಣಾನಿಧಿ ಅವರನ್ನ ಕಳೆದುಕೊಳ್ಳಬೇಕಾಯಿತು. ಆಗಸ್ಟ್ 7 ರಂದು ಸಂಜೆ ಚೆನ್ನೈ ಆಸ್ಪತ್ರೆಯಲ್ಲಿ ಕರುಣಾನಿಧಿ ವಿಧಿವಶರಾದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯಾಗಿದ್ದ ಅವರು ತಮಿಳು ಚಿತ್ರರಂಗದ ಸಾಹಿತ್ಯ ಲೋಕಕ್ಕೆ ಹೆಚ್ಚು ಕೊಡುಗೆ ನೀಡಿದ್ದರು. ಸುಮಾರು 60 ಕ್ಕೂ ಅಧಿಕ ಚಿತ್ರಗಳಿಗೆ ಕಥೆ ಮತ್ತು ಚಿತ್ರಕಥೆ ಬರೆದಿದ್ದರು.

  ತಮಿಳು ಚಿತ್ರರಂಗದ ದಿಕ್ಕು ಬದಲಿಸಿದ್ದೇ ಕರುಣಾನಿಧಿಯ 'ಕ್ರಾಂತಿಕಾರಿ' ಬರಹ

  ಹತ್ತು ಸಿನಿಮಾ ರಿಲೀಸ್

  ಕಳೆದ ಶುಕ್ರವಾರ ಕನ್ನಡದಲ್ಲಿ ಹತ್ತು ಸಿನಿಮಾ ಬಿಡುಗಡೆಯಾಗಿದೆ. ಪಾದರಸ, ಲೌಡ್ ಸ್ಪೀಕರ್, ಪುಟ್ಟರಾಜು ಲವರ್ ಆಫ್ ಶಶಿಕಲಾ, ಅತಂತ್ರ, ಹೊಸ ಕ್ಲೈಮಾಕ್ಸ್, ಅಭಿಸಾರಿಕೆ, ವಂದನ, ಕತ್ತಲೆ ಕೋಣೆ, ರಾಮರಾಜ್ಯ, ಜ್ಯೋತಿ ಬಾಯಿಪುಲೇ ಚಿತ್ರಗಳು ಥಿಯೇಟರ್ ಗೆ ಬಂದಿವೆ. ಇದು ಅಚ್ಚರಿ ಆದ್ರು ನಿಜ.

  ಈ ವಾರ ಸಿನಿಮಾ ನೋಡ್ಬೇಕು ಅಂದುಕೊಂಡವರಿಗೆ ದೊಡ್ಡ ಚಾಲೆಂಜ್ ಇದು

  'ಮಾಲ್ಗುಡಿ ಡೇಸ್' ಕನ್ನಡಕ್ಕೆ.?

  ದೂರದರ್ಶನದಲ್ಲಿ ಪ್ರಸಾರವಾಗಿದ್ದ 'ಮಾಲ್ಗುಡಿ ಡೇಸ್' ಧಾರಾವಾಹಿ ಕನ್ನಡಕ್ಕೆ ಡಬ್ ಆಗಬೇಕು ಎಂಬ ಅಭಿಯಾನ ಇತ್ತೀಚೆಗಷ್ಟೇ ಟ್ವಿಟ್ಟರ್ ನಲ್ಲಿ ನಡೆದಿತ್ತು. ಅನೇಕ ಕನ್ನಡಿಗರು ಈ ಅಭಿಯಾನದಲ್ಲಿ ಪಾಲ್ಗೊಂಡು, ಬೆಂಬಲ ಸೂಚಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

  'ಮಾಲ್ಗುಡಿ ಡೇಸ್' ಕನ್ನಡಕ್ಕೆ ಬರುವುದು ಬಿಡುವುದು ಕನ್ನಡ ವಾಹಿನಿಗಳ ಕೈಯಲ್ಲಿದೆ.!

  ನೋ ಪಾರ್ಕಿಂಗ್ ವಿವಾದದಲ್ಲಿ ರಕ್ಷಿತ್

  ನಟ ರಕ್ಷಿತ್ ಶೆಟ್ಟಿ ಕಾರ್ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿದೆ ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ. ಚಾಲಕನಿಗೆ ಹಲವು ಬಾರಿ ಹೇಳಿದ್ರು ನೋ ಪಾರ್ಕಿಂಗ್ ನಿಂದ ಕಾರು ತೆಗೆದಿಲ್ಲ ಎಂದು ಟೆಕ್ಕಿ ಧನಂಜಯ ಎಂಬುವರಿಂದ ಟ್ವೀಟ್ ಮಾಡಿದ್ದಾರೆ. ನೋ ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರ್ ರಕ್ಷಿತ್ ಶೆಟ್ಟಿ ಹೆಸರಿನಲ್ಲಿದೆ. ಆದರೆ ಈ ಕಾರ್ ಅನ್ನು ನಾನು ಬಳಸುತ್ತಿಲ್ಲ ಎನ್ನುವುದಾಗಿ ರಕ್ಷಿತ್ ತಿಳಿಸಿದ್ದಾರೆ. 'ಕಿರಿಕ್ ಪಾರ್ಟಿ' ಸಿನಿಮಾ ಆದ ನಂತರ ರಕ್ಷಿತ್ ಕಾರನ್ನು ರಿಷಬ್ ಬಳಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಿಷಬ್ ಶೆಟ್ಟಿ ಇನ್ನು ಮುಂದೆ ಈ ರೀತಿ ಆಗುವುದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಇದು ಕಳೆದ ವಾರ ಹೆಚ್ಚು ಸುದ್ದಿ ಮಾಡಿತ್ತು

  ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದ್ದಕ್ಕೆ ರಕ್ಷಿತ್ ಶೆಟ್ಟಿಗೆ ಟೆಕ್ಕಿಯಿಂದ ಪಾಠ

  ಬಿಗ್ ಬಾಸ್ ಜಯಶ್ರೀಯ ವಿವಾದ

  ''ನಟ ನಟಿಯರು' ಚಿತ್ರದಿಂದ ಏಕಾಏಕಿ ನನ್ನನ್ನ ಕಿಕ್ ಔಟ್ ಮಾಡಿದ್ದಾರೆ'' ಎಂದು 'ಬಿಗ್ ಬಾಸ್' ಖ್ಯಾತಿಯ ಜಯಶ್ರೀ ರಾಮಯ್ಯ ನಿರ್ದೇಶಕ ಮಂಜು ಹೆಬ್ಬೂರ್ ವಿರುದ್ಧ ಆರೋಪ ಮಾಡಿದ್ದರು. ''ಡ್ರಿಂಕ್ಸ್ ಮಾಡಲು ಹೋಗೋಣ.. ಲಾಂಗ್ ಡ್ರೈವ್ ಗೆ ಹೋಗೋಣ'' ಅಂತೆಲ್ಲಾ ನನ್ನನ್ನ ಕೇಳಿದ್ರು. ಆದ್ರೆ, ನಾನು ಯಾವುದಕ್ಕೂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ನನ್ನನ್ನ ಚಿತ್ರದಿಂದ ಕಿತ್ತು ಹಾಕಿದ್ದಾರೆ'' ಅಂತ ಜಯಶ್ರೀ ರಾಮಯ್ಯ ಹೇಳಿ ಸಂಚಲನ ಸೃಷ್ಟಿಸಿದ್ದರು.

  ಜಯಶ್ರೀ 'ಹೀಗೆ' ಮಾಡ್ಲಿಲ್ಲ ಅಂತ ಸಿನಿಮಾದಿಂದ ಕಿತ್ತು ಹಾಕಿದ್ರಾ.?

  English summary
  Kannada actor Rakshit shetty no parking controversy, bigg boss fame jayashree controversy, malgudi days in kannada, m karunanidhi death, tamanna dance for kgf movie...these are the trending topics of sandalwood in last week.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more