»   » ಸಿನೆಮಾ ತಾರೆ ತ್ರಿಷಾ ಕೃಷ್ಣನ್ ತಂದೆ ಹಠಾತ್ ನಿಧನ

ಸಿನೆಮಾ ತಾರೆ ತ್ರಿಷಾ ಕೃಷ್ಣನ್ ತಂದೆ ಹಠಾತ್ ನಿಧನ

By: ಶಂಕರ್, ಚೆನ್ನೈ
Subscribe to Filmibeat Kannada
Actress Trisha Krishnan
ದಕ್ಷಿಣ ಭಾರತದ ಖ್ಯಾತ ತಾರೆ ತ್ರಿಷಾ ಅವರ ತಂದೆ ಕೃಷ್ಣನ್ ಗುರುವಾರ (ಅ.18) ಹೈದರಾಬಾದ್ ನಲ್ಲಿ ಕಣ್ಮುಚ್ಚಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಹಠಾತ್ ಸಾವಪ್ಪಿದ್ದಾರೆ.

ಪಂಚತಾರಾ ಹೋಟೆಲ್ ಒಂದರಲ್ಲಿ ಕೃಷ್ಣನ್ ಅವರು ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಹೋಟೆಲ್ ನಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೆ ಅವರನ್ನು ಹೈದರಾಬಾದಿನ ಯಶೋಧ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಈ ಸಂದರ್ಭದಲ್ಲಿ ತ್ರಿಷಾ ಹಾಗೂ ಅವರ ತಾಯಿ ಉಮಾ ಕೃಷ್ಣನ್ ಅವರು ಚೆನ್ನೈನಲ್ಲಿದ್ದರು. ಅವರಿಗೆ ಸುದ್ದಿ ಮುಟ್ಟಿಸಿದ ಕೂಡಲೆ ಅವರು ಹೈದರಾಬಾದಿಗೆ ಆಗಮಿಸಿದ್ದಾರೆ. ತಂದೆಯವರ ಶಾಕ್ ನಿಂದ ತಾರೆ ತ್ರಿಷಾ ಇನ್ನೂ ಹೊರಬಂದಿಲ್ಲ.

ಅವರ ಅಂತಿಮಸಂಸ್ಕಾರ ಚೆನ್ನೈನಲ್ಲಿ ನಡೆಯುತ್ತದೋ ಅಥವಾ ಹೈದರಾಬಾದಿನಲ್ಲೇ ನಿರ್ವಹಿಸುತ್ತಾರೋ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಕೃಷ್ಣನ್ ಅವರ ಹಠಾತ್ ನಿಧನಕ್ಕೆ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಅತೀವ ಸಂತಾಪ ವ್ಯಕ್ತವಾಗಿದೆ. (ಏಜೆನ್ಸೀಸ್)

English summary
Actress Trisha Krishnan's father Krishnan aged 66 passed away on Thursday (October 18). He suffered a cardiac arrest before breathing his last in Hyderabad.
Please Wait while comments are loading...